ಮಂಗಳೂರು: ಪುರಭವನದ ನವೀಕರಣ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣ:  ಮೇಯರ್ ಜಸಿಂತಾ ಆಲ್ಫ್ರೆಡ್

Spread the love

ಮಂಗಳೂರು: ಪುರಭವನದ ನವೀಕರಣ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು  ಎಂದು ಮೇಯರ್ ಜಸಿಂತಾ ಆಲ್ಫ್ರೆಡ್ ಹೇಳಿದರು

1-mayor-jacinta-20150724

ಅವರು ಶುಕ್ರವಾರ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ 2014 ಡಿಸೆಂಬರ್ 12 ಕ್ಕೆ ಪುರಭವನ 50 ವರ್ಷಗಳನ್ನು ಪೂರ್ತಿಗೊಳಿಸಿದ್ದು, ಮಹಾನಗರ ಪಾಲಿಕೆ ಸುವರ್ಣ ಮಹೋತ್ಸವದ ಮುಂಚಿತವಾಗಿ ಪುರಭವನ ನವೀಕರಣಗೊಳಿಸಲು ಚಿಂತನೆ ನಡೆಸಿತ್ತು ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಗಾಗಿ ಅದು ಸಾಧ್ಯವಾಗಲಿಲ್ಲ. ಜೂನ್ 26 ರಂದು ನಡೆದ ಪಾಲಿಕೆ ಸಭೆಯಲ್ಲಿ ಈ ಕುರಿತು ವಿಸ್ತ್ರತವಾದ ಚರ್ಚೆಯನ್ನು ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಹಾಗೂ ಮಾರ್ಗದರ್ಶನದಂತೆ ಟೆಂಡರ್ ಪ್ರಕಿಯೆಯನ್ನು ನಡೆಸಿ ಕೆಲಸಗಳನ್ನು ವಿಭಾಗ ಮಾಡಿ ಕೊಡಲಾಗಿದೆ. ವೇದಿಕೆ, ಧ್ವನಿವರ್ಧಕ, ಕರ್ಟನ್, ಲೈಟ್ಸ್, ಸೀಲಿಂಗ್ ಇತ್ಯಾದಿ ವಿಭಾಗದಲ್ಲಿ ಟೆಂಡರ್ ಆಹ್ವಾಣಿಸಿದ್ದು, ಜುಲೈ 21 ರಂದು ಟೆಂಡರ್ ಪಡೆಯಲಾಗಿದೆ ಪಡೆದುಕೊಂಡ ಟೆಂಡರ್ ಗಳ ಪರೀಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 98 ಲಕ್ಷ ಮೊತ್ತದ ಕಾಮಗಾರಿ ಕೈಗೆತ್ತಿಕೊಂಡಿದ್ದು,  ಆಸನ ವ್ಯವಸ್ಥೆಗೆ 60 ಲಕ್ಷ, ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆಗೆ 48 ಲಕ್ಷ, ಕೇಬಲ್ ಮತ್ತು ಜನರೇಟರ್ ವ್ಯವಸ್ಥೆಗೆ 49 ಲಕ್ಷ ನಿಗದಿಪಡಿಸಲಾಗಿದೆ. ಸ್ವೀಕರಿಸಲಾದ ಟೆಂಡರ್ ಗಳನ್ನು ಜುಲೈ 24 ರಂದು ತೆರೆಯಲಾಗುವುದು ಮತ್ತು ಜುಲೈ 27 ರುಂದು ಕೆಲಸಗಳನ್ನು ಸಂಬಂಧಿಸಿದ ಗುತ್ತಿಗೆದಾರರುಗಳಿಗೆ ಹಸ್ತಾಂತರಿಸಲಾಗುವುದು ಎಂದರು.

ಮಂಗಳೂರು ನಗರ ಕರ್ನಾಟಕದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಇದರಿಂದ ವಿವಿಧೆಡೆಗಳಲ್ಲಿ ರಸ್ತೆ ತಡೆಗಳು ಉಂಟಾಗುತ್ತಿವೆ. ಸಮರ್ಪಕ ವಾಹನ ಸಂಚಾರ ವ್ಯವಸ್ಥೆಗಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆದ ಮಾಡಿದ್ದು 7 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು  ಜುಲೈ 27 ರಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ನಗರಾಭಿವೃದ್ಧಿ ಸಚಿವರಾದ ವಿನಯ ಕುಮಾರ್ ಸೊರಕೆ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದರು.

ಕೊಂಚಾಡಿ – ಕಾವೂರು ರಸ್ತೆ 2 ಕೋಟಿ ಅನುದಾನದಲ್ಲಿ ನವೀಕರಣ, ಪಚ್ಚನಾಡಿ ಮುಖ್ಯ ರಸ್ತೆ 1.5 ಕೋಟಿಯಲ್ಲಿ ಅಭಿವೃದ್ಧಿ, ಮುಖ್ಯವಾಗಿದ್ದು ಅಲ್ಲದೆ ಮಾಲಾಡಿ ಕೋರ್ಟ್ ಸಂಪರ್ಕ ರಸ್ತೆ, ಕೊರಗಜ್ಜ ಗುಡಿ ರಸ್ತೆ ಅಭಿವೃದ್ಧಿ, ದುರ್ಗಾಮಹಲ್ ಬೊಕ್ಕಪಟ್ಣ ಚರ್ಚ್ ರಸ್ತೆ, ಸುಭಾಸ್ ನಗರ ಜಂಕ್ಷನ್ ನಿಂದ ಮಂಗಳಾದೇವಿ ರಸ್ತೆ, ಹಾಗೂ ಫುಟ್ ಪಾತ್ ನಿರ್ಮಾಣ, ಕದ್ರಿ ಮುಖ್ಯ ರಸ್ತೆಯಿಂದ ಕದ್ರಿ ದೇವಸ್ಥಾನದ ವರೆಗೆ ಕಾಂಕ್ರೀಟಿಕರಣ ವ್ಯವಸ್ಥೆ ಕಾಮಗಾರಿಗಳು ನಡೆದಿವೆ ಎಂದರು.

ಮಂಗಳೂರು ಮಹಾನಗರಪಾಲಿಕೆಯ ಆಡಳಿತಕ್ಕೆ ಬರುವ ಮಾರ್ಕೆಟುಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು. ಕೇಂದ್ರ ಮಾರುಕಟ್ಟೆ, ಕಂಕನಾಡಿ, ಕದ್ರಿ, ಸುರತ್ಕಲ್ ಅಳಿಕೆ, ಕಾವೂರು ಮತ್ತು ಕುಲಶೇಕರ ಕೈಕಂಬ ಮಾರುಕಟ್ಟೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಇದರ ಸಮಗ್ರ ಯೋಜನಾ ವರದಿ ತಯಾರಿಕೆ ಹಂತದಲ್ಲಿದೆ ಎಂದರು.

ಉಪಮೇಯರ್ ಪುರುಶೋತ್ತಮ್, ಕಾರ್ಪೋರೇಟರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

 

 


Spread the love