ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದನ್ನು ಬಿಜೆಪಿಗರು ನಿಲ್ಲಿಸಿ : ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್

Spread the love

ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದನ್ನು ಬಿಜೆಪಿಗರು ನಿಲ್ಲಿಸಿ : ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್

ಉಡುಪಿ: ಕಲ್ಲಡ್ಕದ ಖಾಸಾಗಿ ಪ್ರೌಡಶಾಲೆ ಹಾಗೂ ಪುಣಚದ ಶಾಲೆಗೆ ಮಾತ್ರ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ಅನುದಾನವನ್ನು ಕೊಲ್ಲೂರು ದೇವಸ್ಥಾನದಿಂದ ಆನಧಿಕೃತವಾಗಿ  ಬಳಸಿಕೊಂಡಿರುವುದು ಉಡುಪಿ ಜಿಲ್ಲೆಯ ನೂರಾರು ಖಾಸಗಿ ವಿದ್ಯಾ ಸಂಸ್ಥೆಗಳ ಬಡಮಕ್ಕಳಿಗೆ ಹಿಂದಿನ ಬಿ.ಜೆ.ಪಿಯ ಸರಕಾರ ಮಾಡಿರುವ ದ್ರೋಹವೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ವಿಶ್ವಾಸ್ ವಿ. ಅಮೀನ್ ಆರೋಪಿಸಿದ್ದಾರೆ.

ಅವರು ಸೋಮವಾರ ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿ,ಜೆ.ಪಿ ಜಿಲ್ಲಾಧ್ಯಕ್ಷರಿಗೆ ಹಾಗೂ ಉಡುಪಿ ಸಂಸದೆಯಾದ ಶೋಭಾ ಕರಂದ್ಲಾಜೆಯವರಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಎಷ್ಟು ಅನುದಾನಿತ ಶಾಲೆಗಳಿವೆ ಅಲ್ಲಿ ಅಹಿಂದ ಮಕ್ಕಳ ಸಂಖ್ಯೆ ಎಷ್ಟು  ಹೆಚ್ಚಿನ  ಸಂಸ್ಥೆಗಳಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಇಲ್ಲ. ಪಿಠೋಪಕರಣ , ಅಧ್ಯಾಪಕರ ಕೊರತೆ ಇದೆ. ಇದರ ಬಗ್ಗೆ ಗಮನ ಹರಿಸದೆ ಒಂದು ಶಾಲೆಯನ್ನು ಮುಂದಿಟ್ಟುಕೊಂಡು ಬಂಡವಾಳ ಶಾಹಿಗಳಿಂದ, ಕೈಗಾರೀಕೋದ್ಯಮಿಗಳಿಂದ, ರಾಜಕಾರಣಿಗಳಿಂದ, ಅಧಿಕಾರಿಗಳಿಂದ, ಭ್ರಷ್ಟರಿಂದ, ಕೋಟ್ಯಂತರ ದೇಣಿಗೆ ಸಂಗ್ರಹಿಸುವ ಕಲ್ಲಡ್ಕದ ಒಬ್ಬ ವ್ಯಕ್ತಿಯ ಸಂಸ್ಥೆಗಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಚೆಲ್ಲಾಟವಾಡುವುದನ್ನು ತಕ್ಷಣ ಬಿ.ಜೆ.ಪಿ ನಾಯಕರು ನಿಲ್ಲಿಸಬೇಕೆಂದು ಯುವ ಕಾಂಗ್ರೇಸ್ ಆಗ್ರಹಿಸಿದೆ.

ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುವ ಬಿ.ಜೆ.ಪಿ ನಾಯಕರು ಜಿಲ್ಲೆಯಲ್ಲಿ ಅದೆಷ್ಟು ದಲಿತ -ಹಿಂದುಳಿದ ವರ್ಗದ ಅರ್ಥಿಕವಾಗಿ ಹಿಂದುಳಿದ ಹಿಂದೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದರೆ. ಆನೇಕ ಕಡೆಯಲ್ಲಿ  ಬಡ ವಿದ್ಯಾರ್ಥಿಗಳು ಹಸಿದ ಹೊಟ್ಟೆಯಿಂದ ಅನುದಾನಿತ ಶಾಲೆಗೆ ಬರುತ್ತಿದ್ದಾರೆ.ಇವರ ಉದ್ದಾರಕ್ಕಾಗಿ ಸಂಸದರು ಬಿಕ್ಷೆ ಬೇಡಲಿ. ಬಿ.ಜೆ.ಪಿ ನಾಯಕರು ಅಕ್ರಮವಾಗಿ ಗಳಿಸಿದ ಅದಾಯದ ಒಂದು ಭಾಗ ಬಡ ಹಿಂದೂ ಮಕ್ಕಳ ನೆರವಿಗೆ ನೀಡಲಿ. ತಮ್ಮ ರಾಜಕೀಯ ಆಸ್ಥಿತ್ವಕ್ಕಾಗಿ  ಒಬ್ಬ ಪ್ರಮುಖ ನಾಯಕನ ಪರ ವಕಾಲತ್ತು ಮಾಡುವರು ಹಿಂದೂ ವಿರೋಧಿಗಳೆಂದು ವಿಶ್ವಾಸ್ ಛೇಡಿಸಿದ್ದಾರೆ.

 ಪಿ.ಎಪ್.  ಜೊತೆ ಬಿ.ಜೆ.ಪಿ ಒಳ ಒಪ್ಪಂದ : ಪಿ.ಎಪ್.ಐ ಹಾಗೂ ಕೆ.ಎಪ್.ಡಿ. ಜೊತೆ ಬಿ.ಜೆ.ಪಿ ಪಕ್ಷದ ನಾಯಕರು ಪರಸ್ಪರ ಒಳ ಒಪ್ಪಂದ ಮಾಡಿಕೊಂಡಿದ್ದು ಸಮಾಜದಲ್ಲಿ ಸಾಮರಸ್ಯ ಕೆಡಿಸುತ್ತಿದ್ದಾರೆ. ಬಿ.ಜೆ.ಪಿ  ಸೀಮೆಎಣ್ಣೆಯಾದರೆ ಪಿ.ಎಪ್.ಐ  ಬೆಂಕಿ ಪೊಟ್ಟಣದ ಕರ್ತವ್ಯ ನಿರ್ವಹಿಸಿ ಕೋಮುಭಾವನೆಗಳನ್ನು ಕೆರಳಿಸಿ ಬೆಂಕಿ ಹಚ್ಚಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.ಸಮಾಜದಲ್ಲಿ  ಸಂಘರ್ಷಕ್ಕೆ ಪ್ರಚೋದಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳೂವುದು ಅನಿವಾರ್ಯವೆಂದು ಯುವ ಕಾಂಗ್ರೇಸ್ ತಿಳಿಸಿದೆ.

ಹೆಜಮಾಡಿ ಬಂದರು ರಾಜ್ಯದ ಪ್ರಸ್ತಾವನೆ : ಹೆಜಮಾಡಿ ಬಂದರು ನಿರ್ಮಾಣದ ಬಗ್ಗೆ ರಾಜ್ಯ ಸರಕಾರಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷ 2 ಕಳೆದರೂ ಸಂಸದರು ಆಸಕ್ತಿ ವಹಿಸಲ್ಲಿ. ಕೇಂದ್ರ ಹಾಗೂ ರಾಜ್ಯದ 70:30 ಅನುಪಾತದ ಅನುದಾನಕ್ಕೆ ಹಿಂದಿನ ಯು.ಪಿ.ಎ ಸರಕಾರ ಒಪ್ಪಿಗೆ ಸೂಚಿಸಿದ್ದರೂ ಇದೀಗ ಕೇಂದ್ರ ಸರಕಾರ 50:50ರ ಅನುಪಾತದ ಅನುದಾನ ನೀಡುವ ಬಗ್ಗೆ ಬಿ.ಜೆ.ಪಿ ನಾಯಕರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಕ್ಷೇತ್ರದ ಶಾಸಕರಾದ ವಿನಯ್ ಕುಮಾರ್ ಸೊರಕೆಯವರು ಮತ್ತು ಸಚಿವರಾದ ಪ್ರಮೋದ್ ಮದ್ವರಾಜ್‍ರವರ ಪ್ರಯತ್ನದಿಂದ ಕೇಂದ್ರದಿಂದ ತಾಂತ್ರಿಕ ಒಪ್ಪಿಗೆ ಬಂದ ತಕ್ಷಣ ರಾಜ್ಯದ ಅನುದಾನ ಬಿಡುಗಡೆಗೊಳಿಸಲು ಕಾಂಗ್ರೇಸ್ ಬದ್ದವೆಂದು ಯುವ ಕಾಂಗ್ರೇಸ್ ತಿಳಿಸಿದೆ.

ಗಣಿ ಮತ್ತು ಮರಳು ಲೂಟಿಯಲ್ಲಿ ಬಿ.ಜೆ.ಪಿಗರು ನಿಸ್ಸೀಮರು : ಈ ರಾಜ್ಯದಲ್ಲಿ ಗಣಿ ಮತ್ತು ಮರಳು ಅಕ್ರಮದಂದೆಯಲ್ಲಿ ತೊಡಗಿಸಿಕೊಂಡು ಜೈಲಿಗೆ ಸೇರಿದವರು ಬಿ.ಜೆ.ಪಿಗರು. ಕರಾವಳಿ ಜಿಲ್ಲೆಯಲ್ಲಿ ಮರಳಿನ ಲೂಟಿಯನ್ನು  ನಿರಂತರವಾಗಿ ಮಾಡುತ್ತಿದ್ದಾರೆ. ಇದೀಗ ಕಾಂಗ್ರೇಸ್ ಕಡಿವಾಣ ಹಾಕಿದೆ. ಅದರೂ ಉಡುಪಿ ಜಿಲ್ಲೆಯ ಆಕ್ರಮ ಮರಳು ಮಾಫಿಯಾದ ಹಿಂದೆ ಬಿ.ಜೆ.ಪಿಯ ಪ್ರಮುಖ ನಾಯಕರು ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತವಾಗಿ ಸಾರ್ವಜನಿಕರ ಪ್ರಕಟಣೆಯ ಮೂಲಕ ಸಂಪ್ರದಾಯಕ ಮರಳುಗಾರಿಕೆಗೆ ಅವಕಾಶ ನೀಡಿದ್ದಾರೆಂದು ವಿಶ್ವಾಸ್ ವಿ. ಆಮೀನ್ ತಿಳಿಸಿದ್ದಾರೆ.


Spread the love