ಸಚಿವ ಸೊರಕೆಯವರಿಂದ 3.26 ಕೋಟಿ ಮೊತ್ತದ ಪದವು-ಕಲ್ಲೋಟ್ಟು ರಸ್ತೆ ಉದ್ಘಾಟನೆ

Spread the love

ಉಡುಪಿ: ಶಿರ್ವ ಗ್ರಾಮ ಪಂಚಾಯತ್‍ನ ಶಿರ್ವ ಪದವಿನಿಂದ ಕಲ್ಲೋಟ್ಟು ವರೆಗಿನ 3.26 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಉದ್ಘಾಟಿಸಿದರು.

image007sorake-devlopment-works-20160519

ನಂತರ ಮಾತನಾಡಿದ ಅವರು ತಮ್ಮ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಒತ್ತು ನೀಡಿದ್ದು, ಕಾಮಗಾರಿಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
8 ಲಕ್ಷ ರೂ ಮೊತ್ತದ ನಡಿಬೆಟ್ಟು ಕೊಪ್ಪ ಪರಿಶಿಷ್ಠ ಜಾತಿ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, 8 ಲಕ್ಷ ರೂ ಮೊತ್ತದ ಶಿರ್ವ ಬಂಟಕಲ್ಲು ಪ.ಪಂಗಡ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ, 6 ಲಕ್ಷ ಮೊತ್ತದ ಮಟ್ಟಾರು ಪ.ಪಂಗಡ ಕಾಲನಿ ರಸ್ತೆ ಅಭಿವೃದ್ಧಿ, 6 ಲಕ್ಷ ಮೊತ್ತದ ತೆಂಕರಪಲ್ಕೆ ಹರಿಜನ ಕೇರಿ ರಸ್ತೆ ಅಭಿವೃದ್ಧಿ, 6 ಲಕ್ಷ ಮೊತ್ತದ ಮುಗ್ಗರ್ಕೆಳ ರಸ್ತೆ ಅಭಿವೃದ್ಧಿ, 5 ಲಕ್ಷ ಮೊತ್ತದ ತೊಟ್ಲಗುರಿ ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು 3 ಕೋಟಿ 65 ಲಕ್ಷ ರೂ ಮೊತ್ತದ ವಿವಿಧ ಕಾಮಗಾರಿಗೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿರ್ವ ಗ್ರಾ.ಪಂ. ಅಧ್ಯಕ್ಷ ವಾರಿಜಾ ಪೂಜಾರಿ , ಜಿ.ಪಂ. ಸದಸ್ಯ ವಿಲ್ಸನ್ ರೋಡಿಗ್ರಸ್, ತಾ.ಪಂ. ಸದಸ್ಯ ಗೀತಾ ವಾಗ್ಲೆ, ಪಂಚಾಯತ್ ನ ಸದಸ್ಯರು , ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love