ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಮೊಬೈಲ್ ಪವರ್ ಬ್ಯಾಂಕ್ ವಿಚಾರ!

Spread the love

ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಮೊಬೈಲ್ ಪವರ್ ಬ್ಯಾಂಕ್ ವಿಚಾರ!

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವನ ಬಳಿ ಅನುಮಾಸ್ಪದ ವಸ್ತುವೊಂದು ಪತ್ತೆಯಾಗಿ ಭೀತಿ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದ್ದು ತೀವೃ ತಪಾಸಣೆಯ ಬಳಿಕ ಇದು ಯಾವುದೇ ಅಪಾಯಕಾರಿ ವಸ್ತು ಅಥವಾ ಸ್ಪೋಟಕ ಅಲ್ಲ ಎನ್ನುವುದು ತಿಳಿದು ಬಂದಿದೆ.

ಅಡ್ಯಾರ್ ಕಣ್ಣೂರು ನಿವಾಸಿ ಮಹಮ್ಮದ್ ಮನ್ಸೂರು ಎಂಬವರು ರಾತ್ರಿ ಇಂಡಿಗೋ ವಿಮಾನದ ಮೂಲಕ ದುಬಾಯಿಗೆ ತೆರಳಲು ಬಂದ ವೇಳೆ ಭದ್ರತಾ ಪರಿಶೀಲನೆ ವೇಳೆ ಅನುಮಾಸ್ಪದ ವಸ್ತು ಪತ್ತೆಯಾಗಿದ್ದು ಪರಿಶಿಲನೆಗಾಗಿ ಆತನನ್ನು ಭದ್ರತಾ ಸಿಬಂದಿಗಳು ವಶಕ್ಕೆ ಪಡೆದರು ಇದರಿಂದಾಗಿ ಕೆಲಕಾಲ ಆತಂಕ ಸೃಷ್ಟಿಯಾಗುವುದರೊಂದಿಗೆ ವಿಮಾನ ಹೊರಡುವುದು ಕೂಡ ವಿಳಂಬವಾಯಿತು.

ಒಂದು ವಾರದ ಹಿಂದೆ ಮನ್ಸೂರು ಅವರು ಮೊಬೈಲ್ ಪವರ್ ಬ್ಯಾಂಕ್ ಒಂದನ್ನು ಖರೀದಿಸಿದ್ದು, ಅದನ್ನು ಅವರು ದುಬಾಯಿಗೆ ತೆರಳುವ ಸಂದರ್ಭದಲ್ಲಿ ತನ್ನ ಬ್ಯಾಗಿನಲ್ಲಿ ಇರಿಸಿಕೊಂಡಿದ್ದರು. ಭದ್ರತಾ ಪರಿಶೀಲನೆ ವೇಳೆ ಸಂಶಯಗೊಂಡ ಸಿಬಂದಿ ಪೋಲಿಸರಿಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಆಗಮಸಿದ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸಿ ಅದೊಂದು ಪವರ್ ಬ್ಯಾಂಕ್ ಎನ್ನುವುದನ್ನು ಖಚಿತಪಡಿಸಿದರು.

ಬಳಿಕ ಮಹಮ್ಮದ್ ಮನ್ಸೂರ್ ಅವರಿಗೆ ಪ್ರಯಾಣ ಮುಂದುವರೆಸಲು ಅನುವು ಮಾಡಿಕೊಟ್ಟರು.


Spread the love