ಮೊಬೈಲ್ ಕಳ್ಳತನ ಪ್ರಕರಣದ ಆರೋಪಿಯ ಬಂಧನ

Spread the love

ಮೊಬೈಲ್ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಮಂಗಳೂರು : ಮಂಗಳೂರು ದಕ್ಷಿಣ  ಪೊಲೀಸ್  ಠಾಣೆಯಲ್ಲಿ ವರದಿಯಾದ  ಮೊಬೈಲ್ ಕಳ್ಳತನ  ಪ್ರಕರಣದ ಆರೋಪಿಯಾದ  ಜಗದೀಶ್   ಎಂಬಾತನನ್ನು ಈ ದಿನ ದಿನಾಂಕ 21-02-2019 ರಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿ, ಕಳ್ಳತನ ಮಾಡಿದ  6 ಮೊಬೈಲನ್ನು ಒಟ್ಟು  48,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬಂಧಿತ ಾರೋಪಿಯನ್ನು ಮೂಡಬಿದರೆ ತಾಕೋಡೆ ನಿವಾಸಿ ಜಗದೀಶ ಶೆಟ್ಟಿ @ಜಗ್ಗ@ ರಾಜೇಶ್ (36) ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ  : ಪಿರ್ಯಾದಿದಾರರು  ಮತ್ತು ಅವರ ಊರಿನವರೇ ಆದ ಅಯ್ಯನಾರ್,ಪೆರಿಸ್ವಾಮಿ ತರುಮನ್ ರವರು ದಿನಾಂಕ17-02-2019 ರಂದು ರಾತ್ರಿ ಮಂಗಳೂರು ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಚೈತನ್ಯಾ ಮತ್ತು ಪರಿವಾರ ಹೋಟೆಲ್  ಮಧ್ಯೆ ಇರುವ ಅಂಗಡಿಯ ಜಗಲಿಯಲ್ಲಿ ಮಲಗುವ ಸಮಯ ಪಕ್ಕದಲ್ಲಿ ಇಟ್ಟಿದ್ದ ಸುಮಾರು 48,000/- ಮೌಲ್ಯದ ಒಟ್ಟು 6 ಮೊಬೈಲ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ  ಪಿರ್ಯಾದಿದಾರರಾದ ಧರ್ಮರವರು  ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

   ಗುರುವಾರ ಈ ಪ್ರಕರಣದ ಆರೋಪಿ ಜಗದೀಶ್ ಎಂಬಾತನು  ಮಂಗಳೂರು  ನಗರ ಬಿಜೈ ಕೆ.ಎಸ್ ಆರ್.ಟಿ.ಸಿ  ಬಸ್ಸ್  ನಿಲ್ದಾಣದಲ್ಲಿರುವ ಇರುವ ಬಗ್ಗೆ ಖಚಿತ ವರ್ತಮಾನ ಪಡೆದ  ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಮಂಜುಳಾ.ಎಲ್  ರವರು ಸಿಬ್ಬಂದಿಗಳ ಸಹಾಯದಿಂದ ಆರೋಫಿಯನ್ನು ದಸ್ತಗಿರಿ ಮಾಡಿ ಈ ಪ್ರಕರಣದಲ್ಲಿ ಕಳ್ಳತನ ಮಾಡಿದ ಸುಮಾರು 48,000/- ಮೌಲ್ಯದ ಒಟ್ಟು 6 ಮೊಬೈಲ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.

                ಆರೋಪಿ ಜಗದೀಶ ಎಂಬಾತನ ಮೇಲೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 2 ಮನೆಕಳ್ಳತನ 01 ಗಾಂಜಾ ಮಾರಾಟ ಪ್ರಕರಣ, ಮೈಸೂರು ಲಷ್ಕರ್ ಪೊಲೀಸ್ ಠಾಣೆಯಲ್ಲಿ 01 ಮನೆ ಕಳ್ಳತನ ಪ್ರಕರಣ, ಮಂಗಳೂರು ರೈಲ್ಪೆ ಪೊಲೀಸ್ ಠಾಣೆಯಲ್ಲಿ 02 ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್ ,ಐಪಿಎಸ್. ರವರ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ)  ಹನುಮಂತರಾಯ,  ಐಪಿಎಸ್  ಮಾನ್ಯ ಉಪ ಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ)   ಉಮಾಪ್ರಶಾಂತ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಭಾಸ್ಕರ್ ವಿ ಇವರ ಮಾರ್ಗದರ್ಶನದಲ್ಲಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ  ಪೊಲೀಸ್ ನಿರೀಕ್ಷಕರಾದ ಕೆ.ಎಮ್, ಶರೀಫ್  ರವರ ನಿರ್ದೇಶನದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ.ಎಲ್  ಹಾಗೂ ಠಾಣಾ  ಸಿಬ್ಬಂದಿಗಳ ಸಹಕಾರದಿಂದ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ.

.


Spread the love