ತಂಬಾಕು ಉತ್ಪನ್ನ ಮಾರಾಟ- ದಾಳಿ

Spread the love

ತಂಬಾಕು ಉತ್ಪನ್ನ ಮಾರಾಟ- ದಾಳಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ COTPA 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ಕುಂದಾಪುರ ತಾಲೂಕಿನ ಸಿದ್ದಾಪುರ ಪೇಟೆ ಪ್ರದೇಶಗಳಲ್ಲಿ ವಿವಿಧ ತಂಬಾಕು ಮಾರಾಟದ ಅಂಗಡಿಗಳು ಹೋಟೇಲ್‍ಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 34 ಪ್ರಕರಣ ದಾಖಲಿಸಿ ರೂ. 6100/- ದಂಡ ವಸೂಲಿ ಮಾಡಲಾಗಿದೆ. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು.

ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ. ವಾಸುದೇವ , ತಾಲೂಕು ಆರೋಗ್ಯಾಧಿಕಾರಿ ಪ್ರಭಾರ ಡಾ. ಉಮೇಶ್ ನಾಯಕ್, ಜಿಲ್ಲಾ ಎನ್.ಸಿ.ಡಿ.ಘಟಕದ ಜಿಲ್ಲಾ ಪ್ರೋಗ್ರಾಮ್ ಕೋ ಆರ್ಡಿನೇಟರ್ ಡಾ. ಆದರ್ಶ್ ವರ್ಗೀಸ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಆನಂದ ಗೌಡ , ಹಿರಿಯ ಆರೋಗ್ಯ ಸಹಾಯಕ ಸದಾನಂದ ಹೆಬ್ಬಾರ್ , ಶಿಕ್ಷಣ ಇಲಾಖೆಯ ದತ್ತಾತ್ರೇಯ ಹೆಚ್ ನಾಯಕ್ , ಕಾರ್ಮಿಕ ಇಲಾಖೆಯ ಡಿ.ಎಸ್ ಸತ್ಯನಾರಾÀಯಣ, ಕಿರಿಯ ಆರೋಗ್ಯ ಸಹಾಯಕ ಶಿವಕುಮಾರ್ , ಶಂಕರನಾರಾಯಣ ಗ್ರಾಮೀಣ ಪೋಲೀಸ್ ಠಾಣೆಯ ಸಹಾಯಕ ಉಪನಿರೀಕ್ಷರು ಶುಭಕರ್ ಮತ್ತು ಪೋಲೀಸ್ ಕಾನ್‍ಸ್ಟೇಬಲ್ ಅರುಣ್ ಕುಮಾರ್ ಶೆಟ್ಟಿ ಮತ್ತು ವಾಹನ ಚಾಲಕರಾದ ಶುಭಾಷ್ ಮತ್ತು ಸತೀಶ್ ಉಪಸ್ಥಿತರಿದ್ದರು.


Spread the love