ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಇಥಿಯೋಪಿಯದ ಕೃಷಿ ಸಚಿವರ ಭೇಟಿ

Spread the love

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಇಥಿಯೋಪಿಯದ ಕೃಷಿ ಸಚಿವರ ಭೇಟಿ

ಇಥಿಯೋಪಿಯದ ಕೃಷಿ ಸಚಿವರಾದ ಅಹ್ಮದ್ ಅಲ್ಲೇ ಅವರು ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿನ ಶಿಸ್ತು ಬದ್ಧ ಆಡಳಿತ ವ್ಯವಸ್ಥೆಯನ್ನು ನೋಡಿ ವಿದ್ಯಾಲಯದ ಅಭಿವೃದ್ಧಿಗೆ ಶಿಸ್ತು ಬದ್ಧ ಆಡಳಿತವು ತುಂಬಾ ಮಹತ್ವವನ್ನು ವಹಿಸುತ್ತದೆ. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಮತ್ತು ಸಿಬ್ಬಂಧಿ ವರ್ಗದ ಶಿಸ್ತು ಕಾರ್ಯ ವೈಖರಿಯು ತುಂಬಾ ಇಷ್ಟವಾಯಿತು ಅಲ್ಲದೆ ಕಾಲೇಜಿನ ಎಲ್ಲಾ ಸವಲತ್ತುಗಳನ್ನು ವಿಕ್ಷಿಸಿ, ಮೂಡ್ಲಕಟ್ಟೆ ಕಾಲೇಜು ಕಲಿಕೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಗಮನಿಸಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಥಿಯೋಪಿಯದ ಗೌರವ ಕೌನ್ಸಿಲರಾಗಿರುವ ಉದ್ಯಮಿ ಮಹೇಶ ಜಿ. ಶೆಟ್ಟಿಯವರು ಉಪಸ್ಥಿತರಿದ್ದರು.

ಸಚಿವರು ಎಲ್ಲಾ ವಿಭಾಗದ ಮುಖ್ಯಸ್ಥರ ಜೊತೆ ಕಾಲೇಜಿನ ವಿವಿಧ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಲಭ್ಯವಿರುವ ಸವಲತ್ತುಗಳ ಮಾಹಿತಿಗಳನ್ನು ಪಡೆದುಕೊಂಡರು. ಕಾಲೇಜಿನ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿಯವರು ಸಚಿವರಿಗೆ ಕಾಲೇಜಿನ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಶುಂಪಾಲರಾದ ಡಾ. ಕಾಟಯ್ಯ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.


Spread the love