ರೋಷನ್ ಬೇಗ್ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ದಾಖಲು

Spread the love

ರೋಷನ್ ಬೇಗ್ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ದಾಖಲು

ಉಡುಪಿ: ಮಾಧ್ಯಮಗಳ ಮುಖಾಂತರ ಸಾರ್ವಜನಿಕ ಸಭೆಯಲ್ಲಿ ದೇಶದ ಪ್ರಧಾನಿ ಹಾಗೂ ಬಿಜೆಪಿ ನಾಯಕರುಗಳ ವಿರುದ್ದ ಅವಹೇಳನಕಾರಿ ಮಾತು ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮು ಪ್ರಚೋದನೆ, ಜಾತಿ ಸಾಮರಸ್ಯ ಕೆಡಿಸುವಿಕೆ, ಸಾರ್ವಜನಿಕ ಶಾಂತಿ ಭಂಗ, ಗಲಭೆಗೆ ಪ್ರಚೋದನೆ ಹಾಗೂ ಮತೀಯ ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುತ್ತಿರುವ ಸಚಿವ ರೋಷನ್ ಬೇಗ್ ವಿರುದ್ದ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಯುವ ಮೋರ್ಚಾ ಉಡುಪಿ ನಗರ ಠಾಣೆಗೆ ಶನಿವಾರ ದೂರು ನೀಡಿತು.

ಕರ್ನಾಟಕ ಸರಕಾರದ ವಕ್ಫ್ ಸಚಿವರಾದ ರೋಷನ್ ಬೇಗ್ ಅವರು ಬೆಂಗಳೂರಿನ ಹೊರವಲಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ಆ ಶಬ್ದಗಳನ್ನು ಕನ್ನಡ ಭಾಷೆಯಲ್ಲಿ ಉಚ್ಚರಿಸುತ್ತಾ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೆಟ್ಟ ಶಬ್ದಗಳಿಂದ ಬೈದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ದೇಶದ ಪ್ರಧಾನಿಯ ಘನತೆಯ ಅಗೌರವನ್ನುಂಟುಮಾಡಿ ನಿಂದಿಸುವ ಮುಕಾಂತರ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅರಾಜಕತೆಯನ್ನು ಉಂಟು ಮಾಡುವ ದೃಷ್ಟಿಯಿಂದ ಕೋಮು ಸೌಹಾರ್ದತೆಯನ್ನು ಹಾಳುಗೆಡವಿದ್ದು, ಕೋಮು ಗಲಾಟೆಗೆ ಪ್ರಚೋದನೆ ಮಾಡಿದ್ದು, ದೇಶ ಹಾಗೂ ರಾಜ್ಯದಲ್ಲಿ ಶಾಂತಿ ಪಾಲನೆಗೆ ಸೌಹಾರ್ದತೆಗೆ ಭಂಗ ತಂದಿದ್ದು, ಅದರ ಜೊತೆಗೆ ರಾಜ್ಯ ನಾಯಕರುಗಳ ಬಗ್ಗೆ ಅಸಂಬದ್ದ ಶಬ್ದಗಳಿಂದ ನಿಂದಿಸಿರುವುದು ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಅವರು ಮಾಡುವ ಭಾಷಣ ಹಾಗೂ ಅವರ ನಾಲಗೆಯಿಂದ ಬಂದ ಮಾತುಗಳು ಸಾಮಾಜಿಕ ಜಾಲತಾಣದಿಂದ ಮೂಲಕ ರಾಷ್ಟ್ರದಾದ್ಯಂತ ಪ್ರಚಾರವಾಗಿದೆ. ಆದ್ದರಿಂದ ಸಚಿವ ರೋಷನ್ ಬೇಗ್ ವಿರುದ್ದ ಐಟಿ ಕಾಯಿದೆಯನ್ವಯ ಕೇಸು ದಾಖಲಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ದೂರಿನಲ್ಲಿ ಕೋರಲಾಗಿದೆ.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ನಗರ ಮೋರ್ಚಾ ಅಧ್ಯಕ್ಷರಾದ ಅಕ್ಷಿತ್ ಶೆಟ್ಟಿ ಹೆರ್ಗ, ಇತರ ಪದಾಧಿಕಾರಿಗಳಾದ ಗಿರೀಶ್ ಅಂಚನ್, ರೋಶನ್ ಶೆಟ್ಟಿ, ವಿಜಯ್ ಕುಮಾರ್, ಪವನ್ ಶೆಟ್ಟಿ, ಶೋಧನ್ ಕುಮಾರ್, ಭರತ್ ಭಟ್, ವಿಶ್ವಾಸ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love