ನೂತನ ಜವಳಿ ನೀತಿ ಕಾರ್ಯಾಗಾರ

Spread the love

ಮಂಗಳೂರು:  ನೂತನ ಜವಳಿ ಉದ್ಯಮದಲ್ಲಿ  ಏನೆಲ್ಲ ಅವಕಾಶವಿದೆ ಎಂಬ ಮಾಹಿತಿ ಜನರಿಗೆ ಅವಶ್ಯಕವಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಚೆ ಇದ್ದಲ್ಲೀ ಹೇರಳ ಅವಕಾಶವಿದೆ. ಸರ್ಕಾರ ಜವಳಿ ಉದ್ಯಮದಲ್ಲಿ  5 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ  ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಅವರು ಇಂದು ಮಂಗಳೂರು ಕದ್ರಿ, ಲಯನ್ಸ್ ಸೇವಾ ಮಂದಿರದಲ್ಲಿ ದ.ಕ.ಕೈಮಗ್ಗ ಮತ್ತು ಜವಳಿ ಇಲಾಖೆ ದ.ಕ.ಜಿಲ್ಲೆ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ ಧಾರವಾಡ , ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರಕಾರದ ನೂತನ ಜವಳಿ ನೀತಿ 2013-18 ಕುರಿತು ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ಕರ್ನಾಟಕದ ಜವಳಿ ಮತ್ತು ಉಡುಪಿನ ಕ್ಷೇತ್ರವನ್ನು ಅಂತರರಾಷ್ಟ್ರೀಯವಾಗಿ ಸ್ಪರ್ದಾತ್ಮಕವಾದ ಹೆಚ್ಚಿನ ಮೌಲ್ಯಗಳು ಸೆರಿದ ಉತ್ಪನ್ನಗಳ ಉತ್ಪಾದಕವಗಿ ಸ್ಥಾಪಿಸುವುದು. ತನ್ಮೂಲಕ ಬೆಳೆಯುತ್ತಿರುವ ಸ್ವದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಬಲ ಅಸ್ತಿತ್ವವನ್ನು ಕಾಪಾಡಿ ಕೊಳ್ಳುವುದು ಹಾಗೂ ರಾಜ್ಯದ ಸುಸ್ಥಿರ ಉದ್ಯೋಗಾವಕಾಶ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವುದು. ಸರ್ಕಾರದ ಅದ್ಯ ಕರ್ತವ್ಯವಾಗಿದೆ. ವೈಯಕ್ತಿಕ ಹೊಸ ಘಟಕಗಳಿಗೆ  ಪ್ರೋತ್ಸಾಹಧನಗಳು ಹಾಗೂ ಸಾಲ ಸಂಪರ್ಕ ಬಂಡವಾಳ ಸಹಾಯಧನ ನೀಡಲಾಗುವುದು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎ.ಮೋಹಿಯುದ್ದೀನ್ ಬಾವಾ ಇವರು ಈ ಕಾಯಿದೆಯು ಅಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗ ಬಾರದು. ಜವಳಿ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಅಭಿವೃದ್ದಿ, ಬ್ರಾಂಡಿಂಗ್  ವಿನ್ಯಾಸದ ಅಭಿವೃದ್ದಿ, ಉತ್ಪನ್ನ ವೈವಿದ್ಯೀಕರಣ ಒಟ್ಟಾರೆಯಾಗಿ ಸಾಮಾಥ್ರ್ಯ ರಚನೆ ಅಗತ್ಯ.

ಜವಳಿಯ ವ್ಯವಸ್ಥೆಯಲ್ಲಿ ಜನರು ಹಾಗೂ ಅಧಿಕಾರಿಗಳು ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿ ಕೊಳ್ಳಬೇಕು ಹಗೂ ಇದರ ಉಪಯೋಗವನ್ನು ಪಡೆದು ಕೊಳ್ಳಬೇಕು. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕ ಕೇಂದ್ರದ ಉಪ ನಿರ್ದೇಶಕ ಅರವಿಂದ.ಡಿ.ಬಾಳೇರಿ, ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ ಬಾವಿಕಟ್ಟೆ ಉಪಸ್ಥಿತರಿದ್ದರು.


Spread the love