ಸಾಮಾಜಿಕ ಜಾಲತಾಣಗಳಲ್ಲಿ ಸ್ವಂತ ವಿಷಯ ಹಾಕುವಾಗ ಎಚ್ಚರ ವಹಿಸಿ ; ಎಸ್ಪಿ ಅಣ್ಣಾಮಲೈ

Spread the love

ಸಾಮಾಜಿಕ ಜಾಲತಾಣಗಳಲ್ಲಿ ಸ್ವಂತ ವಿಷಯ ಹಾಕುವಾಗ ಎಚ್ಚರ ವಹಿಸಿ ; ಎಸ್ಪಿ ಅಣ್ಣಾಮಲೈ

ಕುಂದಾಪುರ: ಸ್ವಂತ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವಾಗ ಎಚ್ಚರ ವಹಿಸದಿದ್ದರೆ ಮುಂದೆ ಸಮಸ್ಯೆಯನ್ನು ತಂದೊಡ್ಡುವದು ಗ್ಯಾರಂಟಿ. ನೂತನ ತಂತ್ರಜ್ಞಾನ ಬಳಕೆಯಲ್ಲಿ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಎಚ್ಚರಿಸಿದರು.

ಅವರು ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಟೂನ್ ಹಬ್ಬದ ಕಾರ್ಯಕ್ರಮದಲ್ಲಿ ಸೈಬರ್ ಖದರ್ ವಿಷಯದ ಮೇಲೆ ಮಾತನಾಡುತ್ತಿದ್ದರು.

ಇಂದು ಕೈಯಲ್ಲಿರುವ ಮೊಬೈಲ್ ಕಂಪ್ಯೂಟರ್ ಆಗಿ ಬದಲಾಗುತ್ತಿದೆ. ಇಡೀ ವಿಶ್ವವನ್ನು ನಮ್ಮ ಕೈಯಲ್ಲಿ ತಂದು ನಿಲ್ಲಿಸುವ ಶಕ್ತಿಯಿದೆ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಮೊಬೈಲ್ ಕೂಡ ಅಟಂ ಬಾಂಬ್ ಆಗುತ್ತದೆ. ಮೊಬೈಲಿನಿಂದ ಇಂದು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮೊಬೈಲ್ ನಿಂದಾಗಿ ನಮ್ಮ ಖಾಸಗಿ ಬದುಕಿನ ಕ್ಷಣವನ್ನು ಸಾಮಾಜಿಕವಾಗಿ ಬೆತ್ತಲೆಗೊಳಿಸುತ್ತದೆ. ಮೊಬೈಲ್ ಮೂಲಕ ನಮ್ಮ ಪ್ರತಿದಿನದ ಪ್ರತಿ ಕ್ಷಣವನ್ನು ಟ್ರಾಕ್ ಮಾಡಲು ಸಾಧ್ಯವಿದ್ದು ಇನ್ನು ಹತ್ತು ವರ್ಷಗಳಲ್ಲಿ ನಮ್ಮ ಬದುಕು ಬಿಗ್ ಡಾಟಾಗೆ ಒಗ್ಗಿಕೊಂಡು ತಂತ್ರಜ್ಞಾನದೊಂದಿಗೆ ಬದುಕಬೇಕಾದ ಅನಿವಾರ್ಯತೆ ಬರಲಿದೆ ಎಂದರು.

ಪ್ರೈವಸಿ ಎನ್ನುವುದು ನಮ್ಮ ಕೈಯಲ್ಲಿರುವ ವಸ್ತುವಾಗಿದ್ದು ಅದನ್ನು ಕಾಪಾಡಿಕೊಳ್ಳುವ ಎಚ್ಚರಿಕೆ ನಮ್ಮಲ್ಲಿ ಇರಬೇಕು. ತಂತ್ರಜ್ಞಾನದ ಬಗೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಿತ್ರ ವೀಡಿಯೋಗಳ ನೈಜತೆ ಅರಿತು ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯತೆ ಇದೆ. ಕೈಯಲ್ಲಿರುವ ಮೊಬೈಲ್ ಕೇವಲ ಫೋನ್ ಆಗಿ ಉಳಿಯದೆ ಮೊಬೈಲ್ ಆಟಮ್ ಬಾಂಬ್ ಆಗಿ ಪರಿವರ್ತನೆಯಾಗಿದೆ ಎಂದರು.

ದೇಶದಲ್ಲಿ ಎಲ್ಲರಿಗೂ ಮಾತನಾಡುವ ಅಭಿವ್ಯಕ್ತಿ ಸ್ವಾತ್ರಂತ್ಯವಿದ್ದು ಅದಕ್ಕೆ ವಿರೋಧೀಸುವ ಹಕ್ಕು ಕೂಡ ಇದೆ. ಕೆಲವೊಮ್ಮೆ ಕೆಲವೊಂದು ವಿಷಯಗಳನ್ನು ಒಪ್ಪಿಕೊಳ್ಳುವುದಕ್ಕೆ ತಯಾರಾಗದೆ ಇದ್ದಾರೆ ಇದು ಗಲಭೆಗೆ ದಾರಿ ಮಾಡಿಕೊಡುತ್ತದೆ. ಇಂದಿನ ಏಳು ನಿಮಿಷದಲ್ಲಿ ಆಗುತ್ತಿದ್ದ ಡಾಟಾ ವರ್ಗಾವಣೆ ನೂರು ವರ್ಷದ ಹಿಂದೆ ವರ್ಗಾವಣೆ ಆಗಲು 35 ವರ್ಷ ಬೇಕಾಗುತ್ತಿತ್ತು. ಅಷ್ಟು ವೇಗದಲ್ಲಿ ಜಗತ್ತು ಸಾಗುತ್ತಿದೆ. ಒಂದು ಗಂಟೆಯಲ್ಲಿ ವಿಶ್ವದಲ್ಲಿ 1.1 ಟ್ರಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡುತ್ತಿದ್ದೇವೆ. ಕಾರ್ಟೂನು ಮುಖಾಂತರ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿಶೇಷವಾಗಿ ಸೈಬರ್ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಡಾ. ಅರುಲ್ ಕುಮಾರ್ ಕಾರ್ಟೂನಿಷ್ಠ್ ಸತೀಶ್ ಆಚಾರ್ಯ ಅವರ ವೆಬ್ಸೈಟ್ ಉದ್ಘಾಟಿಸಿದರು. ಪತ್ರಕರ್ತ  ಅಮಿತ್ ಉಪಾದ್ಯೆ, ಡಾ. ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜ್ ಪ್ರಾಂಶುಪಾಲ ದೋಮ ಚಂದ್ರಶೇಖರ್ ಉಪಸ್ಥಿತರಿದ್ದರು.

ವ್ಯಂಗ್ಯಚಿತ್ರಕಾರ ದಿನೇಶ್ ಸಿ ಹೊಳ್ಳ ಅವರನ್ನು ಗೌರವಿಸಲಾಯಿತು. ಕಾರ್ಟೂನಿಷ್ಠ್ ಜೀವನ್ ಶೆಟ್ಟಿ ಹಾಗೂ ಚಂದ್ರಶೇಖರ್ ಶೆಟ್ಟಿ ಲೈವ್ ಕಾರ್ಟೂನಿಂಗ್ ಮಾಡಿದರು.

ಕಾರ್ಟೂನಿಷ್ಠ್ ಸತೀಶ್ ಆಚಾರ್ಯ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.


Spread the love