ಮಂಗಳೂರು: ಪಣಂಬೂರು ಬೀಚಿನಲ್ಲಿ ಮೇ 29-31 ರ ವರೆಗೆ ಸರ್ಫಿಂಗ್ ಉತ್ಸವ

Spread the love

ಮಂಗಳೂರು: ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ರಾಷ್ಟ್ರ ಮಟ್ಟದ ಸಫರ್ಿಂಗ್ ಸ್ಪಧರ್ೆಯನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಿಳಿಸಿದರು.

6

ಅವರು ಬುಧವಾರ ನಗರದಲ್ಲಿ ಮಾಧ್ಯಮಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಪ್ರವಾಸೋದ್ಯಮ ಇಲಾಖೆ ತಮ್ಮ ಜಂಟಿ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಸರ್ಫಿಂಗ್ ಸ್ಪರ್ಧೆಯನ್ನು ಮೇ 29 ರಿಂದ 31 ರ ವರೆಗೆ ಆಯೋಜಿಸಿದೆ. ಪ್ರಥಮ ಬಾರಿಗೆ ಪ್ರವಾಸೋದ್ಯಮ ಇಲಾಖೆ ಇಂತಹ ಸ್ಪರ್ಧೆಯನ್ನು ಆಯೋಜಿಸಿದ್ದು, ವಾರ್ಶಿಕ ಕಾರ್ಯಕ್ರಮವಾಗಿ ಮುಂದಿನ ದಿನಗಳಲ್ಲಿ ನಡೆಸುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ರಾಷ್ಟ್ರೀಯ ಸರ್ಫೀಂಗ್ ಫೆಡರೇಶನ್ ಇದರ ಉಪಾಧ್ಯಕ್ಷ ರಾಮ್ ಮೋಹನ್ ಪರಾಂಜಪೆ ಮಾತನಾಡಿ ಪ್ರವಾಸೋದ್ಯಮ ಇಲಾಖೆ ಪಣಂಬೂರು ಬೀಚಿನಲ್ಲಿ ಈ ಸ್ಪರ್ದೆಯನ್ನು ಆಯೋಜಿಸಲು ಸಂಪೂರ್ಣ ಸಹಕಾರ ನೀಡಿದ್ದು, ಇದಕ್ಕಾಗಿ 24 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಮಂಗಳೂರು ಸರ್ಫಿಂಗ್ ಕ್ರೀಡೆ ಉತ್ತಮ ಸ್ಥಳವಾಗಿದ್ದು ಇದನ್ನು ಹಬ್ಬದ ರೂಪದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹೆಚ್ಚಿನ ಪ್ರಾಯೋಜಕರ ಅವಶ್ಯಕತೆ ಇದ್ದು, ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು. ಮೂರು ದಿನಗಳ ಸ್ಪರ್ಧೆಯಲ್ಲಿ ಆಹಾರ ಮೇಳ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದರು. ಸ್ಪರ್ಧೆಗಳು ಬೆಳಿಗ್ಗೆ 7.30 ಆರಂಭವಾಗಲಿದ್ದು, ಇಂಡೋನೇಷಿಯಾ ಮತ್ತು ಥೈಲ್ಯಾಂಡ್ನ ತೀರ್ಪುಗಾರರು ಆಗಮಿಸಲಿದ್ದಾರೆ ಎಂದರು.
ಸ್ಪರ್ಧೆಯು 4 ವಿಭಾಗಗಳಲ್ಲಿ ಪುರಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಜರುಗಲಿರುವುದು. 16 ವರ್ಶದೊಳಗಿನ ವಯೋಮಿತಿ, 17-22 ವರ್ಶ ವಯೋಮಿತಿಯ ಜ್ಯೂನಿಯರ್ ವಿಭಾಗ, 23-28 ವರ್ಶದ ಹಿರಿಯರ ವಿಭಾಗ ಹಾಗೂ 29 ವರ್ಶ ಮೇಲ್ಪಟ್ಟವರ ಮಾಸ್ಟರ್ಸ್ ವಿಭಾಗ.
ಸ್ಪರ್ಧೆಯ ವಿಜೇತರು 6 ಲಕ್ಷದ ವರೆಗೆ ನಗದು ಬಹುಮಾನಗಳನ್ನು ಪಡೆಯಲಿದ್ದು, 20 ಮಂದಿ ಸರ್ಫರ್ಸ್ ಈಗಾಗಲೆ ಹೆಸರನ್ನು ನೋಂದಾಯಿಸಿದ್ದಾರೆ. 100 ಕ್ಕೂ ಅಧಿಕ ಮಂದಿ ಸ್ಪರ್ಧಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಸರ್ಫಿಂಗ್ ಉತ್ಸವದ ಲೋಗೊ ಅನಾವರಣಗೊಳಿಸದರು.
ಹೆಸರು ನೋಂದಾಯಿಸುವವರು ಈ ಕೆಳಗಿನ ಮಾಹಿತಿಯಲ್ಲಿ ಸಂಪರ್ಕಿಸಬಹುದು.

Log on to www.indiaopenofsurfing.com,” and register their names online. Or can contact:
Ram Mohan Paranjape +91 9980845767
ram@surfingfederationofindia.org
Kishor Kumar +91 9902433404
kishore@surfingfederationofindia.org


Spread the love