‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ

Spread the love

‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ

ಮಂಗಳೂರು: `ವ್ಯಾಲೆಂಟೈನ್ ಡೇ’ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು  ತಡೆಯಲು ಶಾಲಾ-ಮಹಾವಿದ್ಯಾಲಯದಲ್ಲಿ ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಪ್ರೋತ್ಸಾಸಿಸುವ ಬಗ್ಗೆ ದ.ಕ ಎಸ್ಪಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಗೆ ಮನವಿ ನೀಡಲಾಯಿತು.

ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕøತಿಕ ದೇಶದಲ್ಲಿ 14 ಫೆಬ್ರವರಿಯಂದು `ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ಧೇಶದಿಂದ ಪಾಶ್ಚಾತ್ಯರ ಈ ಅಂದಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಾತ್ಯರ ಈ ವ್ಯಾಲೆಂಟೈನ್ ದಿನ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇಧದ ಸಂಗತಿಯಾಗಿದೆ.

ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ದೂಮಪಾನ ಮಾಡುವುದು, ಡ್ರಗ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅಷ್ಟೇಅಲ್ಲದೇ ಈ ದಿನ ಸಮಿಕ್ಷೆಯ ಪ್ರಕಾರ ಗರ್ಭನಿರೋಧಕ ಮಾರಾಟ ಅಧಿಕ ವಾಗುತ್ತಿರುವುದು ಅನೈತಿಕತೆ ಹೆಚ್ಚಾಗುತ್ತಿರುವುದರ ದ್ಯೋತಕವಾಗಿದೆ. ಈ ದಿನ ಹುಡುಗಿಯರನ್ನು ಆಕರ್ಷಿಸಲು ವೇಗದಿಂದ ವಾಹನ ಓಡಿಸುವುದು ಮುಂತಾದ ದುರ್ಘಟನೆಗಳ ಪ್ರಮಾಣವು ಹೆಚ್ಚಾಗುತ್ತಿದೆ. ಈ ವ್ಯಾಲೆಂಟೈನ್ ದಿನದ ಕಾರಣ ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತವರಣ ಹಾಳಾಗುವುದರ ಜೊತೆಗೆ ಕಾನೂನು ಸುವ್ಯಸ್ಥೆಯ ಪ್ರಶ್ನೆಯು ನಿರ್ಮಾಣವಾಗುವ ಬೋಗವಾಧಿ ವೃತ್ತಿಯು ಹೆಚ್ಚಾಗಿ, ಸರಕಾರದ ಮೇಲೆ ಹೆಚ್ಚುವರಿ ಒತ್ತಡ ನಿರ್ಮಾಣವಾಗುತ್ತದೆ. ಇದನ್ನು ತಡೆಯಲು ಅನೇಕ ಸಮಾಜ ಸೇವಾ ಸಂಘನೆಗಳು ಪ್ರೇಮಿಗಳ ದಿನದ ವಿರುದ್ಧ ಜನಜಾಗೃತಿ ಅಬಿಯಾನ ಮಾಡುವುದು, ಅದನ್ನು ತಡೆಯಲು ಅದಕ್ಕೆ ಪರ್ಯಾಯವಾಗಿ ಫೆಬ್ರವರಿ 14 ರಂದು ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಆಯೋಜನೆ ಮಾಡುತ್ತಿವೆ. ಶಾಲಾ-ಕಾಲೇಜುಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಾತೃ-ಪಿತೃಗಳನ್ನು ಸೇರಿಸಿ ಈ ದಿನವನ್ನು ಆಚರಿಸುತ್ತಾರೆ.

ಇಂದು ದೇಶದಲ್ಲಿ ವೃದ್ದರನ್ನು ಕಡೆಗಣಿಸುವ ಅವರನ್ನು ವಯಸ್ಕರಾದ ಮೇಲೆ ಅವರ ಪಾಲನೆ-ಪೋಷಣೆ ಮಾಡದಿರುವ ಈ ಕೆಟ್ಟ ರೂಡಿಯೂ ಹೆಚ್ಚಾಗಿ ಸರಕಾರದ ಮೇಲೆ ಇದೊಂದು ಬಹುದೊಡ್ಡ ಸಾಮಾಜಿಕ ಪೀಡುಗಾಗಿ ಕಾಣುತ್ತಿರುವುದು ಗಮನಕ್ಕೆ ಬರುತ್ತಿದೆ. ಇದನ್ನು ದೂರ ಮಾಡಲು ಚಿಕ್ಕ ಮಕ್ಕಳಿಗೆ ಮಾತೃ-ಪಿತೃ ಪೂಜನೀಯ ದಿನ ತಂದೆ-ತಾಯಿಯವರನ್ನು ಗೌರವದಿಂದ ಕಾಣಲು ಪರಿಹಾರವಾಗುವುದು. ಈ ದಿಶೆಯಿಂದ ಛತ್ತಿಸಗಡ ಸರಕಾರವು ಸರಕಾರದ ಸ್ಥರದಲ್ಲಿ ಮಾತೃ-ಪಿತೃ ಪೂಜನೀಯ ದಿನ ಆಚರಿಸಲು ನಿರ್ಣಯ ತೆಗೆದುಕೊಂಡಿದೆ.

ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ : 

ವ್ಯಾಲೆಂಟೈನ್ ದಿನದಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ- ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವವರ ಮೇಲೆ, ವೇಗದಿಂದ ವಾಹನ ಓಡಿಸುವವರ ಮೇಲೆ ಕ್ರಮ ಜರುಗಿಸುವುದು 2. ಪ್ರೇಮಿಗಳ ದಿನದಂದು ನಡೆಯುವ ತಪ್ಪು ಪ್ರಕಾರಗಳನ್ನು ಗಮನದಲ್ಲಿರಿಸಿ ಶಾಲಾ-ಪ್ರಾಚಾರ್ಯರ ಬೈಠೆಕ್ ತೆಗೆದುಕೊಂಡು ಅವರಿಗೆ ಮಾತೃಪಿತೃ ಪೂಜನೀಯ ದಿನ ಆಚರಿಸಲು ಈ ನಿಮಿತ್ತ ಲಿಖಿತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ನೀಡುವ ವೇಳೆ ಧರ್ಮಪ್ರೇಮಿಗಳಾದ ಶ್ರೀ. ಮಧುಸೂಧನ್ ಅಯ್ಯರ್, ಶ್ರೀ. ಲೋಕೇಶ್ ಕುತ್ತಾರ್, ಶ್ರೀ. ಸತೀಶ್,  ಶ್ರೀ. ಧರ್ಮೇಂದ್ರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಉಪೇಂದ್ರ ಆಚಾರ್ಯ, ಕು. ರೇವತಿ ಮೊಗೇರ, ಸೌ. ಲೀಲಾ ನಾಯಕ್, ಶ್ರೀ. ಪ್ರಭಾಕರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.


Spread the love