ಶಿರ್ವ ಡೊನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಇಂಟರ್ಯಾಕ್ಟ್ ಪದಗ್ರಹಣ

Spread the love

ಶಿರ್ವ ಡೊನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಇಂಟರ್ಯಾಕ್ಟ್ ಪದಗ್ರಹಣ
ಶಿರ್ವ : ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜ್ಞಾವಂತ ನಾಗರಿಕರು, ಎಳವೆಯಲ್ಲಿಯೇ ಸಮಾಜಮುಖಿ ನಾಯಕತ್ವ ತರಬೇತಿಯನ್ನು ಪಡೆದುಕೊಂಡು ಆದರ್ಶ ಸಮಾಜದ ಜವಬ್ದಾರಿಯುತ ಪ್ರಜೆಯಾಗಲು ಶಾಲೆಯ ವಿವಿಧ ಸಂಘಗಳು ನೈಜ ತರಬೇತಿಯನ್ನು ನೀಡುತ್ತವೆ. ಎಂದು ಶಿರ್ವ ರೋಟರಿ ಅಧ್ಯಕ್ಷ ಡಾ|ಅರುಣ್ ಹೆಗ್ಡೆ ಹೇಳಿದರು.

image001don-bosco-english-school-shirva image003don-bosco-english-school-shirva image004don-bosco-english-school-shirva image005don-bosco-english-school-shirva image006don-bosco-english-school-shirva

ಅವರು ಶಿರ್ವ ಡೊನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಇಂಟರ್ಯಾಕ್ಟ್ ಪದಗ್ರಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೋಟರಿ ಶಿರ್ವದ ಮಾಜಿ ಅಧ್ಯಕ್ಷ ರೊ| ವಿಲಿಯಂ ಮಚಾದೊ ಮಾತನಾಡಿ ರೋಟರಿ ಒಂದು ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ಅದರ ಮೂಲ ಪರಿಚಯ ಪಡೆಯಲು ಹೈಸ್ಕೂಲು ಹಂತದಲ್ಲಿ ಇಂಟರ್ಯಾಕ್ಟ್ ಕ್ಲಬ್‍ವಿರುತ್ತದೆ ಎಂದು ಸವಿಸ್ತಾರವಾದ ಮಾಹಿತಿ ನೀಡಿದರು.

ಶಿರ್ವ ಡೊನ್ ಬೋಸ್ಕೊ ಇಂಟರ್ಯಾಕ್ಟ್ ಕ್ಲಬಿನ ಅಧ್ಯಕ್ಷನಾಗಿ ಮಹಮ್ಮದ್ ಆಹಾದ್, ಕಾರ್ಯದರ್ಶಿಯಾಗಿ ಡೆಲೀಶಾ ಕಸ್ತಲಿನೊ, ಖಜಾಂಚಿಯಾಗಿ ನಿಧಿ ಶೆಟ್ಟಿ ಹುದ್ದೆಯನ್ನು ಸ್ವೀಕರಿಸಿದರು. ಶಾಲಾ ಪ್ರಾಂಶುಪಾಲ ರೆ| ಫಾ|ಮಹೇಶ್ ಡಿಸೋಜ ಡೆಂಗು ಜ್ವರದ ಬಗ್ಗೆ ಮಾಹಿತಿವಿರುವ ಕರಪತ್ರವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳು ಸಮಾಜಮುಖಿಯಾಗಲು ಇಂತಹ ಸಂಸ್ಥೆಗಳ ಅಗತ್ಯವಿದೆ ಎಂದು ಹೇಳಿದರು. ಮೆಲ್ವಿನ್ ಡಿಸೋಜ, ಕೆ.ಆರ್.ಪಾಟ್ಕರ್ ಪ್ರೋ| ವಿಠಲ್ ನಾಯಕ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಶಿಕ್ಷಕ ಆಲ್ವಿನ್ ದಾಂತಿ ಸ್ವಾಗತಿಸಿ ನಿರೂಪಿಸಿದರೆ ಕಾರ್ಯದರ್ಶಿ ಡೆಲೀಶಾ ಕಸ್ತಲಿನೊ ವಂದಿಸಿದರು.


Spread the love