ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಿದ್ದಗೊಂಡ ಮೈಸೂರು

Spread the love

ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಿದ್ದಗೊಂಡ ಮೈಸೂರು

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಸೋಮವಾರ ಆಯುಧಪೂಜೆಯೊಂದಿಗೆ ಕಳೆಗಟ್ಟಿತ್ತು.

ಸೋಮವಾರ ಬೆಳಗ್ಗೆ ಮೈಸೂರು ಅರಮನೆಯಲ್ಲಿ ರಾಜ, ಮಹಾರಾಜರು ಹಿಂದೆ ಬಳಸುತ್ತಿದ್ದ ಆಯುಧಗಳಿಗೆ ಪೂಜೆ ನೆರವೇರಿಸಲಾಯಿತು. ರಾಜ ಯುದುವೀರ್ ಒಡೆಯರ್ ಅರಮನೆಯ ಕಲ್ಯಾಣ ಮಂಟಪದಲ್ಲಿ ಯುದ್ಧೋಪಕರಣಗಳು ಮತ್ತು ಆಯುಧಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಅರಮನೆಯ ವಾಹನಗಳು, ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆಚ್ಚಿನ ಕಾರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಇಂದು ಮುಂಜಾನೆ ರಾಜ ವಂಶಸ್ಥರು ಸೋಮೇಶ್ವರ ದೇವಾಲಯದಲ್ಲಿ ಪಟ್ಟದ ಕತ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರಮನೆ ಆನೆ, ಒಂಟೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ನಾಡಿನ ಜನತೆ ಎದುರು ನೋಡುತ್ತಿದ್ದು. ಅಧಿದೇವತೆ ಚಾಮುಂಡಿಯ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲು ಅರ್ಜುನ ಸಿದ್ದನಾಗುತ್ತಿದ್ದಾನೆ.

ಮಂಗಳವಾರ ಬೆಳಗ್ಗೆ ಅರ್ಜುನನಿಗೆ ಸ್ನಾನ ಮಾಡಿಸಿ 7 ಗಂಟೆ ಸುಮಾರಿಗೆ ಬನ್ನಿ ಮಂಟಪಕ್ಕೆ ಇತರೆ ಆನೆಗಳ ಜೊತೆ ಮೆರವಣಿಗೆ ಕರೆ ತರುತ್ತಾರೆ. ಅಲ್ಲಿಂದ ಅಂಬಾರಿ ಆರಂಭವಾಗುತ್ತದೆ.


Spread the love