ಭಗವಂತನ ಸೇವೆ ನಿರಂತರವಾಗಿರಬೇಕು -ಕಾಳ ಹಸ್ತೇಂದ್ರ ಸ್ವಾಮೀಜಿ

Spread the love

ಭಗವಂತನ ಸೇವೆ ನಿರಂತರವಾಗಿರಬೇಕು -ಕಾಳ ಹಸ್ತೇಂದ್ರ ಸ್ವಾಮೀಜಿ
ಮಂಗಳೂರು : ಭಗವಂತನ ಸೇವೆ ನಿರಂತರವಾಗಿರಬೇಕು ಅಧಿಕಾರದಲ್ಲಿದ್ದಾಗ ಮಾತ್ರ ಭಗವಂತನ ಸೇವೆ ಮಾಡಿ ಅಧಿಕಾರ ಇಲ್ಲದಾಗ ಸೇವೆ ಮಾಡದಿರುವುದು ತಪ್ಪು . ನಾನು ನನ್ನಿಂದ ಎಂದು ಎನಿಸದೆ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಭಗವಂತ ನಮ್ಮನ್ನು ಅನವರತ ರಕ್ಷಿಸುತ್ತಾನೆ ಎಂದು ಶ್ರೀಮತ್ ಜಗದ್ಗುರು ಅನಂತವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮೀಜಿ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಯುಗಾದಿ ಮಹೋತ್ಸವದ ೯ನೇ ಉತ್ಸವದಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ದಲ್ಲಿ ಹೇಳಿದರು.
ಯಂ. ದುಗ್ಗಣ್ಣ ಸಾವಂತರು, ಮುಲ್ಕಿ ಸೀಮೆ ಅರಸರು  ಮುಖ್ಯ ಅಥಿತಿಯಾಗಿ ಆಗಮಿಸಿದರು.
 ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೊರಗಪ್ಪ ಆಚಾರ್ಯ (ಕೂಡುವಳಿಕೆ ಮೊಕ್ತೇಸರರು),  ಪಿ. ಸದಾಶಿವ ಆಚಾರ್ಯ (ಧಾರ್ಮಿಕ ಕ್ಷೇತ್ರ),  ಕೆ. ರುದ್ರಯ ಆಚಾರ್ಯ (ಕೂಡುವಳಿಕೆ ಮೊಕ್ತೇಸರರು) ಗಣೇಶ್ ಆಚಾರ್ಯ (ಕಾಷ್ಠ ಶಿಲ್ಪಿ),  ಸಂಜೀವ ಆಚಾರ್ಯ (ಕ್ಷೇತ್ರದ ಸಕ್ರೀಯ ಕಾರ್ಯಕರ್ತ), ಕಿನ್ಯ ಬಾಬು ಆಚಾರ್ಯ (ಕ್ಷೇತ್ರದ ಸಕ್ರೀಯ ಕಾರ್ಯಕರ್ತ), ಶಾಮರಾಯ ಆಚಾರ್ಯ, ಶ್ರೀನಿವಾಸ್ ಆಚಾರ್ಯ (ಕೂಡುವಳಿಕೆ ಮೊಕ್ತೇಸರರು), ರಾಮಾಚಾರ್ (ಉದ್ಯಮ ಕ್ಷೇತ್ರ), ಚಂದ್ರಯ್ಯ ಆಚಾರ್ಯ ,ಮುಂಬೈ (ಉದ್ಯಮ ಕ್ಷೇತ್ರ) ಎ. ಎಂ. ಜಯರಾಮ ಆಚಾರ್ಯ (ಲೋಹ ಶಿಲ್ಪಿ), ಕ್ಷೇತ್ರದ ಮಾಜಿ ಮೊಕ್ತೇಸರರಾದ ಪಿ. ಶಿವರಾಮ ಆಚಾರ್ಯ, ಪಯ್ಯಲ್ ಭಾಸ್ಕರ್ ಆಚಾರ್ಯ, ಮುನಿಯಲ್ ದಾಮೋದರ ಆಚಾರ್ಯ, ಶ್ರೀಮತಿ ಇಂದಿರಾ ಪಿ. ಆಚಾರ್ಯ (ರಾಜಕೀಯ ಕ್ಷೇತ್ರ) ಡಾ| ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ (ಗೌರವ ಡಾಕ್ಟರೇಟ್) ಹಾಗೂ ವಿಶೇಷ ಪುರಸ್ಕಾರವಾಗಿ ಕುಮಾರಿ ಬಿಂದು ಕೆ. (ಚಿತ್ರ ಕಲೆ), ಪ್ರದೀಪ್ ಆಚಾರ್ಯ  ವೆಯಿಟ್ ಲಿಫ್ಟರ್),  ಟಿ. ಎಂ. ಶ್ರವಣ್,  ಸುರತ್ಕಲ್, ಎಸ್. ಜೆ. ಶಶಾಂಕ್ ಸಿದ್ದಕಟ್ಟೆ, ಜೀವನ್ ಕದ್ರಿ, ಕುಮಾರಿ ಸಾಧಿಕ ಪಾಲ್ಕೆ, ಇವರೆಲ್ಲರಿಗೂ ನೀಡಲಾಯಿತು.
 ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮೋಕ್ತೇಸರ ಕೆ. ಕೇಶವ ಆಚಾರ್, ಮೊಕ್ತೇಸರರಾದ ಸುಂದರ ಆಚಾರ್ಯ, ಬೆಳುವಾಯಿ, ಎ. ಲೋಕೇಶ್  ಬೆಳುವಾಯಿ, ಬಿಜೈ, ಹಾಗೂ ಜೀರ್ಣಿದ್ಧಾರ ಸಮಿತಿಯ ಅಧ್ಯಕ್ಷರಾದ ಧನಂಜಯ ಪಾಲ್ಕೆ,   ಕೈಂತಿಲ ಸದಾಶಿವ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಜೀರ್ ವಿನೋದ್ ಮತ್ತು  ಪಶುಪತಿ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Spread the love