ವಿಟ್ಲ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಪ್ರಸಾರ ನಾಲ್ವರ ಬಂಧನ

Spread the love

ವಿಟ್ಲ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಪ್ರಸಾರ ನಾಲ್ವರ ಬಂಧನ

ವಿಟ್ಲ : ಕಿಳಂಜದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳೂ ಸುದ್ದಿ ಹಬ್ಬಿಸುತ್ತಿದ್ದ ನಾಲ್ಕು ಮಂದಿಯನ್ನು ಪೋಲಿಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ತಮೀಮ್ (28), ಅಬ್ದುಲ್ ರೆಹಮಾನ್ (35), ಮೊಹಮ್ಮದ್ ಝಕ್ರಿಯಾ(25) ಮತ್ತು ಸುಲೇಮಾನ್ (38) ಎಂದು ಗುರುತಿಸಲಾಗಿದೆ.

ವಿಟ್ಲದಲ್ಲಿ ಎರಡು ಕೋಮಿನ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಕೋಮು ಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲ ತಾಣದಲ್ಲಿ ಪಾರ್ವರ್ಡ್ ಮಾಡಿದ್ದಕ್ಕಾಗಿ ಪಂಜದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.  ದಯಾನಂದ ಮತ್ತು ನಿತಿನ್ ಎಂಬವರನ್ನು ಮಂಗಳೂರು ಸಿ‌ಸಿಬಿ ವಿಭಾಗದ ಪೊಲೀಸರು ಭಾನುವಾರ ಸುಬ್ರಹ್ಮಣ್ಯ ದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love