ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಕುರಿತು ಅವಹೇಳನ; ಮನವಿ ಸಲ್ಲಿಕೆ

Spread the love

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಕುರಿತು ಅವಹೇಳನ; ಮನವಿ ಸಲ್ಲಿಕೆ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಕಟೀಲು ದುರ್ಗಾಪರಮೇಶ್ವರಿ ಬಗ್ಗೆ ಅವಹೇಳನ ಮಾಡಿದ ಕುರಿತು ಹಿಂದೂ ಜಾಗರಣ ವೇದಿಕೆ ಸದಸ್ಯರು ನಗರ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಅಗೋಸ್ತ್ 29ರಂದು ಜಬ್ಬಾರ ಎನ್ನುವ ವ್ಯಕ್ತಿ ಕಟೀಲು ದುರ್ಗಾಪರಮೇಶ್ವರಿ ದೇವಿ ಹಾಗೂ ಹಿಂದೂ ಧರ್ಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆದಿದ್ದರು ಎನ್ನಲಾಗಿದೆ.

image001hjv-memorandum-20160830-001 image002hjv-memorandum-20160830-002 image003hjv-memorandum-20160830-003 image004hjv-memorandum-20160830-004 image005hjv-memorandum-20160830-005 image006hjv-memorandum-20160830-006 image007hjv-memorandum-20160830-007 image008hjv-memorandum-20160830-008

ಈ ಕುರಿತು ಮಾತನಾಡಿದ ನ್ಯಾಯವಾದಿ ಮೋಹನ್ ದಾಸ್ ರೈ ಅವರು ಅಗೋಸ್ತ್ 29 ರಂದು ಫೇಸ್ ಬುಕ್ ಮತ್ತು ವಾಟ್ಸ್ಯಾಪ್ ನಲ್ಲಿ ಒರ್ವ ಮಾನಸಿಕ ಸ್ಥಿಮಿತ ಕಳೆದು ಕೊಂಡ ವ್ಯಕ್ತಿಯೋರ್ವ ಹಿಂದು ಧರ್ಮದ ಕುರಿತು ಅವಹೇಳನಕಾರಿಯಾಗಿ ಬರೆದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಈ ಕುರಿತು ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದು ಅಂತಹ ವ್ಯಕ್ತಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳವಂತೆ ವಿನಂತಿಸಲಾಗಿದೆ. ಅಲ್ಲದೆ 10 ಪೋಲಿಸ್ ಠಾಣೆಗಳಲ್ಲಿ ಆತನ ವಿರುದ್ದ ದೂರನ್ನು ಕೂಡ ನೀಡಲಾಗಿದೆ.

ಹಿಂದು ಜಾಗರಣ ವೇದಿಕೆಯ ಪುಷ್ಪರಾಜ್ ಹರೀಶ್ ಅಮ್ಟಾಡಿ, ಶರತ್ ಪದವಿನಂಗಡಿ, ಹರೀಶ್ ಜೋಗಿಮತ್ ಪ್ರಸಾದ್ ಉಪಸ್ಥಿತರಿದ್ದರು.

ಬಳಿಕ ಕರಾವಳಿ ಸಾಂಸ್ಕ್ರತಿಕ ಪರಿಷತ್ ಉಳ್ಳಾಲ ಸದಸ್ಯರು ಕೂಡ ಪೋಲಿಸ್ ಆಯುಕ್ತರಿಗೆ ಈ ಮೇಲಿನ ವಿಷಯದ ಕುರಿತು ಮನವಿ ಸಲ್ಲಿಸದರು.

ನಗರ ಪೋಲಿಸರು ಅವಹೇಳನಕಾರಿಯಾಗಿ ಬರೆದ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


Spread the love

1 Comment

  1. This is a slippery slope. We can’t censor speech just because it hurts ‘sentiments’. In a free society, one has the right to mock any god/goddess or religious figure. Unfortunately, our media, judiciary and politicians have failed us by giving into special demands by one minority group. Let alone derogatory things, you can’t even draw a simple picture or cartoon of a religious figure. No stenographer has the courage to publish them either. This has encouraged bad behavior from other groups as well. In the name of ‘religious sentiments’ and ‘hate speech’, our stenographers and policy makers are pushing us more and more towards ‘Saudi’ model. Congratulations!!!! Job well done!!

Comments are closed.