ಮನಾಪ ಮಾಜಿ ಉಪ ಮೇಯರ್ ಜುಡಿತ್ ಮಸ್ಕರೇನ್ಹಸ್ ನಿಧನ

Spread the love

ಮನಾಪ ಮಾಜಿ ಉಪ ಮೇಯರ್ ಜುಡಿತ್ ಮಸ್ಕರೇನ್ಹಸ್ ನಿಧನ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಸಾಮಾಜಿಕ ಕಾರ್ಯಕರ್ತೆ ಜುಡಿತ್ ಮಸ್ಕರೇನ್ಹಸ್ ಸೋಮವಾರ ನಿಧನರಾಗಿದ್ದಾರೆ.

ಕೆಲವು ವರುಷಗಳಿಂದ ಅಸೌಖ್ಯದಿಂದಿದ್ದ ಅವರು ಕಳೆದ ಕೆಲವು ತಿಂಗಳಿನಿಂದ ನಗರದ ಪ್ರಶಾಂತ್ ನಿವಾಸ್ ನಲ್ಲಿ ನೆಲೆಸಿದ್ದರು.

ಬಡವರ ಬಗ್ಗೆ ಅತೀವ ಪ್ರೀತಿ ತೋರಿಸುತ್ತಿದ್ದ ಜುಡಿತ್ ಅವರು ಪತ್ರಕರ್ತೆಯಾಗಿ, ಶಿಕ್ಷಕಿಯಾಗಿ, ರಾಜಕಾರಣಿಯಾಗಿ, ಸಮಾಲೋಚಕಿಯಾಗಿ ಸಮಾಜದ ವಿವಿಧ ಸ್ಥರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಜುಡಿತ್ ಕುಷ್ಠ ರೋಗಿಗಳ ಪುನರ್ವಸಿತಿಗಾಗಿ ಮನೆಗಳನ್ನು ನಿರ್ಮಿಸಿ, ಅವರಿಗೆ ಸರಕಾರಿ ಹಾಗೂ ಇತರ ಉದ್ಯೋಗವನ್ನು ಕಲ್ಪಿಸುವಲ್ಲಿ ನೆರವಾಗಿದ್ದರು.

1931 ರಲ್ಲಿ ಅಲೋಶಿಯಸ್ ಮತ್ತು ಮ್ಯಾಗ್ದಲಿನ್ ಮಸ್ಕರೇನ್ಹಸ್ ಅವರ ಮಗಳಾಗಿ ಜನಿಸಿದ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಟಿ ಪದವಿ ಪಡೆದ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ಬಾರಿ ಕಾರ್ಪೋರೇಟರ್ ಆಗಿದ್ದು, ಉಪಮೇಯರ್ ಆಗಿ ಕೂಡ ಸೇವೆ ಸಲ್ಲಿಸಿದ್ದರು.


Spread the love