ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರುಗಳ ಸಭೆ; ಶೈಕ್ಷಣಿಕ ಸಮಾಲೋಚನೆ, ನಿವೃತ್ತರಿಗೆ ಸಮ್ಮಾನ 

Spread the love

ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಪ್ರಥಮ ದಜರ್ೆ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಿವೃತ್ತ ಪ್ರಾಂಶುಪಾಲರುಗಳಿಗೆ ಸಮ್ಮಾನ ಹಾಗೂ ಶೈಕ್ಷಣಿಕ ಸಮಾಲೋಚನಾ ಸಮಾರಂಭ ಕಳೆದ ಮಂಗಳವಾರ ಕೆನರಾ ಕಾಲೇಜಿನಲ್ಲಿ ನಡೆಯಿತು.
Principals Association
ಮೂಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಿದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಮಾಧವ ಭಟ್, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜ್ಮೋಹನ ರಾವ್ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕಾಲೇಜು ಪ್ರಾಂಶುಪಾಲ ಪ್ರೊ. ದಿನೇಶ್ ಕಾಮತ್ ಅವರನ್ನು  ಸನ್ಮಾನಿಸಲಾಯಿತು.
ಮಾಹೆಯ ವಿಶ್ರಾಂತ ಉಪ ಕುಲಪತಿ ಡಾ. ಬಿ.ಎಂ. ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿದರು.  ಮುಖ್ಯ ಅತಿಥಿಯಾಗಿ ಖಾಸಗಿ ಪದವಿ ಕಾಲೇಜುಗಳ ಆಡಳಿತ ಮಂಡಳಿ ಸಂಘದ ಕಾರ್ಯದಶರ್ಿ ಪ್ರೊ. ವೈ. ಭಾಸ್ಕರ ಶೆಟ್ಟಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ  ಎಸ್.ಡಿ.ಎಂ. ಎಜುಕೇಶನ್ ಟ್ರಸ್ಟ್ ಕಾರ್ಯದಶರ್ಿ  ಡಾ. ಬಿ. ಯಶೋವರ್ಮ ಅಧ್ಯಕ್ಷತೆಯಲ್ಲಿ ಕಾಲೇಜುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಸಮಾಲೋಚನಾ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಚಚರ್ಿಸಲಾಯಿತು.  ಇತ್ತೀಚಿನ ವಿಶ್ವವಿದ್ಯಾನಿಲಯ ಪರೀಕ್ಷೆಗೆ ಸಂಬಂಧಿಸಿದ ಹಲವಾರು ನ್ಯೂನತೆಗಳನ್ನು ಭಾಗವಹಿಸಿದ ಪ್ರಾಂಶುಪಾಲರುಗಳು ವಿವರಿಸಿದ್ದು  ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಇವುಗಳನ್ನು ಸರಿಪಡಿಸುವಂತೆ  ಮನವಿ ಮಾಡುವುದಾಗಿ ನಿರ್ಧರಿಸಲಾಯಿತು.  ಮಾಡಲು ತಿಳಿಸಲಾಯಿತು.  ಮಂಗಳೂರು ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸಂಘದ ಕಾರ್ಯದಶರ್ಿ ವೈ. ಭಾಸ್ಕರ್ ಶೆಟ್ಟಿ ಸಮನ್ವಯಕಾರರಾಗಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಕಾರ್ಯದಶರ್ಿ ಮೂಡುಬಿದಿರೆ ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರವೀಶ್ ಕುಮಾರ್, ಜತೆ ಕಾರ್ಯದಶರ್ಿ ಶಿರ್ವ ಸೈಂಟ್ ಮೇರೀಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜನ್ ಉಪಸ್ಥಿತರಿದ್ದರು.
ಕೆನರಾ ಕಾಲೇಜಿನ ಪ್ರಾಂಶುಪಾಲೆಯಾದ ಡಾ. ಕೆ.ವಿ. ಮಾಲಿನಿಯವರು ಸ್ವಾಗತಿಸಿ, , ಬೆಸೆಂಟ್ ಸಂದ್ಯಾ ಕಾಲೇಜು, ಪ್ರಾಂಶುಪಾಲೆ ಡಾ. ಕಾರ್ಮಲಿಟಿ ಗೋವಿಯಸ್ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಾವರ  ಕ್ರಾಸ್ ಲ್ಯಾಂಡ್ ಕಾಲೇಜು ಪ್ರಾಂಶುಪಾಲ ಡಾ. ಸಾಮ್ಯುವೆಲ್ ಕೆ.  ವಂದಿಸಿದರು.

Spread the love