ಶಿಕ್ಷಣ ಕ್ಷೇತ್ರಕ್ಕೆ ಆರ್.ಎನ್. ಭಿಡೆ ಅವರ ಸೇವೆ-ಸಾಧನೆ ಶ್ಲಾಘನೀಯ

Spread the love

ಶಿಕ್ಷಣ ಕ್ಷೇತ್ರಕ್ಕೆ ಆರ್.ಎನ್. ಭಿಡೆ ಅವರ ಸೇವೆ-ಸಾಧನೆ ಶ್ಲಾಘನೀಯ

ಉಜಿರೆ: ಅತಿ ಸಾಮಾನ್ಯ ವ್ಯಕ್ತಿಯಾಗಿದ್ದ ಆರ್.ಎನ್. ಭಿಡೆ ಅವರು ಜ್ಞಾನಾರ್ಜನೆ ಮತ್ತು ಸಂಶೋಧನೆಗಾಗಿ ಉನ್ನತ ಸಾಧನೆ ಮಾಡಿ ಪಡೆದ ಯಶಸ್ಸು ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದರು.

ಉಜಿರೆಯಲ್ಲಿ ಎಸ್.ಡಿ.ಎಂ. ಸೆಕೆಂಡರಿ ಶಾಲೆಯಲ್ಲಿ ಸ್ಥಾಪಕ ಮುಖ್ಯೋಪಾಧ್ಯಾಯರಾದ ಆರ್.ಎನ್. ಭಿಡೆ ಜನ್ಮ ಶತಮಾನೋತ್ಸವ ಆಚರಣೆಯ ಅಂಗವಾಗಿ ಶನಿವಾರ ಆಯೋಜಿಸಲಾದ ಬೆಳ್ತಂಗಡಿ ತಾಲ್ಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಋಷಿ ಸದೃಶ ಜೀವನ ನಡೆಸಿದ ಭಿಡೆಯವರು ತಮ್ಮ ಬದುಕನ್ನೆ ಶಿಕ್ಷಣಕ್ಕಾಗಿ ಸಮರ್ಪಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಮಂಜುನಾಥ್ ನಾಯಕ್ ಅವರನ್ನು ಡಾ. ಬಿ. ಯಶೋವರ್ಮ ಭಿಡೆ ಕುಟುಂಬಸ್ಥರ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು.

ಕವಿಗೋಷ್ಠಿ: ಪ್ರೊ. ನಾ’ವುಜಿರೆ, ಪ್ರೊ. ಎನ್. ಜಿ. ಪಟವರ್ಧನ್, ನಿವೃತ್ತ ಪ್ರಾಂಶುಪಾಲ ವೀರೇಶ್ವರ ಫಡ್ಕೆ , ಮುಂಡಾಜೆ, ಡಾ. ಇ. ಮಹಾಬಲ ಭಟ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಕೆ.ಆರ್. ರೈ ಅವರು ಆರ್.ಎನ್. ಭಿಡೆ ಜೀವನ-ಸಾಧನೆ ಬಗ್ಯೆ ಸ್ವರಚಿತ ಕವನ ವಾಚಿಸಿದರು.

ಹೇಮಂತ ಭಿಡೆ ಸ್ವಾಗತಿಸಿದರು. ಶ್ರೀಧರ ಜಿ. ಭಿಡೆ ಧನ್ಯವಾದವಿತ್ತರು. ಆರ್.ಯನ್. ಪೂವಣಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಛಾಯಾ ಹೆಬ್ಬಾರ್, ಡಾ. ಸವಿತಾ ಪ್ರಭಾಕರ್, ಮಾಲತಿ ಬಾಪಟ್ ಮತ್ತು ಶರಶ್ಚಂದ್ರ ಭಿಡೆ ಉಪಸ್ಥಿತರಿದ್ದರು.


Spread the love