ಭಾರತದ ವಿಶ್ವಗುರುವಿನ ಹಾದಿಗೆ ಮೂಲ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ- ಪ್ರೊ.ರಾಜಶೇಖರ್ ಹೆಬ್ಬಾರ್  

Spread the love

ಭಾರತದ ವಿಶ್ವಗುರುವಿನ ಹಾದಿಗೆ ಮೂಲ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ- ಪ್ರೊ.ರಾಜಶೇಖರ್ ಹೆಬ್ಬಾರ್  

ಮಂಗಳೂರು: ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ ಭಾರತ ಸಂಸ್ಕ್ರತಿಯ ಶ್ರೇಷ್ಠತೆಯನ್ನು ಸಾರಿದ ಸವಿನೆನಪಿಗಾಗಿ “ವಿಶ್ವ ವಿಜೇತ” ಕಾರ್ಯಕ್ರಮವನ್ನು ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ಡಾ.ಪಿ ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರಾಜಶೇಖರ ಹೆಬ್ಬಾರ್ ಸಿ ಇವರು ಉದ್ಘಾಟಿಸಿದರು. ದೇಶದ ಏಳಿಗೆಗೆ ಯುವಕರೆಲ್ಲ ಜಾಗೃತರಾಗಬೇಕು, ಸುಭದ್ರ ದೇಶವನ್ನು ಕಟ್ಟಲು ಯುವಕರೆಲ್ಲ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು.ಈ ನಿಟ್ಟಿನಲ್ಲಿ ವಿಶ್ವವಿಜೇತ ಕಾರ್ಯಕ್ರಮ ಒಂದು ಉತ್ತಮ ಪ್ರಯತ್ನ ಎಂದು ಶ್ಲಾಘಿಸಿದರು.

ನಂತರ ಸಂಪನ್ಮೂಲ ವ್ಯಕ್ತಿಗಳಾದ ಕುಮಾರಿ ಅಕ್ಷಯ ಗೋಖಲೆ, ಉಪನ್ಯಾಸಕರು, ಡಾ ಎನ್.ಎಸ್.ಎ ಎಂ.ಪಿ ಯು ಕಾಲೇಜು ನಿಟ್ಟೆ ಇವರು ವಿವೇಕಾನಂದರ ಜೀವನ ಚಿತ್ರಣ, ಜೀವನ ಸಾಧನೆಗಳನ್ನು ವಿವರಿಸಿದರು.ದೇಶಕ್ಕಾಗಿ ಏನನ್ನಾದರೂ ಸಾಧನೆ ಮಾಡುತ್ತೇನೆ ಎಂಬ ಛಲ ಪ್ರತಿಯೊಬ್ಬ ಯುವಕನಲ್ಲಿ ಮೂಡಿ ಬರಬೇಕು. ಸಿನಿಮಾ ನಟ-ನಟಿಯರನ್ನು ಆದರ್ಶವಾಗಿಟ್ಟುಕೊಳ್ಳದೇ ಯುವಜನತೆ ಪ್ರಬುದ್ಧವಾಗಿ ಯೋಚಿಸಬೇಕು. ವಿವೇಕಾನಂದ, ಭಗತ್‍ಸಿಂಗ್, ಜಾನ್ಸಿ ರಾಣಿ ಲಕ್ಷ್ಮಿಬಾಯಿ ಮೊದಲಾದವರನ್ನು ಮಾದರಿಯಾಗಿಟ್ಟು ಕೊಳ್ಳಬೇಕು ಎಂದು ಹೇಳಿದರು.ಹಾಗೂ ಸ್ವಾಮಿ ವಿವೇಕಾನಂದರ ಆದರ್ಶವನ್ನಿಟ್ಟುಕೊಂಡು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಉದಾಹರಣೆಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

ಕಾರ್ಯಕ್ರಮವನ್ನು ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅರುಣಾ ಕುಮಾರಿ ನಿರ್ವಹಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ನವೀನ್ ಕೊಣಾಜೆ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶ್ ಕೆ.ಬಿ ವಂದಿಸಿದರು. ವಾಣ್ಯಿಜ್ಯಶಾಸ್ತ್ರ ವಿಭಾಗದ ಡಾ.ನಾಗರಾಜ್ ಎಂ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love