ಸಾರ್ವಜನಿಕರೊಂದಿಗೆ ಪೋಲಿಸ್ ನೇರ ಫೋನ್ ಇನ್ , ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕ್ರಮ

Spread the love

ಸಾರ್ವಜನಿಕರೊಂದಿಗೆ ಪೋಲಿಸ್ ನೇರ ಫೋನ್ ಇನ್ , ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕ್ರಮ

ಮಂಗಳೂರು: ನಗರದ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಪ ಪೊಲೀಸ್ ಆಯುಕ್ತರು, (ಅಪರಾಧ ಮತ್ತು ಸಂಚಾರ), ಮಂಗಳೂರು ನಗರ ರವರು ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಶುಕ್ರವಾರ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಒಟ್ಟು 17 ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆ, ಸಲಹೆ, ಭಾತ್ಮಿ ಗಳಿಗೆ ಸ್ಪಂದಿಸಲಾಯಿತು. ಇವುಗಳಲ್ಲಿ ಹೆಚ್ಚಿನವು ಟ್ರಾಫಿಕ್ ಸಮಸ್ಯೆಗೆ ಸಂಬಂಧಪಟ್ಟದಾಗಿರುತ್ತದೆ. ಇದರಲ್ಲಿ ಸ್ಟೇಟ್ಬ್ಯಾಂಕ್ ಸಿಟಿ ಬಸ್ಸು ನಿಲ್ಡಾಣದಲ್ಲಿ ಪ್ರಯಾಣಿಕರಿಗೆ ನಿಲ್ಲಲು ಸೂಕ್ತ ಬಸ್ಸು ತಂಗುದಾಣ ಇಲ್ಲದೇ ಇರುವ ಬಗ್ಗೆ, ಹಂಪನಕಟ್ಟೆಯ ಧನ್ಯವಾದ ಹೊಟೇಲ್ನ ಎದುರು ಆಗುವ ಟ್ರಾಫಿಕ್ ಸಮಸ್ಯೆಯ ಬಗ್ಗೆ, ಬಸ್ಸುಗಳನ್ನು ಮಹಿಳೆಯರು ಮುಂದಿನ ಬಾಗಿಲಿನಲ್ಲಿ ಪುರುಷರು ಹಿಂದಿನ ಬಾಗಿಲಿನಲ್ಲಿ ಹತ್ತಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಕೋರಿರುತ್ತಾರೆ.

ಬಿಲ್ಡಿಂಗ್ಗಳಲ್ಲಿ ಸ್ಥಳವನ್ನು ಕಲ್ಪಿಸದೇ, ಬಿಲ್ಡಿಂಗ್ನ ಎದುರು ವಾಹನ ಪಾರ್ಕಿಂಗ್ ಮಾಡಲಾಗಿತ್ತಿದ್ದು, ಇದರಿಂದ ನಗರದಲ್ಲಿ ವಾಹನದ ಪಾರ್ಕಿಂಗ್ ಸಮಸ್ಯೆಯಾಗುತ್ತಿರುವ ಬಗ್ಗೆ, ಅಂಗಡಿಗಳ ಮುಂದೆ ಹಾಕಲಾದ ಅನಧಿಕೃತ ನೋ ಪಾರ್ಕಿಂಗ್ ಬೋರ್ಡ್ನ್ನು ತೆಗೆಸುವ ಬಗ್ಗೆ, ವಿರುದ್ದ ದಿಕ್ಕಿನಲ್ಲಿ ಚಾಲಿಸುವ ವಾಹನಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ, ಸುರತ್ಕಲ್ನಲ್ಲಿ ಸುಸಜ್ಜಿತ ರಿಕ್ಷಾ ನಿಲ್ಡಾಣವನ್ನು ನಿರ್ಮಿಸುವ ಬಗ್ಗೆ ಮತ್ತು ರಸ್ತೆಗಳು ಕೆಟ್ಟು ಹೋಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದು, ಇದನ್ನು ಸರಿಪಡಿಸಿಲು ಸಂಬಂಧಿಸಿದ ಇಲಾಖೆಗೆ ಸಂಪರ್ಕಿಸುವಂತೆ ಮನವಿ ಮಾಡಿರುತ್ತಾರೆ.

ಬೆಂದೂರುವೆಲ್ನಲ್ಲಿ ಬಸ್ಸುಗಳನ್ನು ರಸ್ತೆ ಮದ್ಯದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿರುವ ಬಗ್ಗೆ, ಬಸ್ಸುಗಳಲ್ಲಿ ಕರ್ಕಶ ಹಾರ್ನ್ನ್ನು ಬಳಸುವ ವಿರುದ್ದ ಕ್ರಮ ಕೈಗೊಳ್ಳುವ ಕುರಿತು, ಹಿರಿಯ ನಾಗರಿಕರಿಗೆ ಬಸ್ಸುಗಳನ್ನು ಸೀಟುಗಳನ್ನು ನೀಡುವ ಕುರಿತು ಪರಿಣಾಮಕಾರಿಯಾಗಿ ಜ್ಯಾರಿಗೆ ಬರುವಂತೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ, ಸಿಗ್ನಲ್ಗಳಲ್ಲಿ ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸದೇ ಮುಂದಕ್ಕೆ ಬಂದು ನಿಲ್ಲಿಸುವ ವಾಹನಗಳ ವಿರುದ್ದ ಕ್ರಮ ಕೈಗೊಳ್ಳುವಂತೆ, ಮೊಬೈಲ್ ನಲ್ಲಿ ಮಾತನಾಡಿ ವಾಹನ ಚಾಲಯಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಕರೆಗಳನ್ನು ಮಾಡಿರುತ್ತಾರೆ.

ಅದಲ್ಲದೇ ಈಗಾಗಲೇ ದೂರು ದಾಖಲಿಸಿ ಪ್ರಕರಣಗಳ ಪ್ರಸ್ತುತ ಹಂತದ ಬಗ್ಗೆ, ನರೆಮನೆಯವರಿಂದ ಆಗುವ ತೊಂದರೆಯ ಬಗ್ಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿರುತ್ತಾರೆ. ಕರೆ ಮಾಡಿರುವ ಸಾರ್ವಜನಿಕರಿಗೆ ಕರೆಗಳಲ್ಲಿ ಕೆಲವೊಂದು ಸಮಸ್ಯೆಯನ್ನು ಆ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರಿಗೆ ಪೋನ್ ಮೂಲಕ ಸಮಸ್ಯೆಯನ್ನು ತಿಳಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಸೂಕ್ತ ಸೂಚನೆಯನ್ನು ನೀಡಲಾಯಿತು. ಸಾರ್ವಜನಿರು ನೀಡಿದ ಅಹವಾಲು, ಸಲಹೆಯನ್ನು ಸ್ವೀಕರಿಕೊಂಡು ಪಾಲನೆ ಮಾಡಲಾಗುತ್ತಿದ್ದು, ಅಪಘಾತ ಪ್ರಕರಣವೊಂದರಲ್ಲಿ ಉತ್ತರ ಸಂಚಾರ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಉತ್ತಮ ಕರ್ತವ್ಯ ನಿರ್ವಹಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಕ್ಕಾಗಿ ಸ್ವತಃ ಗಾಯಾಳು ವ್ಯಕ್ತಿಯೇ ಕರೆ ಮಾಡಿ ಅವರಿಗೆ ಧನ್ಯವಾದ ತಿಳಿಸಿದರು.


Spread the love