ರಸ್ತೆಯಲ್ಲಿ ಮೋದಿ ಮೋದಿ ಎನ್ನುವ ಯುವಕರಿಗೆ ಪ್ರಧಾನಿ ಕೊಟ್ಟ ಕೊಡುಗೆ ಏನು – ಕುಮಾರಸ್ವಾಮಿ ಪ್ರಶ್ನೆ

Spread the love

ರಸ್ತೆಯಲ್ಲಿ ಮೋದಿ ಮೋದಿ ಎನ್ನುವ ಯುವಕರಿಗೆ ಪ್ರಧಾನಿ ಕೊಟ್ಟ ಕೊಡುಗೆ ಏನು – ಕುಮಾರಸ್ವಾಮಿ ಪ್ರಶ್ನೆ

ಉಡುಪಿ: ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ.ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆ ಇಲ್ಲ ಅಂತ ಬಿಂಬಿಸಲಾಗ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಅವರು ಭಾನುವಾರ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ಉಡುಪಿ ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆ ಹಾಗೂ ಸಮಾಜ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳುವಳಿಕೆ ಉಳ್ಳವರು, ಪ್ರಜ್ಞಾವಂತರುತಿಳುವಳಿಕ ಇರುವ ಜನರು ಯಾಕೆ ಬಿಜೆಪಿಯನ್ನು ಬೆಂಬಲಿಸ್ತೀರಿ ಎಂದು ಕೇಳಿದ ಅವರು,ಇತ್ತೀಚೆಗೆ ಒಂದು ಶೋಕಿ ಆರಂಭ ಆಗಿದೆ. ಯುವಕರು ರಸ್ತೆಯಲ್ಲಿ ಮೋದಿ ಮೋದಿ ಅಂತಾರೆ ಹಾಗೆ ಘೊಷಣೆ ಕೂಗುವ ಹುಡುಗರಿಗೆ ಮೋದಿ ಏನು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು?

ನಾನು ಕರಾವಳಿ ಜನರ ಬಗ್ಗೆ ಯಾವತ್ತೂ ಲಘುವಾಗಿ ಮಾತಾಡಿಲ್ಲ.ಊರಿಗೆ ಶಾಲೆ ಬೇಕು ಅಂದ್ರೆ ಕುಮಾರಸ್ವಾಮಿ ಬೇಕು,ಆದ್ರೆ ಯುವಕರು ಮೋದಿಗೆ ವೋಟ್ ಹಾಕ್ತೀವಿ ಅಂತಾರೆ. ನಾನು ಹೀಗೆ ಕೇಳಿದ್ರೆ ಏನು ತಪ್ಪು?

ಮೋದಿ ಒಬ್ಬರೇ ದೇಶ ರಕ್ಷಣೆ ಮಾಡಬಲ್ಲರು ಅನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತದೆ ಹಾಗಾದರೆ ವಾಜಪೇಯಿ ಈ ರಾಷ್ಡ್ರಕ್ಕೆ ಭದ್ರತೆ ಕೊಟ್ಟಿಲ್ವಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಮೋದಿ ಮಂಗಳೂರು ಮೂಲದ ಸಂಸ್ಥೆಗಳನ್ನ ದಿವಾಳಿ ಎಬ್ಬಿಸಿದ್ದಾರೆ. ವಿಜಯಾ ಬ್ಯಾಂಕ್ ಗುಜರಾಥ್ ನ ಬರೋಡಾ ಬ್ಯಾಂಕ್ ಗೆ ವಿಲೀನ ಮಾಡಿದರು ವಿಜಯ ಬ್ಯಾಂಕ್ ಉಳಿವಿಗೆ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಪುಲ್ವಾಮ ದಾಳಿ ಮೊದಲೇ ಗೊತ್ತಿತ್ತು ಎಂದು ನಾನು ಹೇಳಿಯೇ ಇಲ್ಲ ಅಲ್ಲದೆ ಪುಲ್ವಾಮಾ ಹೆಸರನ್ನೇ ನಾನು ಹೇಳಿರಲಿಲ್ಲ. ಎರಡು ವರ್ಷದ ಹಿಂದೆ ನಿವೃತ್ತ ಅಧಿಕಾರಿಯೊಬ್ರು ಹೇಳಿದ್ರು. ಚುನಾವಣೆ ವೇಳೆ ಯುದ್ದದ ವಾತಾವರಣ ಬರುತ್ತೆ ಅಂದಿದ್ದರು ಅದನ್ನಷ್ಟೇ ನಾನು ಹೇಳಿದ್ದು ಬಿಟ್ಟರೆ ಯಾವುದೇ ವಿವಾದಾಸ್ಪದ ಹೇಳಿಕೆಗೆ ನನ್ನ ಸಹಮತವಿಲ್ಲ ಎಂದರು.

ದೇಶದ ರಕ್ಷಣೆ ಬಗ್ಗೆ ಕೇವಲ ಮೋದಿಗೆ ಮಾತ್ರ ಕಾಳಜಿ ಅಲ್ಲ ಹಿಂದೆ ಇಂದಿರಾಗಾಂಧಿ ದೇಶದ ರಕ್ಷಣೆ ಮಾಡಿಲ್ವಾ? ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್ ಜೈ ಕಿಸಾನ್ ಅಂದ್ರು ಈ ರೀತಿಯ ಘೋಷಣೆ ಮಾಡಿದ ಪ್ರಧಾನಿ ಅವರೊಬ್ಬರೇ ಆಗಿದ್ದು, ಆದರೆ ನಾವೇ ಹೋಗಿ ಬಾಂಬ್ ಹಾಕಿದ್ದೇವೆ ಅಂದಿಲ್ಲ.

ಈ ದೇಶದ ರಕ್ಷಣೆ ಮಾಡೋದು ಸೈನ್ಯದ ಮುಖ್ಯಸ್ಥರು ಅವರನ್ನು ದುರುಪಯೋಗ ಪಡಿಸಿಕೊಳ್ಳುವ ವ್ಯವಸ್ಥೆ ಇಂದು ದೇಶದಲ್ಲಿ ಸೃಷ್ಟಿಯಾಗಿದೆ. ಸೈನ್ಯ ನಿರ್ವಹಣೆ ಮಾಡೋದು ಪ್ರಧಾನಿ ಅಲ್ಲ, ರಾಷ್ಡ್ರಪತಿ ಎಂದು ಹೇಳಿದರು.

ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವೆ ಡಾ ಜಯಮಾಲಾ, ಸಚಿವ ಯು ಟಿ ಖಾದರ್, ಮಾಜಿ ಶಾಸಕರಾದ ಯು ಆರ್ ಸಭಾಪತಿ, ಗೋಪಾಲ ಭಂಡಾರಿ, ಅಮರನಾಥ ಶೆಟ್ಟಿ, ಪರಿಷತ್ ಸದಸ್ಯ ಭೋಜೆಗೌಡ, ನಾಯಕರಾದ ಎಮ್ ಎ ಗಫೂರ್, ಅಶೋಕ್ ಕುಮಾರ್ ಕೊಡವೂರು, ಯೋಗಿಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು


Spread the love