ಭೋದಕ, ಭೋದಕೇತರ ಮತ್ತು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

Spread the love

ಭೋದಕ, ಭೋದಕೇತರ ಮತ್ತು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

ಮಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿರುವ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲದ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕವು ಕಾಲೇಜಿನ ಸಿಬ್ಬಂದಿ ಸಂಘ (ಸ್ಟಾಫ್ ಕ್ಲಬ್) ಮತ್ತು ಕೇರಳದ ಕೊಚ್ಚಿನ್‍ನಲ್ಲಿರುವ ಮೆಡ್ ಎನ್ನೊವೆ 8 ಎಂಬ ಖಾಸಗಿ ಸಂಸ್ಥೆಯ ಸಹಯೋಗದಿಂದ ಆಗಷ್ಟ್ 9 ರಂದು ಕಾಲೇಜಿನ ಆವರಣದಲ್ಲಿ ಒಂದು ದಿನದ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿತ್ತು.

ಕಾಲೇಜಿನ ಡೀನ್‍ರಾದ ಡಾ| ಎಚ್. ಶಿವಾನಂದ ಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಪ್ರತಿಯೊಬ್ಬ ಮನುಷ್ಯನು ಆರೋಗ್ಯವನ್ನು ಕಾಪಾಡಬೇಕಾದರೆ ಉತ್ತಮ ಆಹಾರ ಸೇವನೆ, ಪ್ರತಿನಿತ್ಯ ದೈಹಿಕ ವ್ಯಾಯಾಮ, ಯೋಗಾಬ್ಯಾಸ, ಬೆಳಿಗ್ಗೆ ಮತ್ತು ಸಾಯಂಕಾಲ ಲಘು ನಡೆದಾಡುವ ಅಭ್ಯಾಸವನ್ನು ಬೆಳಿಸಿಕೊಂಡರೆ ಸುಖವಾದ ಜೀವನ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅತಿಯಾದ ಕೊಬ್ಬಿನಂಶವಿರುವ ಆಹಾರ ಅಥವಾ ಸಕ್ಕರೆಯ ಪ್ರಮಾಣ ಯಥೇಚ್ಚವಿರುವ ಪಧಾರ್ಥಗಳನ್ನು ಸೇವಿಸಿದಾಗ ವಿವಿಧ ರೀತಿಯ ಸಮಸ್ಯೆಗಳು ಉದ್ಭವವಾಗುವ ಸಂಭವವಿರುತ್ತದೆ. ಆದುದರಿಂದ, ದಿನನಿತ್ಯದ ಆಹಾರ ಸೇವನೆಯಲ್ಲಿ ತರಕಾರಿ, ಹಣ್ಣು, ಸೊಪ್ಪು, ಕಾಳು ಇತ್ಯಾದಿಗಳನ್ನು ಬಳಸಿದರೆ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳನ್ನು ದೂರವಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆರೋಗ್ಯವಾದ ವ್ಯಕ್ತಿಯು ರಕ್ತದೊತ್ತಡದಲ್ಲೇನಾದರೂ ಏರುಪೇರನ್ನು ಅನುಭವಿಸಿದರೆ, ಹೃದಯಸಂಭಂದಿ ಸಮಸ್ಯೆಗಳು ಎದುರಾಗಬಹುದೆಂಬುದನ್ನು ಹೇಳಿದರು. ಹಾಗಾಗಿ ಸಮಯ ಮತ್ತು ಖರ್ಚುವೆಚ್ಚವನ್ನು ಪೆÇೀಲು ಮಾಡದೇ ಉಚಿತವಾಗಿ ಹಮ್ಮಿಕೊಂಡಿರುವ ಈ ಆರೋಗ್ಯ ತಪಾಸಣಾ ಶಿಬಿರದಿಂದ ಕಾಲೇಜಿನ ಎಲ್ಲಾ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ ವೃಂದದವರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸಿಬ್ಬಂದಿ ಸಂಘ ಮತ್ತು ಮೆಡ್ ಎನ್ನೊವೆ 8 ಜಂಟಿಯಾಗಿ ಆಯೋಜಿಸಿರುವ ಈ ಶಿಬಿರವು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅತಿಥಿಯಾಗಿ ಮೆಡ್ ಎನ್ನೊವೆ 8 ರ ಅಧಿಕಾರಿ ಅರ್ಜುನ್ ಮಾತನಾಡಿ, ತಮ್ಮ ಸಂಸ್ಥೆಯು 24 ಗಂಟೆಯವರೆಗೂ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆಯು ‘ಟೆಸ್ಟ್‍ಮಿ’ ಎಂಬ ಸಹಾಯವಾಣಿಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಮನೆಮನೆಗೆ ತಲುಪಿ ತಪಾಸಣೆ ಮಾಡಿಸಲು ಅನುಕೂಲಕರವಾದುದಾಗಿದೆ ಎಮ್ದರು. ಜೊತೆಯಲ್ಲಿ ವಾಟ್‍ಆಪ್ ಮತ್ತು ಈ-ಮೇಲ್ ಗಳ ಜಾಲತಾಣಗಳ ಮೂಲಕ ಜನಸಾಮಾನ್ಯರು ಆರೋಗ್ಯದ ಬಗ್ಗೆ ಸಮಸ್ಯೆಗಳನ್ನು ತಿಳಿಸಿ ಸಲಹೆ ಪಡೆಯುವುದಲ್ಲದೇ ತಪಾಸಣೆಯನ್ನು ಖರ್ಚುವೆಚ್ಚವಿಲ್ಲದೇ ಫಲಿತಾಂಶವನ್ನು ನೀಡುವುದಲ್ಲಿ ಸಹಕಾರಿಯಾಗಿದೆಯೆಂದು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಶಿಬಿರದ ಉದ್ದೇಶ ಮತ್ತು ಪ್ರಾಸ್ತಾವಿಕವನ್ನು ನುಡಿದು ಆಗಮಿಸಿರುವ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಸಿಬ್ಬಂದಿ ಸಂಘದ ಕಾರ್ಯದರ್ಶಿ ಡಾ| ಗಿರೀಶ ಎಸ್.ಕೆ. ವಂದಿಸಿದರು.

ಮೆಡ್ ಎನ್ನೊವೆ 8 ಸಂಸ್ಥೆಯವರಾದ ಅರ್ಜುನ್, ಅಖಿಲ್, ಸರಫರೋಶ್, ಹರ್ಷದ್ ಮತ್ತು ಟೋಮ್ ರವರು ಈ ಶಿಬಿರಕ್ಕೆ ಚಾಲನೆ ಕೊಟ್ಟರು. ಕಾಲೇಜಿನ ಪ್ರತಿಯೊಬ್ಬ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಒಟ್ಟು 170 ಜನ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ದೇಹದ ತೂಕ, ಎತ್ತರ, ಗಾತ್ರ, ಸರಾಸರಿ ತೂಕ, ಕೊಬ್ಬಿನ ಅಂಶ, ರಕ್ತದಲ್ಲಿರುವಂತಹ ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡಗಳ ಪರೀಕ್ಷೆಗಳನ್ನು ಮಾಡುವುದರ ಮೂಲಕ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಸುಶೂತ್ರವಾಗಿ ನಡೆಸಿಕೊಟ್ಟರು. 45 ವರ್ಷ ಮೇಲ್ಪಟ್ಟ ಪ್ರಾಯದವರು ರಕ್ತದಲ್ಲಿನ ಇತರೆ ಪರೀಕ್ಷೆಗಳನ್ನೂ ಸಹ ಮಾಡಿಸಿಕೊಂಡರು.

ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಏರ್ಪಡಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೇ ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳೇನಾದರು ಆಯೋಜಿಸಿದರೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುತ್ತದೆಂದು ಅಭಿಪ್ರಾಯಪಟ್ಟರು.


Spread the love