ರಜತಪಥದ ನೃತ್ಯ ಸಂಗೀತ ನಾಟಕಗಳ ಉತ್ಸವ

Spread the love

ಉಡುಪಿ: ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಜತ ಮಹೋತ್ಸವ ಸಮಿತಿ ನೃತ್ಯನಿಕೇತನ ಕೊಡವುರು ತನ್ನ ಸರಣಿ ನೃತ್ಯಮಾಲಿಕೆಯಲ್ಲಿ ಜೂನ್ 12 ರಿಂದ ಜೂನ್ 21ರವರೆಗೆ ಹತ್ತು ದಿವಸಗಳ ನೃತ್ಯ, ಸಂಗೀತ, ನಾಟಕಗಳ ಉತ್ಸವವನ್ನು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಆಯೋಜಿಸಿದೆ.

ಜೂನ್ 12 ರಂದು ವಿದುಷಿ ಶ್ರೀಮತಿ ಮಾನಸಿ ಸುಧೀರ್‍ರವರ “ಮಹಾನಾಯಕಿ ಹಿಡಿಂಬೆ”, ಜೂನ್ 13 ರಂದು ಉಡುಪಿಯ ಸಂಗೀತದ ತ್ರಿಮೂರ್ತಿಗಳಾದ ವಿದ್ವಾನ್ ಸುಧೀರ್ ರಾವ್ ಕೊಡವೂರು, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮತ್ತು ಮಧೂರು ನಾರಾಯಣ ಶರಳಾಯರಿಂದ `ತ್ರಿವಳಿಗಾನಾಮೃತಂ’, ಜೂನ್ 14 ರಂದು ಬೆಂಗಳೂರಿನ ಖ್ಯಾತ ನೃತ್ಯಕಲಾವಿದೆ ದಿವ್ಯಾ ರವಿಯವರಿಂದ `ಮಂಜರಿ’, ಜೂನ್ 15 ರಂದು ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರುರವರಿಂದ `ನೃತ್ಯವರ್ಷ’, ಜೂನ್ 16 ರಂದು ರಥಬೀದಿ ಗೆಳೆಯರು ಉಡುಪಿ ಕಲಾವಿದರಿಂದ `ಮಹಿಳಾಭಾರತ’ ನಾಟಕ ಪ್ರದರ್ಶನ, ಜೂನ್ 17 ರಂದು ನೃತ್ಯನಿಕೇತನ ಕೊಡವೂರು ಕಲಾವಿದರಿಂದ `ಚಿತ್ರಾ’ ನೃತ್ಯನಾಟಕ, ಜೂನ್ 18 ರಂದು ತೆಂಕುತಿಟ್ಟು ವೇದಿಕೆ ಉಡುಪಿ ಇವರಿಂದ ಯಕ್ಷಗಾನ ರಾತ್ರಿ ಆಟ. ಜೂನ್ 19 ರಂದು ನೃತ್ಯನಿಕೇತನ ಕೊಡವೂರು ಕಲಾವಿದರಿಂದ `ನೃತ್ಯದರ್ಪಣಂ’, ಜೂನ್ 20 ರಂದು ದೀಪಕ ಹೆಬ್ಬಾರ್ ಬಳಗದವರಿಂದ `ವೇಣುವಾದನ’, ಜೂನ್ 21 ರಂದು ಕು| ಸುರಭಿ ಸುಧೀರ್ ರವರಿಂದ `ನೃತ್ಯಾರ್ಪಣಂ’ ಭರತನಾಟ್ಯ ಕಾರ್ಯಕ್ರಮ ನಡೆಯಲಿರುವುದೆಂದು ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love