ಮಂಗಳೂರು: 1.9 ಕೋಟಿ ವೆಚ್ಚದಲ್ಲಿ ಸನ್ಯಾಸಿಗುಡ್ಡ ಮಣ್ಣು ರಸ್ತೆ ಕಾಂಕ್ರಿಟಿಕರಣ ಉದ್ಘಾಟನೆ

Spread the love

ಮಂಗಳೂರು: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಎಲ್ಲಾ ಸಂಪರ್ಕರಸ್ತೆಗಳನ್ನು ವಿವಿಧ ಅನುದಾನಗಳಿಂದ ಕಾಂಕ್ರಿಟಿಕರಣ ಗೊಳಿಸಲಾಗುವುದು ಎಂದು ಶಾಸಕ ಜೆ. ಆರ್. ಲೋಬೊ ತಿಳಿಸಿದರು.
ಇತ್ತೀಚೆಗೆ ಕಾಂಕ್ರೀಟಿಕರಣಗೊಂಡ ಸನ್ಯಾಸಿ ಗುಡ್ಡ ಸಂಪರ್ಕ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು.

sanyasiguddajrlobo 10-02-2013 22-29-04 sanyasiguddajrlobo 10-02-2013 22-41-04

ನಗರದಲ್ಲಿರುವ ಬಲ್ಮಠದ ಸನ್ಯಾಸಿಗುಡ್ಡ ಪ್ರದೇಶದಲ್ಲಿ ಸುಮಾರು 4 ಕಿ.ಮಿ ಮಣ್ಣು ರಸ್ತೆಯನ್ನು ಸರಕಾರ ಹಾಗು ಪಾಲಿಕೆಯ ವಿವಿದ ಅನುದಾನದಿಂದ ಸುಮಾರು 1.9 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟಿಕರಣಗೊಳಿಸಲಾಗಿದೆ ಹಾಗು ಮಳೆ ನೀರಿನ ಚರಂಡಿ ನಿರ್ಮಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕ ಚುನವಾಣೆ ಸಂದರ್ಭದಲ್ಲಿ ನಾವು ಇಲ್ಲಿನ ಜನರಿಗೆ ನೀಡಿದ ಭರವಸೆ ಪೂರೈಸಿದ ತೃಪ್ತಿ ನಮ್ಮ ಕಾಂಗ್ರೆಸ್ ಪಕ್ಷಕ್ಕಿದೆ. ಇದೇ ರೀತಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಯನ್ನು ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪಾಲಿಕೆಯ ಮೇಯರ್ ಜೆಸಿಂತಾ ವಿಜಯ ಆಲ್ಫ್ರೇಡ್, ಕಾಪೆರ್Çೀರೇಟರ್‍ಗಳಾದ ಎ.ಸಿ ವಿನಯರಾಜ್, ಪುರುಷೋತ್ತಮ್ ಚಿತ್ರಾಪುರ, ಶಶಿಧರ್ ಹೆಗ್ಡೆ, ಹರಿನಾಥ್, ಪ್ರಕಾಶ್ ಸಲ್ಯಾನ್, ದೀಪಕ್, ರತೀಕಲಾ, ಶೈಲಜಾ ಹಾಗು ಮತ್ತಿತ್ತರು ಉಪಸ್ಥಿತರಿದ್ದರು.


Spread the love