ಮಂಗಳೂರು: ನ.22ರಿಂದ26 ವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಂ.ರಾ.ಮ.ಚ.ಚಿ.ಉತ್ಸವ

Spread the love

ಮಂಗಳೂರು: ಕರಾವಳಿ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರತದ ಪ್ರಥಮ ಪ್ರಧಾನಿ ದಿ|ಜವಾಹರಲಾಲ್ ನೆಹರು ರವರ  125ನೇ ಜನ್ಮ ಶತಮಾನೋತ್ಸವ ಸವಿನೆನಪಿಗಾಗಿ ನ.22 ರಿಂದ 26 ವರೆಗೆ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಏರ್ಪಡಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಅವರು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಸಂಬಂದ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಚಲನಚಿತ್ರೋತ್ಸವದಲ್ಲಿ ಪರಿಸರ, ಕಾಡುಪ್ರಾಣಿಗಳ ಜೀವನ ಕ್ರಮ ಕುರಿತಂತೆ 06 ರಿಂದ 10ನೇ ತರಗತಿ ವರೆಗಿನ ಶಾಲಾ ಮಕ್ಕಳಿಗೆ ಸುಮಾರು 50ಕ್ಕೂ ಹೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದೆಂದು ಮಕ್ಕಳ ಚಲನಚಿತ್ರ ನಿರ್ದೇಶಕ ನಂಜುಂಡೇಗೌಡ ಅವರು ಸಭೆಗೆ ತಿಳಿಸಿದರು. ಚಲನಚಿತ್ರೋತ್ಸವದಲ್ಲಿ 30ಜನ ವದೇಶಿ ಗಣ್ಯರು, 60ಕ್ಕೂ ಹೆಚ್ಚು ಅಂತರರಾಜ್ಯ ಗಣ್ಯರು ಆಗಮಿಸಲಿದ್ದು, ಅವರುಗಳಿಗೆ ಜಿಲ್ಲೆಯ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಆದರ ಆತಿಥ್ಯವನ್ನು ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಯಶಸ್ಸಿಗೆ ಹೆಚ್ಚುವರಿ ಜಿಲ್ಲಾಧಿಕಾಅರಿ ಕುಮಾರ್, ಮಂಗಳೂರು ಮತ್ತು ಪುತ್ತೂ ಉಪವಿಭಾಗಗಳ ಸಹಾಕ ಆಯುಕ್ತರಾದ ಅಶೋಕ್ ಮತ್ತು ಸತೀಶ್ ಕುಮಾರ್ ಸೇಎದಂತೆ ಇನ್ನಿತರೆ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡ ಹಲವಾರು ಸಮಿತಿಗಳನ್ನು ರಚಿಸಲು ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗೆ ಖಾದರ್ ಶಾ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ ಮುಂತಾದವರು ಹಾಜರಿದ್ದರು.

ದೇವರ ರಾಜಕೀಯ ನಾಯಕರ ಚಿತ್ರಗಳಿರುವ ಪಟಾಕಿ ಮರಾಟ/ಸುಡುವುದು ನಿಷಿದ್ಧ-ಎ.ಬಿ.ಇಬ್ರಾಹಿಂ

ಮಂಗಳೂರು: ದೀಪಾವಳಿ ಹಬ್ಬ ಸಡಗರ ಸಂಬ್ರಮದಿಂದ ಆಚರಿಸುವಾಗ ಆಸುಪಾಸಿನಲ್ಲಿ ವಾಸಿಸುವ ಹಾಲುಗಲ್ಲ ಮಕ್ಕಳು ವಯೋವೃದ್ದರು ಅನರೋಗ್ಯ ಪೀಡಿತರನ್ನು ಗಣನೆಗೆ ತೆಗೆದುಕೊಂಡು ಹಾಗೂ ಪಟಾಕಿಗಳ ಮೇಲೆ ಯಾವುದೇ ದೇವರ ಚಿತ್ರಗಳನ್ನಾಗಲೀ ಅಥವಾ ರಾಜಕೀಯ ವ್ಯಕ್ತಿಗಳ ಚಿತ್ರಗಳಿರುವ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಸುಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಮ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಈ ಸಂಬಂದ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಡುಮದ್ದು ಮಾರಾಟಗಾರರು ಸುಡುಮದ್ದು ಮಾರಾಟಕ್ಕೆ ತಾತ್ಕಾಲಿಕ ಪರವಾನಗಿಯನ್ನು ಪಡೆಯಲು ದಿ.31-10-2015ರೊಳಗೆಅರ್ಜಿಗಳನ್ನು ಸಂಬಂದಿಸಿದ ತಹಶೀಲ್ದಾರರಿಗೆ ಸಲ್ಲಿಸಬೇಕಿದ್ದು , ಅರ್ಜಿಯೊಂದಿಗೆ ಪೋಲೀಸ್ ಇಲಾಖೆ/ಪೋಲೀಸ್ ಕಮೀಷನರ್ ಅಥವಾ ಪೊಲೀಸ್ ಅಧೀಕ್ಷಕರು, ಅಗ್ನಿಶಾಮಕ ಇಲಾಖೆ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿಗಳನ್ನು ಸಲ್ಲಿಸಬಹುದೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅವರು ತಿಳಿಸಿದ್ದಾರೆ.

ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡಲಾಗುವ ಪ್ರದೇಶಗಳೆಂದರೆ, ಕದ್ರಿ ಪಾರ್ಕಿನ ಎದುರುಗಡೆ ಇರುವ ತೆರೆದ ಮೈದಾನ,ಉರ್ವಸ್ಟೋರ್ ಮೈದಾನ, ಬೈಕಂಪಾಡಿ ಎ.ಪಿ.ಎಂ.ಸಿ. ಬಳಿ ಇರುವ ಮೈದಾನ,ಪಂಪುವೆಲ್ ಬಳಿಯ ಪ್ರಸ್ತಾವಿತ ಬಸ್ ಸ್ಟ್ಯಾಂಡ್ಗಾಗಿ ಮೀಸಲಿರುವ ಪ್ರದೇಶ, ಕಾವೂರು ಜಂಕ್ಷನ್ ನಲ್ಲಿ ಕುಂಟಿಕಾನ-ಬೊಂದೇಲ್ ರಸ್ತೆಯ ಬದಿ ಇರುವ ಮೈದಾನ, ಬಂಗ್ರ ಕೂಳೂರಿನಲ್ಲಿ ಸ್ಟಾಕ್‍ಎಕ್ಸಚೇಂಜ್ ಗೆ ನೀಡಲಾಗಿದ್ದ ಖಾಲಿ ಸ್ಥಳ, ಸುರತ್ಕಲ್ ರಂಗಮಂದಿರದ ಬಳಿ ಇರುವ ತೆರೆದ ಮೈದಾನ, ಮುಲ್ಕಿ ಪಟ್ಟಣ ಪಂಚಾಯತ್ ಕಚೇರಿ ಎದುರುಗಡೆ ಇರುವ ಮೈದಾನ, ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ಇರುವ ತೆರೆದ ಪ್ರದೇಶ ಮತ್ತು ಮೂಡಬಿದ್‍ರೆ ಸ್ವರಾಜ್ಯಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಮಾರ್ ತಿಳಿಸಿದ್ದಾರರೆ.

ಪರಿಸರ ಅಧಿಕಾರಿ ಜಯಪ್ರಕಾಶ್ ಅವರು ಮಾತನಾಡಿ 125 ಡೆಸಿಬಲ್‍ಗಿಂತ ಹೆಚ್ಚು ಶಬ್ದ ಹೊರಹೊಮ್ಮುವಂತಹ ಪಟಕಿಗಳನ್ನು ಕಡ್ಡಾಯವಾಗಿ ಮಾರಾಟ ಮಾಡುವುದನ್ನು ಹಾಗೂ ಸುಡುವುದನ್ನು ನಿಷೇಧಿಸಲಾಗಿದೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಗೋಕುಲ್‍ದಾಸ್ ನಾಯಕ್, ಇನ್ನಿತರರು ಉಪಸ್ಥಿತರಿದ್ದರು.


Spread the love