ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಇಂದು ಸ್ಥಳದಲ್ಲೇ 52 ದೂರು ಅರ್ಜಿ ಇತ್ಯರ್ಥ

Spread the love

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಇಂದು ಸ್ಥಳದಲ್ಲೇ 52 ದೂರು ಅರ್ಜಿ ಇತ್ಯರ್ಥ

ಉಡುಪಿ: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಸಿದ ಸಾರ್ವಜನಿಕ ದೂರು ವಿಚಾರಣೆಯಲ್ಲಿ 52 ದೂರುಗಳಿಗೆ ತೀರ್ಪು ನೀಡಿದರು.

ದೂರು ವಿಚಾರಣೆ ವೇಳೆ ಜಿಲ್ಲೆಯ 158 ಪಂಚಾಯತಿಗಳು ಮತ್ತು 5 ಸ್ಥಳೀಯಾಡಳಿತಗಳಲ್ಲೂ ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 62 ಪಂಚಾಯಿತಿ ಮತ್ತು 4 ಸ್ಥಳೀಯಾಡಳಿತ ಸಂಸ್ಥೆಗಳು ತ್ಯಾಜ್ಯ ವಿಲೇಗೆ ವೈಜ್ಞಾನಿಕ ರೀತಿಯಲ್ಲಿ ಪರಿಣಾಮಕಾರಿ ಕ್ರಮಕೈಗೊಳ್ಳುವುದು ಎಲ್ಲ ಪಿಡಿಒ ಮತ್ತು ಮುಖ್ಯಾಧಿಕಾರಿಗಳ ಕರ್ತವ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಹೇಳಿದರು.

ಇದೇ ವೇಳೆ ಪಂಚಾಯಿತಿ ಒಳಚರಂಡಿ ವ್ಯವಸ್ಥೆಯ ಲೋಪದಿಂದಾಗಿ ಜಮೀನಿನಲ್ಲಿ ಕೊಳಚೆ ನೀರು ಸಂಗ್ರಹವಾಗುವ ಬಗ್ಗೆ ದೂರನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಮೇಲಿನ ನಿರ್ದೇಶನವನ್ನು ನೀಡಿದರು.

ನಿವಾಸಿಗಳ ಆರೋಗ್ಯದ ಬಗ್ಗೆ, ಸ್ವಚ್ಫ ಪರಿಸರದ ಬಗ್ಗೆ ಈಗಾಗಲೇ ಜಿಲ್ಲಾಡಳಿತ ತರಬೇತಿ ನೀಡಿದ್ದನ್ನು ಅನುಷ್ಠಾನಕ್ಕೆ ತರಲು ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲು ಪಂಚಾಯಿತಿ ಜನಪ್ರತಿನಿಧಿಗಳು ಬದ್ಧರಾಗಿರಬೇಕೆಂದು ಅವರು ಹೇಳಿದರು.

ಇದೇ ರೀತಿ ಅರ್ಹ 94 ಸಿ ಮತ್ತು 94 ಸಿಸಿ ಫಲಾನುಭವಿಗಳಿಗೆ ವಿಳಂಬವಿಲ್ಲದೆ ಭೂಮಿಯ ಹಕ್ಕನ್ನು ನೀಡುವ ಬಗ್ಗೆ ಕಾರ್ಕಳದವರ ದೂರು ಪರಿಶೀಲನೆ ವೇಳೆ ಎಲ್ಲರಿಗೂ ಅನ್ವಯವಾಗುವಂತೆ ನಿರ್ದೇಶನ ನೀಡಿದರು.

ಹೆಚ್ಚಿನ ದೂರುಗಳು ಭೂಮಿಗೆ ಸಂಬಂದಿಸಿದ್ದು , ಮರಳುಗಾರಿಕೆ, ರೈತಸಂಪರ್ಕ ಕೇಂದ್ರ ಬೇಡಿಕೆಗೆ ಸಂಬಂಧಿಸಿದವುಗಳಿದ್ದವು. ಕೆ ಎಸ್ ಆರ್ ಟಿ ಸಿ ವಿರುದ್ಧ ಖಾಸಗಿ ಬಸ್ ಮಾಲೀಕರ ದೂರಿದ್ದವು.

ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಎ ಮೋಹನ್, ರಶ್ಮಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್ ಉಪಸ್ಥಿತರಿದ್ದರು.


Spread the love