ಬಂಟ್ವಾಳ ಪೋಲಿಸರಿಂದ ಗಾಂಜಾ ವ್ಯಾಪಾರಿ ಬಂಧನ

Spread the love

ಬಂಟ್ವಾಳ ಪೋಲಿಸರಿಂದ ಗಾಂಜಾ ವ್ಯಾಪಾರಿ ಬಂಧನ
ಬಂಟ್ವಾಳ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಬ್ದುಲ್ ಲತಿಫ್ ಎಂದು ಗುರುತಿಸಲಾಗಿದೆ.
ಅಬ್ದುಲ್ ಲತೀಫ್ ಗುರುವಾರ ಬೆಳಿಗ್ಗೆ 11 ಗಂಟೆಗೆ ಕೈರಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನು ಕತ್ತರಿ ಸಾಣೆ ಮಾಡುತ್ತಾ ಮನೆಮನೆಗೆ ತಿರುಗುತ್ತಾ ಗ್ರಾಮಾಂತರ ಪ್ರದೇಶದ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ.
ಗ್ರಾಮಾಂತರ ಠಾಣೆಯ ಉಪನಿರ್ದೇಶಕ ರಕ್ಷಿತ್ ಗೌಡ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದ ವೇಳೆ ಆತನ ಮೇಲೆ ಅನುಮಾನ ಉಂಟಾಗಿ ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಈತ ನಿಜವನ್ನು ಒಪ್ಪಿಕೊಂಡಿದ್ದಾನೆ.
ಜಗದೀಶ್, ಸುರೇಶ್, ಮಾಧವ, ಜನಾರ್ದನ್, ಪ್ರವೀಣ್, ಪುನೀತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧನದಲ್ಲಿರಿಸಿದ್ದಾರೆ.


Spread the love