ಮಹಿಳಾ ವಿಶ್ವಕಪ್ ಕ್ರಿಕೆಟ್- ರಾಜ್ಯದ ಆಟಗಾರ್ತಿಯರಿಗೆ ರೂ.25 ಲಕ್ಷ ಪ್ರೋತ್ಸಾಹ ಧನ ; ಸಚಿವ ಪ್ರಮೋದ್

Spread the love

ಮಹಿಳಾ ವಿಶ್ವಕಪ್ ಕ್ರಿಕೆಟ್- ರಾಜ್ಯದ ಆಟಗಾರ್ತಿಯರಿಗೆ ರೂ.25 ಲಕ್ಷ ಪ್ರೋತ್ಸಾಹ ಧನ ; ಸಚಿವ ಪ್ರಮೋದ್

ಉಡುಪಿ :  ಜುಲೈ 23 ರಂದು ಇಂಗ್ಲೆಂಡಿನ ಲಂಡನ್  ಲಾಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐ.ಸಿ.ಸಿ ಮಹಿಳಾ ವಿಶ್ವಕಪ್-2017 ರ ಪಂದ್ಯದಲ್ಲಿ ರನ್ನರ್ ಅಪ್ ಆಗಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಭಿನಂದನೆ ಸಲ್ಲಿಸಿದ್ದಾರೆ.

   ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ  ಕರ್ನಾಟಕ ಮಹಿಳಾ ಕ್ರಿಕೆಟ್ ಆಟಗಾರರಾದ ವಿಜಯಪುರ ಜಿಲ್ಲೆಯ ಕು.ರಾಜೇಶ್ವರಿ ಗಾಯಕ್ವಾಡ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕು.ವೇದ ಕೃಷ್ಣಮೂರ್ತಿ ಇವರಿಗೆ ರಾಜ್ಯ ಸರ್ಕಾರದ ವತಿಯಿಂದ ತಲಾ ರೂ.25 ಲಕ್ಷಗಳಂತೆ ಒಟ್ಟು 50 ಲಕ್ಷ ಮೊತ್ತವನ್ನು ಪ್ರೋತ್ಸಾಹ ಧನವನ್ನಾಗಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love