ಮಂಗಳೂರು: ವಿದ್ಯಾವಂತ ಯುವ ಜನತೆಯನ್ನು ಉದ್ಯಮಿಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವ: ಅತುಲ್ ಕುಡ್ವ

Spread the love

ಮಂಗಳೂರು: ಸಿಡಾಕ್, ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು, ಇಡಿಐ, ಅಹಮಾದಾಬಾದ್  ಹಾಗೂ ಸೈನ್ಸ್ & ಟೆಕ್ನಾಲಜಿ ನವದೆಹಲಿ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಸರಕಾರಿ ಮಹಿಳಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಎರಡು ವಾರಗಳ ಫ್ಯಾಕಲ್ಟಿ ಡೆವೆಲಪ್‍ಮೆಂಟ್ ಕಾರ್ಯಕ್ರಮದ ಸಮಾರೋಪ  ಇತ್ತೀಚೆಗೆ ನಡೆಯಿತು.

ಒಮ್ನಿಸಿಸ್ ಟೆಕ್ನಾಲಜಿ ನಿರ್ದೇಶಕ ಅತುಲ್ ಕುಡ್ವ,  ಸಮಾರೋಪದಲ್ಲಿ ಮಾತನಾಡಿ, ವಿದ್ಯಾವಂತ ಯುವ ಜನರನ್ನು ಉದ್ಯಮಿಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉದ್ಯಮಿಗಳು ಇತರ ನಿರುದ್ಯೋಗ ವ್ಯಕ್ತಿಗಳಿಗೂ ಉದ್ಯೋಗ ಸೃಷ್ಟಿಸುವುದರ ಜತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿದ್ದು, ಅವರನ್ನು ಗುರುತಿಸುವ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ಎಮ್‍ಎಸ್‍ಎಮ್‍ಇ ಉಪನಿರ್ದೇಶಕ ಕೆ.ಸಾಕ್ರೆಟಿಸ್ ಮಾತನಾಡುತ್ತಾ ಪ್ರಸ್ತುತ ಸಂದರ್ಭದಲ್ಲಿ ದೇಶದ ಲಕ್ಷಾಂತರ ವಿವಿಧ ಪದವೀದರರು ಶಿಕ್ಷಣವನ್ನು ಮುಗಿಸಿ ಬರೇ ಉದ್ಯೋಗವನ್ನು ಮಾತ್ರ ಅವಲಂಬಿಸದೇ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿ ಸ್ವಾವಲಂಬಿ ಜೀವನ ಸಾಗಿಸುವಂತೆ ವಿದ್ಯಾವಂತ ನಿರುದ್ಯೋಗಿಗಳಿಗೆ ಪ್ರೇರಣೆ ನೀಡುವಂತೆ ಶಿಕ್ಷಕಕರಿಗೆ ಸಲಹೆ ನೀಡಿದರು.

ಮಹಿಳಾ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ .ಎ.ಬಾಲಕೃಷ್ಣ, ಸಿಡಾಕ್‍ನ ಕಾರ್ಯಕ್ರಮ ಸಂಯೋಜಕ ಸತೀಶ್ ಮಾಬೆನ್ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಿಡಾಕ್‍ನ ಜಿಲ್ಲಾ ಉಪನಿರ್ದೇಶಕ  ಅರವಿಂದ ಡಿ.ಬಾಳೇರಿ ಪ್ರಸ್ತಾವನೆಗೈದರು.


Spread the love