ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ವಿದ್ಯಾರ್ಥಿಗಳಿಂದ ‘ಸ್ಮಾರ್ಟ್ ಬಿನ್’ ಮಾದರಿ ತಯಾರಿ

Spread the love

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶ್ರೀನಿಧಿ ರಾವ್, ಪೂಜಾ ಎನ್. ರಾವ್ ಹಾಗೂ ಸಂತೃಪ್ತಿ ಶೆಟ್ಟಿ ಇವರು ಪ್ರೊ| ದೀಪಕ್ ಸಾಲಿಯಾನ್ ಮತ್ತು ಪ್ರೊ| ನವೀನ್ ಬಿ.ಎಮ್. ಇವರ ಮಾರ್ಗದರ್ಶನದಲ್ಲಿ “ಸ್ಮಾರ್ಟ್ ಬಿನ್” ಎಂಬ ಮಾದರಿಯನ್ನು ತಯಾರಿಸಿದ್ದಾರೆ.

image001smart-bin-mitk-20160524 image004smart-bin-mitk-20160524 image002smart-bin-mitk-20160524

ಕುಂದಾಪುರ ತಾಲೂಕಿನ ಸಮೀಕ್ಷೆಯನ್ನು ಮಾಡಿದ ಬಳಿಕ ಈ ಸಾಧನದಿಂದಾಗಿ ಕಾರ್ಮಿಕರ ನೇಮಕ, ವಾಹನ ಖರೀದಿ ಮತ್ತು ಇತ್ಯಾದಿ ಸಂಪನ್ಮೂಲಗಳನ್ನು ಶೇಕಡಾ 40 ರಷ್ಟು ಕಡಿಮೆಮಾಡಬಹುದಾಗಿರುತ್ತದೆ.

ಈ ಕಸ ಸಂಗ್ರಹಣಾ ಮಾದರಿಯು ಕಸ ತುಂಬಿದ ತಕ್ಷಣ ವಾಹನ ಚಾಲಕರಿಗೆ ಕರೆಯನ್ನು ಕಳಿಸುತ್ತದೆ. ನಂತರ ವಾಹನ ಚಾಲಕರು ತುಂಬಿದ ಕಸವನ್ನು ತಮ್ಮ ವಾಹನದಲ್ಲಿ ಭರ್ತಿಮಾಡಿಕೊಂಡು ಹೋಗುತ್ತಾರೆ. ಈ ಸ್ಮಾರ್ಟ್ ಬಿನ್‍ನಲ್ಲಿ ಒಂದು ಕ್ಯಾಮರಾವನ್ನು ಅಳವಡಿಸಲಾಗಿರುತ್ತದೆ. ಒಂದು ವೇಳೆ ಕಸವನ್ನು ಕೊಂಡೊಯ್ಯುವ ಸಮಯದಲ್ಲಿ ಜನರು “ಸ್ಮಾರ್ಟ್ ಬಿನ್”ನ್ನು ದುರುಪಯೋಗಪಡಿಸಿಕೊಂಡಲ್ಲಿ ಪ್ರಧಾನ ಅಧಿಕಾರಿಗಳಿಗೆ ಸಂದೇಶವನ್ನು ರವಾನಿಸುತ್ತದೆ.

ಈ ಸಾಧನವು ಪರಸರ ಸ್ನೇಹಿಯಾಗಿರುತ್ತದೆ. ಈ ಮಾದರಿಯಿಂದಾಗಿ ಕೆಲಸಗಾರರ ಹಾಗೂ ವಾಹನಗಳ ಬಳಕೆ ಕಡಿಮೆಯಾಗುತ್ತದೆ ಹಾಗೂ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ ಎಂದು ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಪ್ರೊ| ನವೀನ್ ಬಿ.ಎಂ. ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮಾದರಿಯಲ್ಲಿ ಪ್ಲಾಸ್ಟಿಕ್ ಹಾಗೂ ಮೆಟಲ್‍ನ್ನು ಬೇರ್ಪಡಿಸುವಂತಹ ಉಪಕರಣ ಮಾದರಿಯನ್ನು ತಯಾರಿಸಿ ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ| ಮೋಹನ್‍ದಾಸ್ ಭಟ್ ಸಲಹೆ ನೀಡಿದರು.


Spread the love