ಡೊಂಬರಾಟ ತುಳು ಚಲನಚಿತ್ರ ಸಪ್ಟೆಂಬರ್ 15 ರಂದು ಬಿಡುಗಡೆ

Spread the love

ಡೊಂಬರಾಟ ತುಳು ಚಲನಚಿತ್ರ ಸಪ್ಟೆಂಬರ್ 15 ರಂದು ಬಿಡುಗಡೆ

ಮಂಗಳೂರು: ಬ್ರಹ್ಮಾವರ ಮೂವೀಸ್ ನಿರ್ಮಾಣದ ಹಲವು ವಿಶೇಷತೆಯನ್ನೊಳಗೊಂಡಿರುವ ‘ಡೊಂಬರಾಟ’ ತುಳು ಚಲನಚಿತ್ರ ಸಪ್ಟೆಂಬರ್ 15 ರಂದು ಕರ್ನಾಟಕ ರಾಜ್ಯಾದಂತ 100 ಚಲನಚಿತ್ರ ಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ತುಳು ಸಿನೆಮಾ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 100 ಚಲನಚಿತ್ರ ಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆ ಗೊಳ್ಳುತ್ತಿರುವ ಡೊಂಬರಾಟ ಹಲವಾರು ಪ್ರಥಮಗಳನ್ನು ಹೊಂದಿರುವುದು ವಿಶೇಷವಾಗಿದೆ. 1000 ಕಲಾವಿದರ ನೃತ್ಯ ಸಂಗೀತ, ಕನ್ನಡದ ಖ್ಯಾತ ಚಿತ್ರನಟರಾದ ಉಪೇಂದ್ರ, ಮುರಳಿಯವರು ಮೊತ್ತಮೊದಲು ಹಾಡಿರುವ ಹಾಡು (ತುಳುವಿನಲ್ಲಿ) ಇದಾಗಿರುತ್ತದೆ.

dombarata

ಕಿರುತೆರೆ ಧಾರವಾಹಿ ‘ಅಗ್ನಿಸಾಕ್ಷಿ’ಯ ಹೆಸರಾಂತ ನಟ ಕಿಶೋರ್ ಮಂಗಳೂರಿನ ಮಣ್ಣಿನಮಗ ಅಮಿತ್ ನಾಯಕ ನಟನಾಗಿದ್ದು ಭವ್ಯ, ಪೂಜಾಶೆಟ್ಟಿ, ನೀಮಾ ನಾಯಕಿಯಾಗಿದ್ದು ಮುಖ್ಯ ಕಲಾವಿದರಾಗಿ ಅರವಿಂದ ಬೋಳಾರ್, ಉಮೇಶ್ ಮಿಜಾರ್, ರಘು ಪಾಂಡೇಶ್ವರ್, ಶರತ್ ಕದ್ರಿ, ರಂಜನ್ ಬೋಳಾರ್, ಪ್ರತಿಮಾ ನಾಯಕ್, ರಂಜಿತ್ ಶೇಟ್ ನಟಿಸಿರುವ ಈ ಚಿತ್ರದ ಸಂಗೀತವನ್ನು ಪ್ರಕಾಶ್ ಮಧುರ, ಎಲ್. ಎನ್. ಶಾಸ್ತ್ರಿ ಮಾಡಿದ್ದಾರೆ. ಕುಡ್ಲ ಸಾಯಿಕೃಷ್ಣ – ಸಾಹಿತ್ಯ ರಚಿಸಿದ್ದಾರೆ. ಹಾಗೂ ಕೀರ್ತನ್ ಭಂಡಾರಿ. ನಿರ್ದೇಶನ: ರಂಜಿತ್ ಸುವರ್ಣ, ಸತೀಶ್ ಬ್ರಹ್ಮಾವರ, ರಾಜೇಶ್ ಕುಡ್ಲ ಪೆÇ್ರಡಕ್ಷನ್ ಮೆನೇಜರ್ ಆಗಿದ್ದಾರೆ.

ಹಲವು ಪ್ರಥಮಗಳನ್ನು ಹೊಂದಿರುವ ‘ಡೊಂಬರಾಟ’ ತುಳು ಸಿನೆಮಾ ಇತಿಹಾಸದಲ್ಲಿ ನೂತನ ದಾಖಲೆ ಮಾಡುವ ಯೋಜನೆಯಲ್ಲಿದೆ ಎಂದು ನಿರ್ಮಾಪಕರಾದ ರಾಜೇಶ್ ಬ್ರಹ್ಮಾವರ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯ ಹಾಗೂ ವಿದೇಶದಲ್ಲೂ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.


Spread the love