ರಾಜೇಶ್ ಕೊಟ್ಯಾನ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ

Spread the love

ರಾಜೇಶ್ ಕೊಟ್ಯಾನ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ

ದಿನಾಂಕ: 12-04-2016 ರಂದು ಮಂಗಳೂರು ನಗರದ ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದ ರಾಜು ಕೊಟ್ಯಾನ್ ಎಂಬವರನ್ನು ಕೊಲೆ ನಡೆಸಿದ ಆರೋಪಿಗಳ ಪೈಕಿ ಮೂರು ಜನರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

Rajesh-Kotian-01

ದಿನಾಂಕ: 12-04-2016 ರಂದು ಬೆಳಗ್ಗಿನ ಜಾವ ಸುಮಾರು 2-40 ಗಂಟೆಯ ಸಮಯಕ್ಕೆ ಉಳ್ಳಾಲ ಮೊಗವೀರಪಟ್ನ ವಾಸಿ ರಾಜೇಶ್ ಕೊಟ್ಯಾನ್ ಯಾನೆ ರಾಜ ಎಂಬವರು ಎಂದಿನಂತೆ ತಮ್ಮ ಮನೆಯಿಂದ ಉಳ್ಳಾಲ ಕೋಟೆಪುರ ಜೆಟ್ಟಿ ಕಡೆಗೆ ಬೋಟಿನಲ್ಲಿ ಮೀನುಗಾರಿಕೆಯ ಬಗ್ಗೆ ಕೆಲಸಕ್ಕೆ ಹೋದವರನ್ನು ಯಾರೋ ದುಷ್ಕಮಿ ಗಳು ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಪ್ಯಾಕ್ಟರಿಯ ಬಳಿ ಕೊಲೆ ಮಾಡಿರುತ್ತಾರೆ ಎಂದು ಮೃತರ ತಮ್ಮ ಜಗದೀಶ ಕೊಟ್ಯಾನ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕೊಲೆ ಪ್ರಕರಣವನ್ನು ಭೇದಿಸಲು ಮಂಗಳೂರು ನಗರ ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಶ್ರೀ. ಕಲ್ಯಾಣ್ ಶೆಟ್ಟಿ, ಮತ್ತು ಇನ್ಸ್ ಪೆಕ್ಟರ್ ರವರಾದ ವೆಲೆಂಟೈನ್ ಡಿ’ಸೋಜ, ಅಶೋಕ್, ಪಿ, ದಿನಕರ್ ಶೆಟ್ಟಿ, ಮತ್ತು ಪಿಎಸ್ಐ ಶ್ಯಾಮಸುಂದರ್, ಭಾರತಿ, ರಾಜೇಂದ್ರ ರವರುಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು, ಅಬ್ದುಲ್ ಮುತ್ತಾಲಿಪ್ ರವರೊಂದಿಗೆ ಕಾನೂನಿನೊಂದಿಗೆ ಸಂಘರ್ಷಗೊಳಗಾದ ಬಾಲಕನೊಬ್ಬನನ್ನು ದಿನಾಂಕ 14-04-2016 ರಂದು ಮದ್ಯಾಹ್ನ 3-00 ಗಂಟೆಗೆ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ. ಈ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಪತ್ತೆ ಕಾರ್ಯ ಜ್ಯಾರಿಯಲ್ಲಿದೆ.

ಆರೋಪಿಗಳ ವಿವರ:

1. ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು ಪ್ರಾಯ 19 ವರ್ಷ ಉಳ್ಳಾಲ ಗ್ರಾಮ

2. ಅಬ್ದುಲ್ ಮುತ್ತಾಲಿಪ್ ಯಾನೆ ಮುತ್ತು , ಪ್ರಾಯ 20 ವರ್ಷ ಉಳ್ಳಾಲ ಗ್ರಾಮ


Spread the love