ಪಿ.ಯು. ಕಾಲೇಜುಗಳಿಗೆ ಅ.25 ವರೆಗೆ ದಸರ ರಜೆ ವಿಸ್ತರಿಸಿ ಆದೇಶ

Spread the love

ಪಿ.ಯು. ಕಾಲೇಜುಗಳಿಗೆ ಅ.25 ವರೆಗೆ ದಸರ ರಜೆ ವಿಸ್ತರಿಸಿ ಆದೇಶ
ಮಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಿಕ್ಷಕರ ಪ್ರತಿನಿಧಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಮನವಿಯ ಮೇರೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳಿಗೆ ಅಕ್ಟೋಬರ್ 23 ರವರೆಗೆ ನೀಡಲಾಗಿದ್ದ ದಸರ ರಜೆಯನ್ನು ಅಕ್ಟೋಬರ್ 25 ರವರೆಗೆ ವಿಸ್ತರಣೆ ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಮನವಿಯ ಮೇರೆಗೆ ಪ್ರೌಢಶಾಲೆಗಳಿಗೆ ರಜೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪ್ರಸ್ತುತ ಪದವಿಪೂರ್ವ ಶಿಕ್ಷಣ ಇಲಾಖೆ ಈ ಕುರಿತು ಪ್ರತ್ಯೇಕ ಆದೇಶ ಹೊರಡಿಸಿದೆ.

Spread the love