ಮಹಾದಾಯಿ ಮಧ್ಯಂತರ ಅರ್ಜಿ ವಜಾ ಖಂಡಿಸಿ ಶನಿವಾರ ಕರ್ನಾಟಕ ಬಂದ್‌

Spread the love

ಮಹಾದಾಯಿ ಮಧ್ಯಂತರ ಅರ್ಜಿ ವಜಾ ಖಂಡಿಸಿ ಶನಿವಾರ ಕರ್ನಾಟಕ ಬಂದ್‌

ಬೆಂಗಳೂರು: ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿಯು ರಾಜ್ಯದ ಮಧ್ಯಂತರ ಅರ್ಜಿ ವಜಾಗೊಳಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಕನ್ನಡ ಚಿತ್ರರಂಗ, ಎಪಿಎಂಸಿ ವರ್ತಕರ ಸಂಘ, ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಂದ್‌ ಕಾರಣದಿಂದ ಸರ್ಕಾರಿ ಬಸ್‌ಗಳು ಮತ್ತು ಆಟೊಗಳು ಶನಿವಾರ ರಸ್ತೆಗಿಳಿಯುವ ಸಾಧ್ಯತೆ ಕಡಿಮೆ ಇದೆ. ಆದರೆ, ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸಲಿವೆ.

ಆಸ್ಪತ್ರೆ, ಮೆಡಿಕಲ್‌ ಶಾಪ್‌ಗಳನ್ನು ಹೊರತು ಪಡಿಸಿ ಉಳಿದ ಅಂಗಡಿಗಳು ಶನಿವಾರ ಮುಚ್ಚಿರಲಿವೆ.

ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮ, ಕೆಎಸ್ಆರ್ಟಿಸಿ, ಬಿಎಂಟಿಸಿ, ಬೆಂಗಳೂರಿನ ಮಾಲ್, ಆಟೋ, ಟ್ಯಾಕ್ಸಿ ಚಾಲಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಹೊಟೇಲ್ ಸೇರಿದಂತೆ ಎಲ್ಲವೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ನಾಳೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಕರ್ನಾಟಕಕ್ಕೆ ಬಂದ್ ಬಿಸಿ ತಟ್ಟಲಿದೆ.

ಇನ್ನು ಖಾಸಗಿ ಶಾಲೆಗಳಿಗೆ ರಜೆ ಘೋಷಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಸೂಚನೆ ನೀಡಿದೆ. ಇನ್ನು ನ್ಯಾಯಾಧೀಕರಣ ತೀರ್ಪು ವಿರೋಧಿಸಿ ನಾಳೆ ಕನ್ನಡ ಚಿತ್ರರಂಗದವರು 11 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೂ ಬೃಹತ್ ರ್ಯಾಲಿ ನಡೆಸಲಿದೆ. ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ-ನಟಿಯರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂದ್ ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿರುವ ಬೆಂಬಲ ಹಿನ್ನೆಲೆ ನಾಳೆ ಚಿತ್ರಮಂದಿರಗಳು ಸ್ಧಗಿತಗೊಳ್ಳಲಿವೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನ ಇರುವುದಿಲ್ಲ.

ನಾಳೆ ಏನಿರಲ್ಲಾ: ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸೇವೆ, ಆಟೋ, ಟ್ಯಾಕ್ಸಿ ಸೇವೆ, ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್, ಹೊಟೇಲ್, ಏರ್ ಪೋರ್ಟ್ ನಲ್ಲಿನ ಟ್ಯಾಕಿ ಸೇವೆ ಸ್ಧಗಿತ, ಪೆಟ್ರೋಲ್ ಬಂಕ್

ಬಂದ್ ಇದ್ದರು ಏನಿರುತ್ತೆ: ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್, ತರಕಾರಿ-ಹಣ್ಣು ಮಾರುಕಟ್ಟೆ, ಹಾಲು-ಪೇಪರ್, ಮೆಟ್ರೋ ರೈಲು ಸಂಚಾರ


Spread the love