ಸಂಸ್ಕಾರ ಭಾರತಿ ವತಿಯಿಂದ ಕರಾವಳಿ ಜಿಲ್ಲೆಗಳ ಕಲಾವಿದ ಬಂಧುಗಳ ಚಿಂತನ ಮಂಥನ 

Spread the love

ಸಂಸ್ಕಾರ ಭಾರತಿ ವತಿಯಿಂದ ಕರಾವಳಿ ಜಿಲ್ಲೆಗಳ ಕಲಾವಿದ ಬಂಧುಗಳ ಚಿಂತನ ಮಂಥನ 

ಮಂಗಳೂರು:ಸಂಸ್ಕಾರ ಭಾರತಿ ಮಂಗಳೂರು ವತಿಯಿಂದ ಕರಾವಳಿ ಜಿಲ್ಲೆಗಳ ಕಲಾವಿದ ಬಂಧುಗಳ ಚಿಂತನ ಮಂಥನ ಕಾರ್ಯಕ್ರಮ ಆ.21 ರಂದು ಪೂರ್ವಾಹ್ಣ ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ಕರ್ನಾಟಕ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಮೋಹನ್ ಆಳ್ವರವರ ದಿಕ್ಸೂಚಿ ನುಡಿಗಳೊಂದಿಗೆ ಸಂಪನ್ನಗೊಂಡಿತು.

ವೇದಿಕೆಯಲ್ಲಿ ಅಧ್ಯಕ್ಷ ಅಡ್ಯಾರು ಪುರುಷೋತ್ತಮ ಭಂಡಾರಿ, ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ, ಮಂಗಳಾ ಮ್ಯಾಜಿಕ್ ಸರ್ಕಲ್ ನ ಅಧ್ಯಕ್ಷ ಸ್ವರ್ಣ ಸುಂದರ್ , ಡಾ.ಮೋಹನ್ ಆಳ್ವಾ, ಕ್ಯಾ. ಗಣೇಶ್ ಕಾರ್ಣಿಕ್, ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಂರಕ್ಷಕ ಹಾಗೂ ಯಕ್ಷಗಾನದ ಮೇರು ಕಲಾವಿದ ಕುಂಬ್ಳೆ ಸುಂದರ ರಾವ್ , ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ಕಮಲಾಕ್ಷ ಆಚಾರ್ಯ ಹಾಗೂ ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ ಯವರನ್ನು ಚಿತ್ರದಲ್ಲಿ ಕಾಣಬಹುದು.

ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಲತಾ ನಾಗರಾಜ್ ಪ್ರಾರ್ಥಿಸಿದರು. ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು.

ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಕೆ. ಶೆಟ್ಟಿ ಪ್ರಸ್ತಾವನೆ ಗೈದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದಿಕ್ಸೂಚಿ ನುಡಿಗಳನ್ನಾಡಿದರು. ಪ್ರದೀಪ್ ಕುಮಾರ್ ಕಲ್ಕೂರ, ಎಂ.ಬಿ.ಪುರಾಣಿಕ್, ಕುಂಬ್ಳೆ ಸುಂದರ ರಾವ್ ರವರು ತಮ್ಮ ಮಾರ್ಗದರ್ಶಿ ನುಡಿಗಳಿಂದ ಸಂಸ್ಕಾರ ಭಾರತಿಯ ಪಥಕ್ಕೊಂದು ದಿಶಾದರ್ಶನ ಮಾಡಿದರು.

ಸಂಸ್ಕಾರ ಚಿಂತನ ಮಂಥನ ಸಂವಾದ ಕಾರ್ಯಕ್ರಮದಲ್ಲಿ ಕರಾವಳಿ ಜಿಲ್ಲೆಗಳ ಕಲಾವಿದ/ಕಲಾ ಸಂಘಟಕ ಬಂಧುಗಳಾದ ಚಂದ್ರಶೇಖರ ಸುವರ್ಣ, ಪಂ.ಸಂಜೀವ್, ಕೆ.ವಿ.ರಮಣ್, ದಿನೇಶ್ ಅತ್ತಾವರ್, ಪ್ರದೀಪ್ ಆಳ್ವ, ತೋನ್ಸೆ ಪುಷ್ಕಳ ಕುಮಾರ್, ಲತಾ ನಾಗರಾಜ್, ಸೌಮ್ಯ ಸುಧೀಂದ್ರ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕುಂಬ್ಳೆ ಸುಂದರ ರಾವ್, ಕಮಲಾಕ್ಷ ಆಚಾರ್ಯ, ಸ್ವರ್ಣ ಸುಂದರ್, ಮಹಾಬಲ ಶೆಟ್ಟಿ, ಗಿರೀಶ್ ನಾವಡ ಮೊದಲಾದವರು ಭಾಗಿಯಾದರು.

ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಧನಪಾಲ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ, ಖಜಾಂಚಿ ರಘುವೀರ್ ಗಟ್ಟಿ ಸಹಕರಿಸಿದರು. ದಯಾನಂದ ಕತ್ತಲ್ ಸಾರ್ ವಂದಿಸಿದರು


Spread the love