ಪಿಲಿಕುಳದಲ್ಲಿ ಗೈಡ್‍ಗಳಾಗಲು ಸುವರ್ಣಾವಕಾಶ

Spread the love

ಮ0ಗಳೂರು : “ಪಿಲಿಕುಳ” ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಬೆಳೆಯುತ್ತಿದೆ. ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಮತ್ಸ್ಯಾಲಯ, ಸಸ್ಯಕಾಶಿ, ಸಂಸ್ಕøತಿ ಗ್ರಾಮ ಇತ್ಯಾದಿ ವಿಭಾಗಗಳಿಗೆ ಬರುವ ಸಂದರ್ಶಕರಿಗೆ ಅಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ವಿಜ್ಞಾನದ ಮಾದರಿಗಳು, ಸಾಂಸ್ಕøತಿಕ ಮತ್ತು ಪಾರಂಪರಿಕ ಗುತ್ತುಮನೆಯ ವಸ್ತು ಸಂಗ್ರಹಾಲಯ ಮತ್ತು ಕುಶಲಕರ್ಮಿ ಗ್ರಾಮದ ಬಗ್ಗೆ ಗೈಡ್‍ಗಳಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪಿಲಿಕುಳದ ವಿವಿಧ ವಿಭಾಗಗಳಲ್ಲಿ ಮಾರ್ಗದರ್ಶಕರಾಗಿ ಕ್ರಿಯಾತ್ಮಕವಾಗಿ ಯುವಕರು ತೊಡಗಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಕಾಲೇಜು ವಿದ್ಯಾರ್ಥಿಗಳು ಮತ್ತು ಇತರ ಆಸಕ್ತರು ಪ್ರವಾಸಿಗರಿಗೆ ಇಂತಹ ಸೇವೆಯನ್ನು ನೀಡುವ ಮೂಲಕ ವಾಕ್ಚಾತುರ್ಯ ಹಾಗೂ ಸಾರ್ವಜನಿಕರೊಡನೆ ಬೆರೆಯುವ ಕೌಶಲ್ಯಗಳನ್ನು ರೂಢಿಸಿಕೊಳ್ಳಬಹುದು. ಗೈಡ್‍ಗಳಾಗಿ ಸೇವೆ ಸಲ್ಲಿಸಿದ ದಿನಗಳಂದು ಭತ್ಯೆಯನ್ನು ನೀಡಲಾಗುತ್ತದೆ. ರಜಾದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಗೈಡ್‍ಗಳಾಗಿ ಸೇವೆಸಲ್ಲಿಸಲು ಆಸಕ್ತರಿರುವ ಸುಮಾರು 20 ವರ್ಷದಿಂದ 45 ವರ್ಷದವರೆಗಿನವರಿಗೆ ಆದ್ಯತೆ ನೀಡಲಾಗುವುದು. ಪೂರ್ವಭಾವಿ ತರಬೇತಿ ನೀಡಿ ಮಾರ್ಗದರ್ಶಕರನ್ನು ಸಿದ್ಧಪಡಿಸಲಾಗುತ್ತದೆ.
ಈ ಬಗ್ಗೆ ಪಿಲಿಕುಳದ ಆಡಳಿತಾಧಿಕಾರಿ(ಮೊ:9901790670) ಅಥವಾ ಯೋಜನಾಧಿಕಾರಿ (ಮೊ:9686673237)ಯವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love

1 Comment

  1. Another golden opportunity for unemployed individuals like Praveena Pinto!! I’m sure they would relax upper age limit of 45 yrs to accommodate his unique talent and experience working with animals before!!!

Comments are closed.