ಭಾರತದಲ್ಲಿ ಅಧಿಕ ಅಪಘಾತಗಳು ಚಾಲಕನ ನಿರ್ಲಕ್ಷತೆಯಿಂದ ಮತ್ತು ಮಿತಿಮೀರಿದ ವೇಗದಿಂದ ಉಂಟಾಗುತ್ತಿವೆ

Spread the love

ಭಾರತದಲ್ಲಿ ಅಧಿಕ ಅಪಘಾತಗಳು ಚಾಲಕನ ನಿರ್ಲಕ್ಷತೆಯಿಂದ ಮತ್ತು ಮಿತಿಮೀರಿದ ವೇಗದಿಂದ ಉಂಟಾಗುತ್ತಿವೆ’

ಮಂಗಳೂರು: ಭಾರತದಲ್ಲಿನಅಪಘಾತ ಸಂಖ್ಯೆ ಹೆಚ್ಚಳಕ್ಕೆ ಚಾಲಕನ ನಿರ್ಲಕ್ಷತೆ ಮತ್ತು ಮಿತಿಮೀರಿದ ವೇಗ ಮುಖ್ಯಕಾರಣಎಂದು ಮಂಗಳೂರು ಪಶ್ಚಿಮ ಪೋಲಿಸ್ ಠಾಣೆಯಂ.S.I. ಶ್ರೀ ಜ್ಞಾನಶೇಖರಹೇಳಿದರು.

ಡಾ.ಪಿ.ದಯಾನಂದ.ಪೈ – ಪಿ.ಸತೀಶ ಪೈ. ಸರಕಾರಿ ಪ್ರಥಮದರ್ಜೆಕಾಲೇಜು ಮಂಗಳೂರು, ರಥಬೀದಿಯಲ್ಲಿನಯುವರೆಡ್‍ಕ್ರಾಸ್, ರೇಂಜರ್ಸ್/ರೋವರ್ಸ್ ಮತ್ತು ಪಶ್ಚಿಮ ಪೋಲಿಸ್ ಠಾಣೆ, ಮಂಗಳೂರು ಇವರ ಸಹಯೋಗದಲ್ಲಿ ಏರ್ಪಡಿಸಿದ ಸಂಚಾರ ನಿರ್ವಹಣೆ ಮತ್ತುರಸ್ತೆ ಸುರಕ್ಷಾಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಅವರು ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಸಂಚರಿಸುವಾಗ ಪಾಲಿಸಬೇಕಾದ ಸುರಕ್ಷಾ ನೀತಿಗಳನ್ನು ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವ ವಿಧಾನಗಳ ಬಗ್ಗೆ ಜಾಗೃತಿ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್‍ಸಿ.,“ವಿದ್ಯಾರ್ಥಿಗಳು ತಮ್ಮದೈನಂದಿನ ಜೀವನದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವುದುಅತೀಅವಶ್ಯಕಎಂದರಲ್ಲದೆ, ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಮತ್ತುರಸ್ತೆಯನ್ನುದಾಟುವಾಗಅತ್ಯಂತಜಾಗರೂಕರಾಗಿರಬೇಕು”ಎಂದು ಹೇಳಿದರು. ಶ್ರೀ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಬ್‍ಇನ್ಸ್‍ಪೆಕ್ಟರ್ ಶ್ರೀ ಉದಯ್, ಶ್ರೀ ಮಣಿಕಂಠ, ಯುವರೆಡ್‍ಕ್ರಾಸ್ ಮತ್ತುರೋವರ್ಸ್‍ಘಟಕ ಸಂಯೋಜಕರಾದಡಾ.ಮಹೇಶ್ ಕೆ.ಬಿ. ಮತ್ತು ಪ್ರೊ.ಪುರುಷೋತ್ತಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೇಂಜರ್ಸ್‍ಘಟಕ ಸಂಯೋಜಕರಾದಡಾ.ಶೈಲಾರಾಣಿ ಬಿ., ಕಾರ್ಯಕ್ರಮವನ್ನು ನಿರೂಪಿಸಿದರು.


Spread the love