ಸರ್ವಜ್ಞ ವಚನ ಜೀವನಕ್ಕೆ ಅನುಭವ – ಕಸ್ತೂರಿ ಪಂಜ  

Spread the love

ಸರ್ವಜ್ಞ ವಚನ ಜೀವನಕ್ಕೆ ಅನುಭವ – ಕಸ್ತೂರಿ ಪಂಜ  

ಮಂಗಳೂರು :- ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿದೆ. ವಚನ ಹಾಗೂ ತನ್ನ ಮಾತಿನ ಮೂಲಕ ಜನತೆಯನ್ನು ಸೆಳೆದ ಕವಿ ಸರ್ವಜ್ಞ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಕುಲಾಲರ/ಕುಂಬಾರರ ಯುವವೇದಿಕೆ, ಕರಾವಳಿ ವಿಭಾಗ ಕರಾವಳಿ ಕುಲಾಲರ ಸಂಘಟನೆಗಳ ಒಕ್ಕೂಟ, ಮಂಗಳೂರು ಇವರ ಸಂಯುಕ್ತ ಆಶ್ರಯದೊಂದಿಗೆ ಫೆಬ್ರವರಿ 20 ರಂದು ಸಿರಿ ಚಾವಡಿ, ತುಳು ಭವನ, ಊರ್ವಸ್ಟೋರ್ ಮಂಗಳೂರಿನಲ್ಲಿ ನಡೆದ 4ನೇ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಯತ್ನ ಸರ್ವಜ್ಞರ ವಚನಗಳ ಮೂಲಕ ನಡೆದಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಮಾಜದ ವ್ಯವಸ್ಥೆ ಗಮನಿಸಿ ಜನರ ಕಷ್ಟ, ಸುಖಗಳನ್ನು ತನ್ನ ವಚನದ ಮೂಲಕ ಎತ್ತಿ ಹಿಡಿದ ಕವಿ ಸರ್ವಜ್ಞರು ಎಂದು ಹೇಳಿದರು.

16 ನೇ ಶತಮಾನದ ಕವಿ, ತ್ರಿಪದಿಗಳ ಸೃಷ್ಟಿಕರ್ತನೇ ಸರ್ವಜ್ಞ ! ಮಣ್ಣನ್ನೇ ಬದುಕಾಗಿಸಿಕೊಂಡು ಜೀವನ ನಿರ್ವಹಿಸಿದ ಇವರು ತಮ್ಮ ತ್ರಿಪದಿಗಳ ಮೂಲಕ ಇಂದಿಗೂ ಜನಮಾನಸದಲ್ಲಿದ್ದಾರೆ. ಎಂದು ನಿವೃತ್ತ ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಡಾ ಕೆ ಜನಾರ್ಧನ್ ಹೇಳಿದರು.

ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಇವರು ಸರ್ವಜ್ಞರು ಕರ್ನಾಟಕದ ಸಾಂಸ್ಕøತಿಕ ಮತ್ತು ಸಾಹಿತ್ಯ ಜಗತ್ತಿನ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರ್ವಜ್ಞರ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಪಾರ ಕೊಡುಗೆಯಾಗಿದೆ. ಹಾಗೂ ತ್ರಿಪದಿಯಲ್ಲಿ ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಸರ್ವಜ್ಷರು ಕವಿಯಷ್ಟೇ ಅಲ್ಲ ಸಂತರಾಗಿ ಬದುಕನ್ನು ಸರಳತೆಯೆಡೆಗೆ ಕೊಂಡೊಯ್ದ ಮಹಾಪುರುಷ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ (ರಿ) ಬೆಂಗಳೂರು ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಇನ್ನಿತರರು ಉಪಸ್ಥತರಿದ್ದರು.
`


Spread the love