ಮಂಗಳೂರು: ಹಾಲು ಒಕ್ಕೂಟದ ನೂತನ ತಂತ್ರಜ್ಞಾನ ಬಿಡುಗಡೆ

Spread the love

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನೂತನವಾಗಿ ಜಾರಿಗೆ ತಂದಿರುವ ಹಾಲು ಉತ್ಪಾದಕರಿಂದ ಡೀಲರ್‍ಗಳವರೆಗಿನ ಮೇಘ ತಂತ್ರಜ್ಞಾನ ಆಧಾರಿತ ಉದ್ಯಮ ಸಂಪನ್ಮೂಲ ಯೋಜನೆಯ ತಂತ್ರಾಂಶ ಬಿಡುಗಡೆ ಸಮಾರಂಭ ಮಂಗಳೂರು ಡೇರಿ ಸಭಾಂಗಣದಲ್ಲಿ ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಉದ್ಯಮ ಸಂಪನ್ಮೂಲ ಮಾರುಕಟ್ಟೆ ತಂತ್ರಾಂಶ ಬಿಡುಗಡೆ ಮಾಡುವರು. ದ.ಕ ಜಿಲ್ಲಾ ಪೋಲೀಸ್ ಅಧೀಕ್ಷಕ ಡಾ. ಶರಣಪ್ಪ ಡೀಲರ್‍ಗಳಿಗೆ ಮೊಬೈಲ್ ಆಪ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಯೋಗ ಚಿಕಿತ್ಸೆಯ ಬಗ್ಗೆ ಅಂತರಾಷ್ಟ್ರೀಯ ಕಾರ್ಯಾಗಾರ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿಯೋಗ ಪೀಠಗಳು ಯೋಗ ಚಿಕಿತ್ಸೆಯ ಬಗ್ಗೆ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಫೆ. 2 ರಿಂದ 5 ರವರೆಗೆ ಏರ್ಪಡಿಸಿದೆ. ಕಾರ್ಯಗಾರದಲ್ಲಿ ದಕ್ಷಿಣ ಕೊರಿಯಾದ 21 ಪ್ರತಿನಿಧಿಗಳು ಹಾಗೂ ಭಾರತೀಯ ಪ್ರತಿನಿಧಿಗಳು ಭಾಗವಹಿಸುವರು. ವಿಭಾಗವು ಆಯೋಜಿಸುತ್ತಿರುವ 4 ನೇ ಅಂತರಾಷ್ಟ್ರೀಯ ಕಾರ್ಯಾಗಾರವಾಗಿದೆ. ಫೆ. 2 ರಂದು ಬೆಳಿಗ್ಗೆ 9.30 ಕ್ಕೆ ವಿಶ್ವವಿದ್ಯಾನಿಲಯದ ಹಳೇ ಸೆನೆಟ್ ಸಭಾಂಗಣದಲ್ಲಿ ದ.ಕ ಜಿಲ್ಲಾಧಿಕಾರಿ ಎ.ಬಿ  ಇಬ್ರಾಹಿಂ ಕಾರ್ಯಾಗಾರ ಉದ್ಘಾಟನೆಯನ್ನು ಮಾಡುವರು. ದಕ್ಷಿಣ ಕೊರಿಯಾದ ವಾಂಕ್ ವಾಂಗ್ ಡಿಜಿಟಲ್ ಯುನಿವರ್ಸಿಟಿಯ ಪ್ರೊವೋಸ್ಟ್ ಆದ ಪ್ರೊ.ಜಾಂಗ್ ಸುನ್‍ಸಿಯೋ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕಾರ್ಯಾಗಾರದ ಸಮಾರೋಪವು ಜ. 5 ರಂದು ಅಪರಾಹ್ನ 2.30ಕ್ಕೆ ವಿಶ್ವವಿದ್ಯಾನಿಲಯದ ಹಳೇ ಸೆನೆಟ್ ಸಭಾಂಗಣದಲ್ಲಿ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ಮುಂಬೈಯ ಶಸ್ತ್ರ ಚಿಕಿತ್ಸಾ ತಜ್ಞರಾದ ಹಾಗೂ ಯೋಗ ತಜ್ಷರಾದ ಡಾ. ಎಸ್.ಜಿ.ಪಾಠಕ್ ಆಗಮಿಸುವರು. ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಪ್ರತೀದಿನ ಎರಡು ಸಲ ಅಷ್ಟಾಂಗ ವಿನ್ಯಾಸ ಯೋಗದ ಅಭ್ಯಾಸವಿದೆ. ಯೋಗಚಿಕಿತ್ಸೆಯ ಮೂಲಭೂತ ಅಂಶ, ರಕ್ತದ ಒತ್ತಡ, ಸೈನುಟೈಟಿಸ್, ಸೊಂಟನೋವು, ಬೊಜ್ಜು, ಮಲಬದ್ಧತೆ, ಅಸ್ತಮಾ ಇತ್ಯಾದಿ ಕಾಯಿಲೆಗಳ ಬಗ್ಗೆ ಕಾರ್ಯಾಗಾರವಿದೆ ಎಂದು ಮಂಗಳೂರು ವಿವಿ ಯೋಗವಿಜ್ಞಾನ ವಿಭಾಗದ ಮುಖ್ಯಸ್ಥರ  ಎಂದು ಪ್ರಕಟಣೆ ತಿಳಿಸಿದೆ.


Spread the love