ನಕಲಿ ದಾಖಲೆಗಳ ಮೂಲಕ ಲಕ್ಷಾಂತರ ರೂ. ವಂಚನೆ ಮಣಿಪಾಲ:

Spread the love

ನಕಲಿ ದಾಖಲೆಗಳ ಮೂಲಕ ಲಕ್ಷಾಂತರ ರೂ. ವಂಚನೆ

ಮಣಿಪಾಲ: ಮುಂಬಯಿಯಲ್ಲಿ ಈಗಾಗಲೇ ಬ್ಯಾಂಕೊಂದರಲ್ಲಿ ಅಡವಿಟ್ಟು ಸಾಲ ಮರುಪಾವತಿ ಮಾಡದೆ ಬಹಿರಂಗ ಏಲಂಗೆ ಆದೇಶವಾಗಿರುವ ಜಾಗವೊಂದನ್ನು ಮುಂಬಯಿಯ ಮೂವರು ವ್ಯಕ್ತಿಗಳು ನಕಲಿ ದಸ್ತಾವೇಜು ತಯಾರಿಸಿ ಅದರ ಮೂಲಕ ಮಣಿಪಾಲ ಟೆಕ್ನೋಲಜಿಸ್‌ ಎಂಬ ಸಂಸ್ಥೆಗೆ 95 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ವಂಚಿಸಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬಯಿ ವಾಶಿನವಿಯ ಮಹಾದೇವಿ ಶಂಕರ ಕೋಳಿ, ರಾಮಚಂದ್ರ ಶಂಕರ ಕೋಳಿ ಹಾಗೂ ರಾಜೇಶ್‌ ಚೆಡ್ಡ ಎಂಬವರು ಮಣಿಪಾಲ ಸಂಸ್ಥೆಗೆ ವಂಚಿಸಿದ ಆರೋಪಿಗಳು. ಇವರು ಈ ಮೊ¨ಲೇ ಮಂಬಯಿಯ ಮರ್ಕೆಂಟೈಲ್ಕೋ ಕೋ ಆಪರೇಟಿವ್‌ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದು ಅದನ್ನು ಮರುಪಾವತಿಸದೆ ಬಹಿರಂಗ ಏಲಂಗೆ ಆದೇಶವಾಗಿರುವ ನವಿ ಮುಂಬೈ ಎಂಐಡಿಸಿ ಎಂಬಲ್ಲಿರುವ ಪ್ಲಾಟ್‌ ನಂ.ಡಿ-207ನ್ನು ನಕಲಿ ದಾಖಲೆ ತಯಾರಿಸಿದ್ದಾರೆ. ಆರೋಪಿಗಳು ವಂಚನೆ ಮಾಡುವ ಉದ್ದೇಶದಿಂದಲೇ ಮಣಿಪಾಲದ ಶಿವಳ್ಳಿ ಗ್ರಾಮದಲ್ಲಿರುವ ಮಣಿಪಾಲ ಟೆಕ್ನೋಲಜಿ ಸಂಸ್ಥೆಗೆ ಐದು ವರ್ಷ ಅವಧಿಗೆ “ಲೀವ್‌ ಎಂಡ್‌ ಲೈಸನ್ಸ್‌ ಅಗ್ರಿ ಮೆಂಟ್‌’ ಮೂಲಕ ಮಾಡಿಕೊಟ್ಟಿದ್ದಾರೆ. ಮೂವರು ಆಪಾದಿತರು ಬೇರೆ ಬೇರೆ ದಿನಾಂಕಗಳಂದು ಒಟ್ಟು 95,07,919 ರೂ.ಪಡೆದು ಮೋಸ ಮಾಡಿದ್ದಾರೆಂದು ಸಂಸ್ಥೆಯ ಸತೀಶ್‌ ರಾವ್‌ ಎಂಬವರು ಮಣಿಪಾಲ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.


Spread the love