ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರಿಗೆ ಪ್ರತಿಷ್ಠಿತ “ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು” ಪ್ರಶಸ್ತಿ

Spread the love

ಮಂಗಳೂರು: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರು ಮಂಗಳೂರಿಗೆ 2016 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಸಿಎಂಎಐ ಅಸೋಸಿಯೇಶನ್ ಇವರ ಜಂಟಿ ನೇತ್ರತ್ವದಲ್ಲಿ ಆಯೋಜಿಸಲಾದ 2ನೇ ರಾಷ್ಟ್ರೀಯ ಕರ್ನಾಟಕ ಶಿಕ್ಷಣ ಶೃಂಗ ಸಭೆಯಲ್ಲಿ “ಎಕ್ಸಲೆಂಟ್ ಇಂಜಿನಿಯರಿಂಗ್ ಕಾಲೇಜು ಇನ್ ಕರ್ನಾಟಕ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸಿ ಪ್ರದಾನ ಸಮಾರಂಭವು ದಿನಾಂಕ ಮಾರ್ಚ್ 14ರಂದು ಬೆಂಗಳೂರಿನ ಸಮೀಪದ ಮುದ್ದೇನಹಳ್ಳಿಯಲ್ಲಿ ಸ್ಥಾಪಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್‍ನಲ್ಲಿ ನಡೆಯಿತು.  ಸಮಾರಂಭದಲ್ಲಿ ಕರ್ನಾಟಕ ಸರಕಾರದ ದೊಡ್ಡ ಮತ್ತು ಮಧ್ಯಮ ಪ್ರಮಾಣ ಕೈಗಾರಿಕ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಆರ್.ವಿ.ದೇಶಪಾಂಡೆ, ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಮುಖ್ಯ ಅತಿಥಿಗಳಾಗಿದ್ದರು.

image001sdit-excellent-engg-college-award-20160319-001

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಡಾ.ಕೆ. ಸುಧಾಕರ್‍ರವರು ಗೌರವ ಅತಿಥಿಗಳಾಗಿದ್ದು,  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಉಪಕುಲಪತಿಗಳಾದ ಡಾ.ಎಚ್. ಮಹೇಶಪ್ಪರವರು ಅಧ್ಯಕ್ಷತೆ ವಹಿಸಿದ್ದರು. ಸಿಎಂಎಐ ಅಸೋಸಿಯೇಶನ್‍ನ ಅಧ್ಯಕ್ಷರಾದ ಶ್ರೀ ಎನ್.ಕೆ. ಗೋಯಲ್ ಹಾಗೂ ತಾಂತ್ರಿಕ ಸಲಹೆಗಾರ ಹಾಗೂ ವಿಶೇಷಾಧಿಕಾರಿಗಳಾದ ಶ್ರೀ ಟಿ. ಭಾಸ್ಕರ್ ರವರು ಉಪಸ್ಥಿತರಿದ್ದರು.

ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಎ.ಸದಾನಂದ ಶೆಟ್ಟಿ, ಉಪಾಧ್ಯಾಕ್ಷರಾದ ಶ್ರೀ ನಿಧೀಶ್ ಎಸ್. ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಡಾ.ದಿಲೀಪ್ ಕುಮಾರ್ ಕೆ, ಇವರುಗಳು ಸಚಿವರಾದ ಶ್ರೀ ಆರ್.ವಿ.ದೇಶಪಾಂಡೆ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ತನ್ನ ಶ್ರೇಷ್ಠತೆ, ಬೋಧನೆ, ಮೂಲ ಸೌಕರ್ಯ ಹಾಗೂ ಉದ್ಯೋಗ ಪ್ರಯತ್ನ ಹಾಗೂ ಇನ್ನಿತರ ವಿವಿಧ ವಿಷಯಗಳಲ್ಲಿನ ಪ್ರಗತಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯವು 2006 ನೇ ಇಸವಿಯಲ್ಲಿ ಸ್ಥಾಪನೆಯಾಗಿ, ಮೊದಲ ಬ್ಯಾಚ್‍ನ ವಿದ್ಯಾರ್ಥಿಗಳು ಶೇ 100 ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದು, ಶೇ 91 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಬಿ.ಇ, ಎಂ.ಬಿ.ಎ., ಎಂ.ಸಿ.ಎ ವಿದ್ಯಾರ್ಥಿಗಳು ಕಾರ್ಪ್‍ರೇಟ್ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ನೇಮಕಾತಿ ಪಡೆಯುವುದರ ಮೂಲಕ ಸಂಸ್ಥೆಯ ಹಿರಿಮೆಯನ್ನು ಮೆರೆದಿದ್ದಾರೆ.  ಸತತ 10 ವರ್ಷಗಳಿಂದ ಸಂಸ್ಥೆಯು ಉದ್ಯೋಗ ನೇಮಕಾತಿಯಲ್ಲಿ ಉತ್ತಮ ಸಾಧನೆಯನ್ನು ಕಾಯ್ದುಕೊಂಡಿದೆ.

ಮಂಗಳೂರಿನ ಪ್ರಶಾಂತ ವಾತಾವರಣದಲ್ಲಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಆಧುನಿಕ ಕಟ್ಟಡಗಳು, ಪ್ರಯೋಗಾಲಯಗಳನ್ನು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಉನ್ನತಿಗೆ ಸೂಕ್ತವಾದ ವಾತಾವರಣವನ್ನು ಹೊಂದಿದೆ. ಸಂಸ್ಥೆಯು ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಪರಿಣಿತಿ ಹೊಂದಿದ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರನ್ನು ಒಳಗೊಂಡಿದೆ.

ಈ ಸಂಸ್ಥೆಯಲ್ಲಿ ಏರೋನಾಟಿಕಲ್, ಸಿವಿಲ್, ಕಂಪ್ಯೂಟರ್ ಸಯನ್ಸ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಶನ್, ಇನ್‍ಫಾರ್ಮೇಶನ್ ಸಯನ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಎಂಬಿಎ, ಎಂಸಿಎ, ಹಾಗೂ ಎಂ.ಟೆಕ್‍ನಲ್ಲಿ ಕಂಪ್ಯೂಟರ್ ಸಯನ್ಸ್, ಕಂಪ್ಯೂಟರ್ ನೆಟ್‍ವರ್ಕ್ಸ್, ವಿ.ಎಲ್.ಎಸ್.ಐ, ಡಿಜಿಟಲ್ ಎಲೆಕ್ಟ್ರಾನಿಕ್ಸ್,  ಕನ್ಸ್ಟ್ರಕ್ಷಶನ್ ಟೆಕ್ನಾಲಜಿ ಮತ್ತು ಇಂಡಸ್ಟ್ರಿಯಲ್ ಅಟೋಮೇಶನ್ ಮತ್ತು ರೋಬೋಟಿಕ್ಸ್ ಪದವಿಗಳಿದ್ದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯು ಫಿಸಿಕ್ಸ್, ಕೆಮೆಸ್ಟ್ರಿ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಸಂಶೋಧನೆ ಕೇಂದ್ರವನ್ನು ಹೊಂದಿದ್ದು, ಈ ಮೂಲಕ ಸಂಶೋಧನೆಗೂ ಉತ್ತೇಜನವನ್ನು ನೀಡುತ್ತಿದೆ.

ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯವು ಸಂಶೋಧನೆ, ಅಭಿವೃದ್ಧಿ, ಶಿಕ್ಷಣ ಮತ್ತು ತರಬೇತಿಯನ್ನು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ಅಮೇರಿಕಾದ ನಾರ್ತ್ ಡಕೋಟಾ ಸ್ಟೇಟ್ ವಿಶ್ವವಿದ್ಯಾಲಯ ಹಾಗೂ ತುಮಕೂರಿನ ಎಸ್.ಐ.ಟಿಯೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಪರಿಣಿತ ಶಿಕ್ಷಕ ವೃಂದ, ಪ್ರತಿಭಾವಂತ ವಿದ್ಯಾರ್ಥಿಗಳ ಸಮುದಾಯ, ಉತ್ಕೃಷ್ಟ ತಾಂತ್ರಿಕ ಮತ್ತು ಕಚೇರಿ ಸಿಬ್ಬಂದಿ ವರ್ಗ, ಉತ್ತಮ ಆಡಳಿತ ಮಂಡಳಿಯ ಕೊಡುಗೆಯ ಪರಿಣಾಮವಾಗಿ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯವು ಸರ್ವೊತ್ಕೃಷ್ಟ ಸ್ಥಿತಿಯನ್ನು ತಲುಪಲು ಸಾಧ್ಯವಾಗಿದೆ.


Spread the love