ತ್ರಿವಳಿ ತಲಾಖ್ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ; ಜೋಯ್ಲಸ್ ಡಿ’ಸೋಜಾ

Spread the love

ತ್ರಿವಳಿ ತಲಾಖ್ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ; ಜೋಯ್ಲಸ್ ಡಿ’ಸೋಜಾ

ಮಂಗಳೂರು: ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯಕ್ಕೆ ಮಾರಕವಾಗಿದ್ದು ತ್ರಿವಳಿ ತಲಾಖ್ ಹೆಸರಿನಲ್ಲಿ 1400 ವರ್ಷಗಳ ಕಾಲದಿಂದ ನಡೆದು ಬಂದಿದ್ದ ಸಾಮಾಜಿಕ ಪಿಡುಗಿಗೆ ಪೂರ್ಣವಿರಾಮ ಬಿದ್ದಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ದ.ಕ.ಜಿಲ್ಲಾಧ್ಯಕ್ಷ ಜೋಯ್ಲಸ್ ಡಿ’ಸೋಜಾ ತಿಳಿಸಿದ್ದಾರೆ .

 ದೇಶದ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್‍ನ್ನು ಸಂವಿಧಾನ ಮತ್ತು ಧರ್ಮ ವಿರೋಧಿ ಎಂದು ಮಹತ್ತರ ತೀರ್ಪ ನೀಡಿರುವುದರಿಂದ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 71 ವರ್ಷ ಕಳೆದರೂ ಮುಸ್ಲಿಂ ಮಹಿಳೆಯರ ಪಾಲಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ಪದ್ದತಿ ಕೊನೆಗೂ ಅಂತ್ಯವಾಗಿದೆ.

 ಈ ಐತಿಹಾಸಿಕ ಮತ್ತು ಚಾರಿತ್ರಿಕ ನಿರ್ಧಾರದಿಂದ ಇಡೀ ದೇಶದ 125 ಕೋಟಿ ಜನರ ಗೌರವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಶತಮಾನಗಳಿಂದ ಈ ದೇಶದ ಮುಸಲ್ಮಾನ ತಾಯಂದಿರು ಆತಂಕದಿಂದ ಬದುಕುವ ಸ್ಥಿತಿಯಿತ್ತು. ಮದುವೆಯಾಗಿ ಮಕ್ಕಳಾದ ಮೇಲೂ ಬೀದಿಗೆ ಬೀಳುವ ಭಯವಿತ್ತು.

 ಹೀಗಿರುವಾಗ ತ್ರಿವಳಿ ತಲಾಖ್ ಪದ್ಧತಿ ಸಂವಿದಾನ ವಿರೋಧಿ ಎನ್ನುವುದನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಸೂಕ್ತ ಕಾನೂನು ರೂಪಿಸುವಂತೆ ಹೇಳಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸೂಕ್ತ ಕಾನೂನು ರೂಪಿಸಲು ನಾವೆಲ್ಲಾ ಸೇರಿ ಶಕ್ತಿ ತುಂಬಬೇಕಿದೆ.

 ಶ್ರೀ ನರೇಂದ್ರ ಮೋದಿ ಅವರು ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ಬದ್ಧ ಹಾಗೂ ತ್ರಿವಳಿ ತಲಾಖ್‍ನಂತಹ ಸಾಮಾಜಿಕ ಪಿಡುಗಿನಿಂದ ಮಹಿಳೆಯರ ರಕ್ಷಣೆಯ ವಚನ ನೀಡಿದ್ದನ್ನು ಪೂರೈಸಿದ್ದಾರೆ. ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರಗಳು ರಾಜಕೀಯ ಹಿತಾಸಕ್ತಿಗಾಗಿ ಮಹಿಳೆಯರ ಮೇಲೆ ತ್ರಿವಳಿ ತಲಾಖ್ ಮೂಲಕ ನಡೆಯುತ್ತಿದ್ದ ದೌರ್ಜನ್ಯವನ್ನು ಎದುರಿಸಲಿಲ್ಲ.

 ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಈ ಸಮಾಜ ವಿರೋಧಿ ತ್ರಿವಳಿ ತಲಾಖ್ ಪದ್ದತಿಯ ವಿರುದ್ದ ಎತ್ತಿದ ದಿಟ್ಟ ಹೆಜ್ಜೆ ಮತ್ತು ಸುಪ್ರೀಂ ಕೋರ್ಟ್‍ನ ಮಹತ್ವದ ತೀರ್ಪನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ದ.ಕ.ಜಿಲ್ಲಾಧ್ಯಕ್ಷ ಜೋಯ್ಲಸ್ ಡಿ’ಸೋಜಾ ಅವರು ಸ್ವಾಗತಿಸಿದ್ದಾರೆ.


Spread the love