ಮುಸ್ಲಿಮ್ ಹೆಣ್ಮಕ್ಕಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

Spread the love

ಮುಸ್ಲಿಮ್ ಹೆಣ್ಮಕ್ಕಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮಂಗಳೂರು : ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ತನ್ನ ಏಳನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

2017ರ ಫೆಬ್ರವರಿ 11ರಂದು ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಧುವಿಗೆ 5 ಪವನ್ ಚಿನ್ನ, ಮದುವೆ ವಸ್ತ್ರ ಖರೀದಿಗೆ ನಗದು, ವರನಿಗೆ ಉಡುಗೊರೆ ಹಾಗೂ ಮದುವೆ ಖರ್ಚನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಭರಿಸಲಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಕಾಸರಗೋಡು ಜಿಲ್ಲೆಗಳ ಮುಸ್ಲಿಮ್ ಸಮುದಾಯದವರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಆಯ್ಕೆ ಸಮಯದಲ್ಲಿ ಅನಾಥ, ವಿಕಲ ಚೇತನ ಮದುವೆ ವಯಸ್ಸು ಮೀರಿರುವ ಹೆಣ್ಮಕ್ಕಳ ಮದುವೆಗೆ ಆಧ್ಯತೆ ನೀಡಲಾಗುವುದು. ವರಾನ್ವೇಷಣೆಯ ಸಂಪೂರ್ಣ ಹೊಣೆಗಾರಿಕೆ ಅರ್ಜಿದಾರ ರಾಗಿದ್ದು, ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತರು ನಿಗದಿತ ಅರ್ಜಿ ನಮೂನೆಯಲ್ಲಿ ವಧೂ-ವರನ ಹೆಸರು, ವಯಸ್ಸು, ಪೂರ್ಣ ಅಂಚೆ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದು, ಜಮಾಅತ್‍ನ ದೃಡೀಕರಣದೊಂದಿಗೆ ಡಿ. 5ರ ಒಳಗಾಗಿ, ಉಮರ್ ಯು. ಹೆಚ್. ಸಂಚಾಲಕರು, ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹ ಸಂಘಟನಾ ಸಮಿತಿ, ಸಿ-24, 2ನೇ ಮಹಡಿ, ಅಲ್ ರಹಬಾ ಪ್ಲಾಝಾ ನೆಲ್ಲಿಕಾಯಿ ರಸ್ತೆ, ಮಂಗಳೂರು – 575001 ದೂ. ಸಂ. 9845054191 ವಿಳಾಸಕ್ಕೆ ಕಳುಹಿಸುವಂತೆ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಬಿಡಬ್ಲ್ಯುಎಫ್‍ನ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ, ಉಪಾಧ್ಯಕ್ಷರಾದ ಹಂಝ ಅಬ್ದುಲ್ ಖಾದರ್ ಮತ್ತು ರಫೀಕ್ ಕೃಷ್ಣಾಪುರ, ಪ್ರಧಾನ ಸಲಹೆಗಾರರಾದ ಬಶೀರ್ ಬಜ್ಪೆ ಹಾಗೂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love