ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ಷಷ್ಠಿ ಮಹೋತ್ಸವ ಪ್ರಯುಕ್ತ  ಬ್ರಹ್ಮ ರಥೋತ್ಸವ

Spread the love

ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ಷಷ್ಠಿ ಮಹೋತ್ಸವ ಪ್ರಯುಕ್ತ  ಬ್ರಹ್ಮ ರಥೋತ್ಸವ

ಮಂಗಳೂರು : ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಹದಿನೆಂಟು ಪೇಟೆ ದೇವಳ ವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಷಷ್ಠಿ ಮಹೋತ್ಸವ ಪ್ರಯುಕ್ತ ಶ್ರೀ ದೇವರ ಬ್ರಹ್ಮ ರಥೋತ್ಸವ ಶುಕ್ರವಾರ ಸಹಸ್ರಾರು ಭಾವುಕ ಭಜಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು .

ಷಷ್ಠಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ , ಶತ ಕಲಶಾಭಿಷೇಕ , ಗಂಗಾಭಿಷೇಕ ನಡೆದವು ಬಳಿಕ ಯಜ್ಞ ಮಂಟಪದಲ್ಲಿ ಉಭಯ ದೇವರುಗಳಾದ ಭದ್ರ ನರಸಿಂಹ ಹಾಗೂ ಸುಭ್ರಮಣ್ಯ ದೇವರ ಸಮ್ಮುಖದಲ್ಲಿ ಯಜ್ಞದ ಪೂರ್ಣಾಹುತಿ , ತದನಂತರ ವಿಶೇಷವಾಗಿ ಪುಷ್ಪದಿಂದ ಅಲಂಕರಿಸಿದ ಸ್ವರ್ಣ ಲಾಲಕಿಯಲ್ಲಿ ಶ್ರೀ ದೇವರ ವಿಗ್ರಹಗಳನ್ನು ಇರಿಸಿ ಭುಜ ಸೇವೆಯ ಮೂಲಕ ಸ್ವಯಂಸೇವಕರಿಂದ ಪಲ್ಲಕಿ ಉತ್ಸವ ನಡೆಯಿತು .

ಬ್ರಹ್ಮ ರಥದ ಪೂಜೆ ಶ್ರೀ ದೇವರು ರಥಾರೂಢರಾದ ಬಳಿಕ ಮಂಗಳಾರತಿ ನಡೆದು ರಥೋತ್ಸವ ವು ಕೇರಳ , ಕರ್ನಾಟಕ , ಮುಂಬೈ , ಗುಜರಾತ್ , ದೆಹಲಿ ಹಾಗೂ ವಿದೇಶದಿಂದ ನೂರಾರು ಸಮಾಜ ಭಾಂದವರು ಪಾಲ್ಗೊಂಡು ಪುನೀತರಾದರು


Spread the love