ಪಾಲಿಕೆಯಲ್ಲಿ ಅಧಿಕಾರಿಗಳ ಕೊರತೆಯಿಂದ ನೀರಿನ ತೊಂದರೆ -ಶಾಸಕ ಕಾಮತ್

Spread the love

ಪಾಲಿಕೆಯಲ್ಲಿ ಅಧಿಕಾರಿಗಳ ಕೊರತೆಯಿಂದ ನೀರಿನ ತೊಂದರೆ -ಶಾಸಕ ಕಾಮತ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೀರಿನ ವಿಭಾಗದ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ಹಾಕಿರುವುದರಿಂದ ಜನರ ನೀರಿನ ಸಮಸ್ಯೆಯನ್ನು ಪರಿಹರಿಸಲು ಪಾಲಿಕೆಯಲ್ಲಿ ಕೇಳುವವರೇ ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಎಪ್ರಿಲ್ ತಿಂಗಳು ಆರಂಭವಾಗುವಾಗಲೇ ನೀರಿನ ಸಮಸ್ಯೆ ತಾರಕಕ್ಕೆ ಏರಿದ್ದು ಅದನ್ನು ಶೀಘ್ರದಲ್ಲಿ ಪರಿಹರಿಸಲು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸೂಕ್ತ ವ್ಯವಸ್ಥೆ ಆಗಬೇಕಿತ್ತು. ಆದರೆ ನೀರಿನ ವಿಭಾಗದ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ಹಾಕಿರುವುದು ಸರಿಯಲ್ಲ.ಮಂಗಳೂರು ನಗರ ದಕ್ಷಿಣದ ಹಲವು ವಾರ್ಡ್ ಗಳಿಂದ ಜನರು ಕರೆ ಮಾಡಿ ದೂರುಕೊಡುತ್ತಿದ್ದಾರೆ.ಆದರೆ ಪಾಲಿಕೆಯಲ್ಲಿ ಕೇಳುವವರೇ ಇಲ್ಲ.ಜನರ ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್ ಗಳಲ್ಲಿ ಪೂರೈಸಲು ಕೂಡ ಪಾಲಿಕೆ ಗಮನ ಹರಿಸಬೇಕು ಎಂದು ಅವರು ಹೇಳಿದರು.


Spread the love