ಭರತನಾಟ್ಯದಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆ ಚೈತ್ರಾ

Spread the love

ಭರತನಾಟ್ಯದಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆ ಚೈತ್ರಾ

ಬಿ.ಶಿವಕುಮಾರ್, ವಾರ್ತಾ ಇಲಾಖೆ,ಉಡುಪಿ

ಭರತನಾಟ್ಯದಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆ ಉಡುಪಿಯ ಚೈತ್ರಾ ಪಿ.ಆರ್. ಮಣಿಪಾಲದ ಎಂ.ಪಿ.ಎಂ.ಸಿ ಕಾಲೇಜಿನಲ್ಲಿ ಬಿಸಿನೆಸ್ ಮ್ಯಾನೇಜ್‍ಮೆಂಟ್ ಪದವಿ ಪಡೆದಿದ್ದು,ಮಣಿಪಾಲದ ಕೆ.ಎಂ.ಸಿಯಲ್ಲಿ ಯೋಗ ಥೆರಪಿಯಲ್ಲಿ ಸ್ನಾತಕ ಪದವಿ ವ್ಯಾಸಾಂಗ ಮಾಡುತ್ತಿರುವ ಇವರು ರಾಘವೇಂದ್ರ ಎ ಭಟ್ ಮತ್ತು ವಾಣಿಶ್ರೀ ಆರ್ ಭಟ್ ಇವರ ಸುಪುತ್ರಿ.

bharatha-natyam-chaithra-00

ವಿದುಷಿ ಪವಿತ್ರಾ ಅಶೋಕ್ ಅವರಿಂದ ತರಬೇತಿ ಪಡಯುತ್ತಿರುವ ಇವರು ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಪದವಿ ಪಡೆದಿದ್ದು, ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಗ್ರೇಡ್ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

bharatha-natyam-chaithra-01

2008 ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೇಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. 2011 ರಲ್ಲಿ ಉಡುಪಿ ಜಯಂಟ್ಸ್ ಗ್ರೂಫ್ ನಿಂದ ನಡೆದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ದೇಯಲ್ಲಿ ಪ್ರಥಮ ಬಹುಮಾನ, ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ತೃತೀಯ ಬಹುಮಾನ, ಉಡುಪಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ನಿಂದ ನಡೆದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ದೇಯಲ್ಲಿ ದ್ವಿತೀಯ ಬಹುಮಾನ. 2011 ರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಧಾರವಾಡ ನಡೆದ ರಾಜ್ಯಮಟ್ಟದ ಕಲಾ ಪ್ರತಿಭೋತ್ವವದಲ್ಲಿ ತೃತೀಯ ಬಹುಮಾನ , 2012 ರ ಜನವರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಲಾ ಪ್ರತಿಭೋತ್ವವದಲ್ಲಿ ತೃತೀಯ ಬಹುಮಾನ , ಅದೇ ವರ್ಷ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ರಾಜ್ಯಮಟ್ಟದ ಕಲಾ ಪ್ರತಿಭೋತ್ವವದಲ್ಲಿ ಪ್ರಥಮ ಬಹುಮಾನ. 2013 ರಲ್ಲಿ ನಡೆದ ಇಂಟರ್ ಕಾಲೇಜು ಕಲ್ಚರೆಲ್ ಫೆಸ್ಟಿವಲ್ ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದು 2015 ರಲ್ಲಿ ಮಂಡ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದೊಂದಿಗೆ, ನೃತ್ಯ ಸಮ್ಮೋಹಿನಿ ಎಂಬ ಬಿರುದುನಿಂದ ಸನ್ಮಾನಿತರಾಗಿದ್ದಾರೆ.

bharatha-natyam-chaithra-02

ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಇತರೆ ಭಾಗದಲ್ಲಿಯೂ ಸಹ ತಮ್ಮ ಪ್ರದರ್ಶನದ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ತಮ್ಮ ಎಲ್ಲಾ ಸಾಧನೆಗೆ ತನ್ನ ಪೋಷಕರು ಮತ್ತು ಗುರುಗಳೇ ಕಾರಣ , ಭರತನಾಟ್ಯದಿಂದ ತನಗೆ ಆತ್ಮ ತೃಪ್ತಿ ದೊರೆತಿದೆ ಎನ್ನುತ್ತಾರೆ.

ಭರತನಾಟ್ಯ ಕ್ಷೇತ್ರದಲ್ಲಿ ಡಾಕ್ಟರೇಟ್ ಪಡೆಯುವ ಹಂಬಲ ಹೊಂದಿರುವ ಚೈತ್ರಾ, ಭರತನಾಟ್ಯ ಮಾತ್ರವಲ್ಲದೇ ಯಕ್ಷಗಾನದಲ್ಲಿ ಸಹ ಆಸಕ್ತಿಯನ್ನು ಹೊಂದಿದ್ದು, ಈಗಾಗಲೇ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದು, ಇವರ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲ್ಲಿ ಎಂಬುದು ಅಭಿಮಾನಿಗಳ ಹಾರೈಕೆ.


Spread the love