ಮಂಗಳೂರಿನಲ್ಲಿ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರ

Spread the love

ಮಂಗಳೂರಿನಲ್ಲಿ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರ

ಮಂಗಳೂರು: ಬೋಳೂರಿನ ಪ್ರಭು ನಿವಾಸ ಕಂಪೌಂಡ್ ನಲ್ಲಿರುವ ಸನಾತನ ಆಶ್ರಮದಲ್ಲಿ ನಡೆದ ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರದ ಉದ್ಘಾಟನೆಯನ್ನು ಶಂಖನಾದದೊಂದಿಗೆ ಮಾಡಲಾಯಿತು, ಶಂಖನಾದವನ್ನು ದ.ಕ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಮಾಡಿದರು.

ಹಿಂದೂರಾಷ್ಟ್ರ ಸ್ಥಾಪನೆಗಾಗಿ ಆಧ್ಯಾತ್ಮಿಕ ಸಾಧನೆಯ ಮಹತ್ವವನ್ನು ಧರ್ಮಪ್ರೇಮಿಗಳಿಗೆ ಅರಿವು ಮಾಡಿಕೊಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ.

ಶಿಬಿರದ ಉದ್ದೇಶವನ್ನು ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಇವರು ತಿಳಿಸಿಕೊಡುತ್ತಾ, ಹಿಂದೂಗಳು ಇಂದು ಬೇರೆ ಬೇರೆ ಜಾತಿ, ಸಂಪ್ರದಾಯ, ಸಂಘಟನೆಯಲ್ಲಿ ಹಂಚಿಹೋಗಿದ್ದಾರೆ. ಎಲ್ಲರನ್ಣೂ ಒಟ್ಟು ಸೇರಿಸಿ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯಕ್ಕಾಗಿ ಪ್ರೇರೇಪಣೆ ನೀಡುವುದು ಹಾಗೆಯೇ ಮುಂದೆ ಹಿಂದೂ ಸಂಘಟನೆಯ ಕಾರ್ಯವನ್ನು ಭಗವಂತನ ಅಧಿಷ್ಟಾನದೊಂದಿಗೆ ಹೇಗೆ ಮಾಡುವುದು ಎಂಬ ಉದ್ದೇಶದಿಂದ ಹಿಂದೂ ಸಂಘಟಕ ಕಾರ್ಯಶಾಲೆಯನ್ನು ಆಯೋಜಿಸಲಾಗಿದೆ ಎಂದರು.

ಸನಾತನ ಸಂಸ್ಥೆಯ ರಾಜ್ಯ ಪ್ರಸಾರ ಸೇವಕರಾದ ಶ್ರೀ ಕಾಶಿನಾಥ ಪ್ರಭು ಹಾಗೂ ಶ್ರೀ ರಮಾನಂದ ಗೌಡ ಇವರು ಜೀವನದಲ್ಲಿ ಸಾಧನೆಯ ಮಹತ್ವದ ಕುರಿತಾಗಿ ಉಪಸ್ಥಿತ ಧರ್ಮಪ್ರೇಮಿಗಳಿಗೆ ಮಾರ್ಗದರ್ಶನ ಮಾಡುತ್ತಾ , ಸೃಷ್ಟಿಯಲ್ಲಿರುವ 84 ಲಕ್ಷ ಜೀವರಾಶಿಯನ್ನು ಹೊಂದಿದೆ ಆದರೆ ಮನುಷ್ಯ ಮಾತ್ರ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಲು ಸಾಧ್ಯ ಇವೆ. ಮನುಷ್ಯ ಜನ್ಮದ ಸಾರ್ಥಕತೆ ಮೋಕ್ಷಪ್ರಾಪ್ತಿಯಲ್ಲಿ ಇದೆ. ನಾವು ಸಮಾಜಕಲ್ಯಾಣದ ಕಾರ್ಯ ಮಾಡುವಾಗ ಭಗವಂತನ ಉಪಾಸನೆಯನ್ನು ಮಾಡುತ್ತಾ ಮಾಡಿದರೆ ಅದರ ಪರಿಣಾಮ ಒಳ್ಳೆಯ ರೀತಿಯಲ್ಲಿ ಸಮಾಜದ ಮೇಲಾಗುತ್ತದೆ, ನಾವು ಸ್ವಾರ್ಥವನ್ನು ಇಟ್ಟುಕೊಂಡು ನಮ್ಮಲ್ಲಿ ಷಡ್ವೈರಿಗಳನ್ನು ಇಟ್ಟುಕೊಂಡು ನಾವು ಎಷ್ಟೇ ಸಮಾಜಕಲ್ಯಾಣ ಕಾರ್ಯ ಮಾಡಿದರೂ ಅದು ವ್ಯರ್ಥ ಕಾರ್ಯವಾಗುತ್ತದೆ. ಆದ್ದರಿಂದ ನಾವು ನಮ್ಮಲ್ಲಿರುವ ಅಹಂ ಹಾಗೂ ಷಡ್ವೈರಿಗಳನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಮೋಹನ ಗೌಡ ಇವರು ಮಾತನಾಡುತ್ತಾ, ಸತ್ತ್ವಗುಣಿ ಜನರ ರಾಷ್ಟ್ರ ಅಂದರೆ ಧರ್ಮಾಧಿಷ್ಟಿತ ಹಿಂದೂರಾಷ್ಟ್ರ ಸ್ಥಾಪನೆಯನ್ನು ತರಲು ನಾವೆಲ್ಲಾ ಪ್ರಯತ್ನ ಮಾಡಬೇಕಿದೆ. 2016 ಆಗಸ್ಟ್ 1 ರವರೆಗೆ 100 ಕ್ಕೂ ಅಧಿಕ ಬಾರಿ ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. ಅದೇ ರೀತಿಯಲ್ಲಿ ಒಂದು ತಿದ್ದುಪಡಿಯನ್ನು ಮಾಡಿ ಭಾರತವನ್ನು ಹಿಂದೂರಾಷ್ಟ್ರ ಎಂದು ಘೋಷಣೆ ಮಾಡುವುದೂ ಕೂಡ ಸಾಂವಿಧಾನಬಧ್ದವಾಗಿಯೇ ಇದೆ.

ಹಿಂದೂರಾಷ್ಟ್ರ ಸಂಘಟಕ ಕಾರ್ಯಾಗಾರವು ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ. ಎರಡು ದಿನಗಳ ಕಾಲ ರಾಷ್ಟ್ರ-ಧರ್ಮ ಕಾರ್ಯಗಳ ಕುರಿತಾಗಿ ಚಿಂತನ-ಮಂಥನ ನಡೆಯಲಿದೆ.


Spread the love