ಬೆಳೆ ವಿಮೆಗೆ ಆದ್ಯತೆ ನೀಡಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಬೆಳೆ ವಿಮೆಗೆ ಆದ್ಯತೆ ನೀಡಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ : ಜಿಲ್ಲೆಯ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೊಂದಾವಣಿ ಮಾಡಲು ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಭತ್ತದ ಬೆಳೆಗೆ ಜೂನ್ 30 ರ ವರೆಗೆ ಮತ್ತು ತೋಟಗಾರಿಕಾ ಇಲಾಖೆಯಿಂದ ತೆಂಗು ಮತ್ತು ಕರಿಮೆಣಸು ಬೆಳೆಗೆ ಜುಲೈ 30 ರ ವರೆಗೆ ಬೆಳೆ ವಿಮೆ ನೊಂದಾವಣಿ ಅವಕಾಶವಿದ್ದು, ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯುವ ಕುರಿತಂತೆ ಎಲ್ಲಾ ಬ್ಯಾಂಕ್‍ಗಳು ಆದ್ಯತೆಯ ಮೇಲೆ ರೈತರಿಗೆ ಮಾಹಿತಿ ನೀಡಿ, ಹೆಚ್ಚಿನ ಸಂಖ್ಯೆಯ ರೈತರ ನೊಂದಾವಣಿಗೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ 2016-17 4ನೇ ತ್ರೈಮಾಸಿಕದಲ್ಲಿ 20,705 ಕೋಟಿ ರೂ ಠೇವಣಿ ಸ್ವೀಕರಿಸಿ ಶೇ.14.22 ಪ್ರಗತಿ ಸಾಧಿಸಲಾಗಿದೆ, 6338 ಕೋಟಿ ಸಾಲ ನೀಡಿ ಶೇ.97.48 ಸಾಧನೆ ಮಾಡಲಾಗಿದೆ, ಕೃಷಿ ಕ್ಷೇತ್ರಕ್ಕೆ 1,815.62 ಕೋಟಿ ರೂ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 2,140.02 ಕೋಟಿ ರೂ, 5,392 ವಿದ್ಯಾರ್ಥಿಗಳಿಗೆ 72.78 ಕೋಟಿ ವಿಧ್ಯಾಭ್ಯಾಸ ಸಾಲ, 322.64 ಕೋಟಿ ರೂ ವಸತಿ ಸಾಲ, ದುರ್ಬಲ ವರ್ಗಕ್ಕೆ 1,121.39 ಕೋಟಿ ರೂ ಗಳನ್ನು 1,05,747 ಜನರಿಗೆ ವಿತರಿಸಲಾಗಿದೆ, 21,371 ಎಸ್.ಸಿ.ಎಸ್.ಟಿ ಫಲಾನುಭವಿಗಳಿಗೆ 180.12 ಕೋಟಿ ರೂ ವಿತರಿಸಲಾಗಿದೆ, 39,638 ಅಲ್ಪ ಸಂಖ್ಯಾತರಿಗೆ 350.86 ಕೋಟಿ ವಿತರಿಸಲಾಗಿದೆ, 72.78 ಕೋಟಿ ವಿಧ್ಯಾಭ್ಯಾಸ ಸಾಲ ವಿತರಿಸಿದ್ದು, ಆಧ್ಯತಾ ವಲಯಕ್ಕೆ 5103.65 ಕೋಟಿ , ಆದ್ಯತೇತರ ವಲಯಕ್ಕೆ 1,734.35 ಕೋಟಿ ಸಾಲ ವಿತರಿಸಲಾಗಿದೆ. ಎಂದು ಸಿಂಡಿಕೇಟ್ ಬ್ಯಾಂಕ್ ನ ಡೆಪ್ಯುಟಿ ಮೆನೇಜರ್ ಎಸ್.ಎಸ್. ಹೆಗ್ಡೆ ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪ್ರಾನ್ಸಿಸ್ ಬೋರ್ಜಿಯ ಮಾತನಾಡಿ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಾರಿಗೆ ಬಂದಿರುವ ವಿವಿಧ ಯೋಜನೆಗಳ ಕುರಿತು ಎಲ್ಲಾ ಬ್ಯಾಂಕ್‍ಗಳಿಗೆ ಮಾಹಿತಿ ನೀಡಿದರು, ಜಿಲ್ಲೆಯಲ್ಲಿ ಸ್ಟ್ಯಾಂಡಪ್ ಇಂಡಿಯಾ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ ಈ ಕುರಿತು ಎಲ್ಲಾ ಬ್ಯಾಂಕ್ ಗಳು ಕ್ರಮ ಕೈಗೊಳ್ಳುವಂತೆ ಮತ್ತು ವಸತಿ ಯೋಜನೆಯಲ್ಲಿ ಪರಿಷ್ಕøತಗೊಂಡಿರುವ ಸಾಲದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಆರ್.ಬಿ.ಐ ನ ಪಟ್ನಾಯಕ್ ಉಪಸ್ಥಿತರಿದ್ದರು.


Spread the love